alex Certify BIG NEWS: ವಿದೇಶದಲ್ಲಿ ಹೊಂದಿರುವ ಸ್ವತ್ತು, ಆದಾಯದ ಬಗ್ಗೆ ಘೋಷಿಸದಿದ್ದರೆ 10 ಲಕ್ಷ ರೂ. ದಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವಿದೇಶದಲ್ಲಿ ಹೊಂದಿರುವ ಸ್ವತ್ತು, ಆದಾಯದ ಬಗ್ಗೆ ಘೋಷಿಸದಿದ್ದರೆ 10 ಲಕ್ಷ ರೂ. ದಂಡ

ನವದೆಹಲಿ: ತೆರಿಗೆ ಪಾವತಿದಾರರು ವಿದೇಶದಲ್ಲಿ ಹೊಂದಿರುವ ಸ್ವತ್ತುಗಳು ಮತ್ತು ಆದಾಯದ ಬಗ್ಗೆ ಘೋಷಿಸಲು ವಿಫಲವಾದಲ್ಲಿ ಅಂತವರಿಗೆ ಕಪ್ಪು ಹಣ ತಡೆ ಕಾಯ್ದೆಯಡಿ 10 ಲಕ್ಷ ರೂಪಾಯಿ ದಂಡ ವಿಧಿಸುವುದಾಗಿ ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ.

2024- 25 ನೇ ಮೌಲ್ಯಮಾಪನ ವರ್ಷದಲ್ಲಿ ಸಲ್ಲಿಸಲಾದ ಐಟಿಆರ್ ಗಳಲ್ಲಿ ವಿದೇಶಿ ಸ್ವತ್ತು ಅಥವಾ ಆದಾಯದ ಕುರಿತಾಗಿ ಘೋಷಣೆ ಮಾಡದಿರುವ ತೆರಿಗೆದಾರರಿಗೆ ಸಂದೇಶ ಕಳಿಸಲು ಅಭಿಯಾನ ಆರಂಭಿಸಲಾಗಿದೆ. ಇದರ ಭಾಗವಾಗಿ ಆದಾಯ ತೆರಿಗೆ ಇಲಾಖೆ ಸಾರ್ವಜನಿಕರಿಗೆ ತಿಳಿವಳಿಕೆ ಮಾಹಿತಿಯನ್ನು ಪ್ರಕಟಿಸಿದೆ.

ವಿದೇಶದಲ್ಲಿ ಬ್ಯಾಂಕ್ ಖಾತೆ, ವಿಮೆ ಒಪ್ಪಂದ, ಕಂಪನಿ ಅಥವಾ ವ್ಯವಹಾರದಲ್ಲಿನ ಬಡ್ಡಿಮ ಸ್ಥಿರಾಸ್ತಿ, ಕಸ್ಟೊಡಿಯಲ್ ಖಾತೆ, ಟ್ರಸ್ಟಿ, ಷೇರು, ಸಾಲ ಪತ್ರಕ್ಕೆ ಲಭಿಸಿದ ಬಡ್ಡಿ ಮೊದಲಾದವುಗಳನ್ನು ವಿದೇಶಿ ಸ್ವತ್ತು ಎಂದು ಪರಿಗಣಿಸಲಾಗುವುದು.

2024- 25 ನೇ ಮೌಲ್ಯಮಾಪನ ವರ್ಷಕ್ಕೆ ಸಂಬಂಧಿಸಿದಂತೆ ವಿಳಂಬ ಮತ್ತು ಪರಿಷ್ಕೃತ ಐಟಿಆರ್ ಸಲ್ಲಿಕೆಗೆ ಡಿಸೆಂಬರ್ 31 ಅಂತಿಮ ದಿನವಾಗಿದೆ. ವಿದೇಶಿ ಆದಾಯ ಘೋಷಿಸದ ತೆರಿಗೆದಾರರಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...