ತೆರಿಗೆ ವಿಶ್ಲೇಷಣೆ ಮಾಡುವ ಸಲುವಾಗಿ ಫಾರಂ 10ಸಿಸಿಬಿ ಭರ್ತಿ ಮಾಡುವ ವೇಳೆ ಮಾಡುವ ಕೆಲವೊಂದು ಸಾಮಾನ್ಯ ತಪ್ಪುಗಳನ್ನು ಆಗದಂತೆ ನೋಡಿಕೊಳ್ಳಲು ಆದಾಯ ತೆರಿಗೆ ಇಲಾಖೆ ಕೆಲವೊಂದು ಸ್ಪಷ್ಟನೆಗಳನ್ನು ಕೊಟ್ಟಿದೆ.
ಅರ್ಜಿ 10ಸಿಸಿಬಿಯನ್ನು ಭರ್ತಿ ಮಾಡಿ, “My CA” ಆಯ್ಕೆ ಮೂಲಕ ಸಲ್ಲಿಸಿದ ಬಳಿಕ ತೆರಿಗೆದಾರರು ಅರ್ಜಿ 10ಸಿಸಿಬಿಯನ್ನು “Worklist” ಆಯ್ಕೆಯ ಅಡಿ ಒಪ್ಪಬಹುದು/ತಿರಸ್ಕರಿಸಬಹುದು.
ಹಿರಿಯ ನಾಗರಿಕರಿಗೆ ನೆಮ್ಮದಿ ಸುದ್ದಿ ನೀಡಿದ ಆದಾಯ ತೆರಿಗೆ ಇಲಾಖೆ
ಒಂದು ವೇಳೆ, ಒಂದೇ ಅಸೆಸ್ಮೆಂಟ್ ವರ್ಷದಲ್ಲಿ ಒಂದಕ್ಕಿಂತ ಹೆಚ್ಚಿನ ಅರ್ಜಿಗಳನ್ನು ಸಿಎ ಸಲ್ಲಿಸಬೇಕಾದಲ್ಲಿ, ತೆರಿಗೆ ಪಾವತಿದಾರರು ಅದೇ ಅರ್ಜಿಯನ್ನು “My CA” ಕ್ರಿಯೆಯ ಮೂಲಕವೇ ಸಲ್ಲಿಸಬೇಕಾಗುತ್ತದೆ. ಸಿಎ ಅಥವಾ ತೆರಿಗೆದಾರರಿಂದ ಕ್ರಮ ತೆಗೆದುಕೊಳ್ಳಬೇಕಾದ ಅರ್ಜಿಗಳನ್ನು ಈ ಆಯ್ಕೆ ಮೂಲಕ ಸಲ್ಲಿಸಲು ಬರುವುದಿಲ್ಲ.
ಒಂದೇ ಅಸೆಸ್ಮೆಂಟ್ ವರ್ಷಕ್ಕೆ ಅರ್ಜಿ 10ಸಿಸಿಬಿಯನ್ನು ತೆರಿಗೆದಾರ ಬೇರೆ ಬೇರೆ ಸಿಎಗಳಿಗೆ ಸಲ್ಲಿಸಬೇಕಾದಲ್ಲಿ, ಈ ಕೆಲಸವನ್ನು “My CA” ಮೂಲಕ ಭಿನ್ನವಾದ ಸಿಎಗೆ ಸಲ್ಲಿಸಬೇಕು.