ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸದೆ ತಪ್ಪಿಸಿಕೊಳ್ಳುವುದು ಇನ್ಮುಂದೆ ಸಾಧ್ಯವಿಲ್ಲ. ಆದಾಯ ತೆರಿಗೆ ಪಾವತಿ ವಿಷ್ಯದಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಳ್ತಿದೆ. ಜುಲೈ 1 ರಿಂದ ಆದಾಯ ತೆರಿಗೆ ಪಾವತಿ ಮಾಡದವರ ಮೇಲೆ ಹೆಚ್ಚಿನ ಟಿಡಿಎಸ್ ಮತ್ತು ಟಿಸಿಎಸ್ ವಿಧಿಸಲಾಗುತ್ತದೆ. ಆದಾಯ ತೆರಿಗೆ ಪಾವತಿಸದೆ ಇರುವವರನ್ನು ಪತ್ತೆ ಹೆಚ್ಚಲು ಇಲಾಖೆ ಹೊಸ ವ್ಯವಸ್ಥೆಯನ್ನು ಸಿದ್ಧಪಡಿಸಿದೆ.
ಎರಡು ಹಣಕಾಸು ವರ್ಷಗಳಲ್ಲಿ ಆದಾಯ ತೆರಿಗೆ ಸಲ್ಲಿಸದವರಿಗೆ ಹೆಚ್ಚಿನ ಟಿಡಿಎಸ್ ಮತ್ತು ಟಿಸಿಎಸ್ ಸಂಗ್ರಹಿಸಲಾಗುವುದು. ಇದು 50,000 ಸಾವಿರಕ್ಕಿಂತ ಹೆಚ್ಚಿರಲಿದೆ. ಕೇಂದ್ರ ನೇರ ತೆರಿಗೆ ಮಂಡಳಿ ಈ ಬಗ್ಗೆ ಸುತ್ತೋಲೆ ಹೊರಡಿಸಿದೆ. ಇದರಲ್ಲಿ ಸೆಕ್ಷನ್ 206 ಎಬಿ ಮತ್ತು 206 ಸಿಸಿಎ ಅಡಿಯಲ್ಲಿ ರಿಟರ್ನ್ಸ್ ಸಲ್ಲಿಸದವರ ಮೇಲೆ ಹೆಚ್ಚಿನ ಟಿಡಿಎಸ್, ಟಿಸಿಎಸ್ ವಿಧಿಸುವುದಾಗಿ ಹೇಳಲಾಗಿದೆ.
ಪಾನ್ ಕಾರ್ಡ್ ನಿಂದ ತೆರಿಗೆದಾರರ ಮಾಹಿತಿ ಸಿಗಲಿದೆ. ಕಳೆದ ಎರಡು ವರ್ಷಗಳನ್ನು 2018-19 ಮತ್ತು 2019-20ರಂತೆ 2021-22ರ ಆರ್ಥಿಕ ವರ್ಷದ ಆರಂಭದಲ್ಲಿ ಆದಾಯ ತೆರಿಗೆ ಇಲಾಖೆ ಪಟ್ಟಿಯನ್ನು ಸಿದ್ಧಪಡಿಸಿದೆ. ಇದ್ರಲ್ಲಿ ತೆರಿಗೆ ರಿಟರ್ನ್ ಸಲ್ಲಿಸದವರ ಹೆಸರಿದೆ.