2020-21ರ ವಿತ್ತೀಯ ವರ್ಷದ ಆದಾಯ ತೆರಿಗೆ ಪಾವತಿ ಮಾಡುವ ವೇಳೆ ಸಾಫ್ಟ್‌ವೇರ್ ದೋಷದಿಂದಾಗಿ ಪಾವತಿ ಮಾಡಲಾದ ಅಧಿಕ ಬಡ್ಡಿ ಹಾಗೂ ತಡವಾದ ಪಾವತಿ ಮೇಲೆ ಹೆಚ್ಚುವರಿ ಶುಲ್ಕವನ್ನು ತೆರಿಗೆದಾರರಿಗೆ ಹಿಂದಿರುಗಿಸುವುದಾಗಿ ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ಕಳೆದ ವಿತ್ತೀಯ ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಇದ್ದ ಕಡೆಯ ದಿನಾಂಕವನ್ನು ಜುಲೈ 31ರಿಂದ ಸೆಪ್ಟೆಂಬರ್ 30ಕ್ಕೆ ವಿಸ್ತರಿಸಲಾಗಿದೆ. ಇದರಿಂದ ತಡವಾದ ಪಾವತಿ ಎಂದು ಹೆಚ್ಚುವರಿ ಶುಲ್ಕ ಕಟ್ಟಬೇಕಾಗಿ ಬಂದರೆ ಹೇಗೆ ಎಂದು ಕೆಲ ತೆರಿಗೆದಾರರು ಕೇಳಿದ ಪ್ರಶ್ನೆಗೆ ಇಲಾಖೆಯು ಉತ್ತರಿಸಿದೆ.
BIG BREAKING ಇಸ್ರೋ ಅತ್ಯಾಧುನಿಕ ಜಿಯೋ -ಇಮೇಜಿಂಗ್ ಉಪಗ್ರಹ ಉಡಾವಣೆ
ಸೆಕ್ಷನ್ 234ಎ ಅಡಿ ಅಧಿಕ ಬಡ್ಡಿ ಸಂಗ್ರಹ ಹಾಗೂ 234ಎಫ್ ಅಡಿ ತಡವಾದ ಪಾವತಿಗೆ ಶುಲ್ಕ ಸಂಬಂಧ ಇದ್ದ ತಾಂತ್ರಿಕ ದೋಷವನ್ನು ಆಗಸ್ಟ್ 1ರಂದೇ ಸರಿಪಡಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತನ್ನ ಟ್ವೀಟ್‌ನಲ್ಲಿ ತಿಳಿಸಿದೆ.
“ಐಟಿಆರ್ ತಯಾರಿಕೆಯ ಸಾಫ್ಟ್‌ವೇರ್ ಫರ್ಮ್‌ನ ಇತ್ತೀಚಿನ ವರ್ಶನ್ ಬಳಸಿ ಅಥವಾ ಆನ್ಲೈನ್‌ನಲ್ಲಿ ಫೈಲಿಂಗ್ ಮಾಡಲು ತೆರಿಗೆದಾರರಿಗೆ ಸಲಹೆ ನೀಡುತ್ತೇವೆ. ಒಂದು ವೇಳೆ ಯಾರಾದರೂ ತಪ್ಪಾದ ಬಡ್ಡಿ ದರ ಹಾಗೂ ತಡವಾದ ಶುಲ್ಕ ಪಾವತಿ ಮಾಡಿದ್ದಲ್ಲಿ, ಅದೇ ಮೊತ್ತವನ್ನು ಸರಿಯಾಗಿ ಲೆಕ್ಕಾಚಾರ ಮಾಡಿ, ರೀಫಂಡ್ ಮಾಡಲಾಗುತ್ತದೆ” ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿದೆ.