
ನೀವು ನಿಮ್ಮ ತೆರಿಗೆಯ ರೀಫಂಡ್ ಕ್ಲೇಂ ಮಾಡದೇ ಇದ್ದಲ್ಲಿ, ಇದಕ್ಕೆಂದೇ ವಿಶೇಷ ಅವಕಾಶ ನೀಡಲಾಗಿದೆ. ಈ ಮೂಲಕ ನೀವೀಗ ಪ್ರಸಕ್ತ ವಿತ್ತೀಯ ವರ್ಷದಿಂದ ಆರು ವರ್ಷಗಳವರೆಗೂ ತಡವಾದ ರೀಫಂಡ್ ಕ್ಲೇಂ ಮಾಡಬಹುದಾಗಿದೆ.
ಆದಾಯ ತೆರಿಗೆ ರೀಫಂಡ್: ಆದಾಯ ತೆರಿಗೆ ಸ್ಲಾಬ್‌ನಲ್ಲಿ ಬರುವಷ್ಟು ವೇತನ ಪಡೆಯುವ ಯಾವುದೇ ವ್ಯಕ್ತಿ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಫೈಲ್ ಮಾಡಿದ ಬಳಿಕ ಆದಾಯ ತೆರಿಗೆ ರೀಫಂಡ್ ಪ್ರಕ್ರಿಯೆ ಆರಂಭಗೊಳ್ಳುತ್ತದೆ. ಹಾಗಾಗಿ ಸೂಕ್ತ ಅವಧಿಯಲ್ಲಿ ತೆರಿಗೆ ರಿಟರ್ನ್ ಫೈಲ್ ಮಾಡುವುದು ಉತ್ತಮ. ಇಲ್ಲವಾದಲ್ಲಿ ನೀವು ಬಹಳ ಕಷ್ಟ ಪಡಬೇಕಾಗುತ್ತದೆ. ಏಪ್ರಿಲ್ 1ರಿಂದ ಆರಂಭಗೊಂಡಂತೆ, ಐಟಿಆರ್ ಫೈಲಿಂಗ್ ಮಾಡುವಾಗ ತಡವಾದಲ್ಲಿ, ಅದಕ್ಕೆ ಬಡ್ಡಿ ಕೊಡಲಾಗುವುದಿಲ್ಲ. ಒಂದು ವೇಳೆ ನಿಮ್ಮ ರೀಫಂಡ್ 1.5 ಲಕ್ಷ ರೂ.ಗಳಿದ್ದಲ್ಲಿ, ಒಂಬತ್ತು ತಿಂಗಳು ತಡವಾದಲ್ಲಿ, ನಿಮಗೆ ಸ್ವಲ್ಪ ಮಟ್ಟದಲ್ಲಿ ಬಡ್ಡಿ ಕಳೆದುಕೊಳ್ಳಬೇಕಾಗಿ ಬರಬಹುದು.
ಆದಾಯ ತೆರಿಗೆ ಪಾವತಿದಾರರಿಗೆ ಸಿಹಿ ಸುದ್ದಿ
ಇದರೊಂದಿಗೆ, ತೆರಿಗೆದಾರರು ತಡವಾದ ಫೈಲಿಂಗ್‌ಗಾಗಿ 5,000 ರೂ.ಗಳ ಶುಲ್ಕ ಪಾವತಿ ಮಾಡಬೇಕಾಗುತ್ತದೆ, ಹಾಗಾಗಿ ಸೂಕ್ತ ಸಮಯದಲ್ಲಿ ಐಟಿಆರ್ ಫೈಲಿಂಗ್ ಮಾಡುವುದು ಸೂಕ್ತ. ಫೈಲಿಂಗ್ ಮಾಡಿದ ಬಳಿಕ ಅದನ್ನು ಕ್ಲೇಂ ಮಾಡಬೇಕು ಇಲ್ಲವಾದಲ್ಲಿ ಏನಾಗುತ್ತದೆ ಗೊತ್ತೇ?
ಜನರು ಹಿಂದಿನ ವಿತ್ತೀಯ ವರ್ಷದ ತೆರಿಗೆ ರೀಫಂಡ್ ಮಾಡುವುದನ್ನು ತಪ್ಪಿಸಿಕೊಳ್ಳುವುದನ್ನು ನಾವು ಆಗಾಗ ನೋಡುತ್ತಲೇ ಇರುತ್ತೇವೆ. ಇದರ ಬಗ್ಗೆ ಇವರಿಗೆ ಮುಂದಿನ ವಿತ್ತೀಯ ವರ್ಷದಲ್ಲೇ ಅರಿವಿಗೆ ಬರುತ್ತದೆ. ಒಮ್ಮೆ ಡೆಡ್ಲೈನ್ ಕಳೆದು ಹೋದಲ್ಲಿ ನೀವು ಯಾವುದೇ ಕಾರಣಕ್ಕೂ ಅದನ್ನು ಕ್ಲೇಂ ಮಾಡುವುದು ಕಷ್ಟ. ಆದರೆ ಇದಕ್ಕೂ ಒಂದು ವಿಶೇಷ ಸಾಧ್ಯತೆ ಇದೆ – 2001ರ ಮಂಡಳಿ ಸುತ್ತೋಲೆ. ಇಂಥ ಸನ್ನಿವೇಶಗಳಲ್ಲಿ ನೀವು ಪ್ರಸಕ್ತ ವಿತ್ತೀಯ ವರ್ಷದಿಂದ ಆರು ವರ್ಷಗಳವರೆಗೂ ತಡವಾದ ರೀಫಂಡ್ ಕ್ಲೇಂ ಮಾಡಬಹುದಾಗಿದೆ. ಇದರೊಂದಿಗೆ, ಇಂಥ ಪ್ರಕರಣಗಳಲ್ಲಿ ಕ್ಲೇಂಗಳ ಮೇಲೆ ಬಡ್ಡಿ ಕೊಡಲಾಗುವುದಿಲ್ಲ.
ಆದರೆ ಈ ಸಂಬಂಧ ಅನೇಕ ನಿಯಮಗಳಿದ್ದು, ಆದಾಯ ತೆರಿಗೆ ಮುಖ್ಯ ಆಯುಕ್ತರನ್ನು (ಸಿಐಟಿ) ಸಂಪರ್ಕಿಸಬೇಕಾಗುತ್ತದೆ. ಒಂದು ವೇಳೆ ರೀಫಂಡ್ ಮೊತ್ತ ಐದು ಲಕ್ಷಕ್ಕಿಂತ ಹೆಚ್ಚಿದ್ದಲ್ಲಿ, ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಮೊರೆ ಹೋಗಬೇಕಾಗುತ್ತದೆ.