alex Certify ನಟ ಸೋನು‌ ಸೂದ್ ನಿವಾಸದ ಮೇಲಿನ ದಾಳಿ ಬಳಿಕ ಶಾಕಿಂಗ್ ಸಂಗತಿ ಬಿಚ್ಚಿಟ್ಟ ಐಟಿ ಇಲಾಖೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟ ಸೋನು‌ ಸೂದ್ ನಿವಾಸದ ಮೇಲಿನ ದಾಳಿ ಬಳಿಕ ಶಾಕಿಂಗ್ ಸಂಗತಿ ಬಿಚ್ಚಿಟ್ಟ ಐಟಿ ಇಲಾಖೆ

ಬಾಲಿವುಡ್​ ನಟ ಹಾಗೂ ಸಮಾಜ‌ ಸೇವಕ ಸೋನು ಸೂದ್​ರ ಮುಂಬೈ ನಿವಾಸದಲ್ಲಿ ಸತತ ಮೂರು ದಿನಗಳ ಕಾಲ ದಾಳಿ ನಡೆಸಿದ ಆದಾಯ ಇಲಾಖೆ ಅಧಿಕಾರಿಗಳು ಸೋನು ಸೂದ್​ 20 ಕೋಟಿ ರೂಪಾಯಿಗೂ ಅಧಿಕ ತೆರಿಗೆ ವಂಚನೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ದೆಹಲಿಯ ಅರವಿಂದ ಕೇಜ್ರಿವಾಲ್​ ಸರ್ಕಾರದ ʼದೇಶ್​ ಕಾ ಮೆಂಟರ್ಸ್ʼ​ ಯೋಜನೆಗೆ ಬ್ರ್ಯಾಂಡ್​ ಅಂಬಾಸಿಡರ್​ ಆಗಿ ಆಯ್ಕೆಯಾದ ಬೆನ್ನಲ್ಲೇ ಸೋನು ಸೂದ್​ ನಿವಾಸದ ಮೇಲೆ ಈ ಐಟಿ ದಾಳಿ ನಡೆದಿದೆ.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಸೋನು ಸೂದ್​ ವಿದೇಶಿ ಕೊಡುಗೆ (ನಿಯಂತ್ರಕ) ಕಾಯ್ದೆಯನ್ನು ಉಲ್ಲಂಘಿಸಿ ಸಾಗರೋತ್ತರ ದಾನಿಗಳಿಂದ 2.1 ಕೋಟಿ ರೂಪಾಯಿಗಳನ್ನು ಸೋನು ಸೋದ್​​ರ ಲಾಭರಹಿತ ಸಂಸ್ಥೆಯು ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.

ನಟ ಸೋನುಸೂದ್​ಗೆ ಸಂಬಂಧಿಸಿದ ಅನೇಕ ಸ್ಥಳಗಳಲ್ಲಿ ನಡೆಸಲಾದ ದಾಳಿಯಲ್ಲಿ ಸೋನು ಸೂದ್​​ ತೆರಿಗೆ ವಂಚನೆ ಮಾಡಿರುವುದು ಕಂಡು ಬಂದಿದೆ. ಅಸುರಕ್ಷಿತ ಸಾಲದ ರೂಪದಲ್ಲಿ ಹಣವನ್ನು ಸಾಗಿಸುವ ಮೂಲಕ ನಟ ಸೋನು ಸೂದ್​​ ತೆರಿಗೆ ವಂಚನೆ ಮಾಡಲು ಯತ್ನಿಸಿದ್ದಾರೆ ಎಂದು ಸೆಂಟ್ರಲ್​ ಬೋರ್ಡ್​ ಆಫ್​ ಡೈರೆಕ್ಟ್​ ಟ್ಯಾಕ್ಸ್​​​ ಮಾಹಿತಿ ನೀಡಿದೆ.

ಇದುವರೆಗೆ ದೊರಕಿರುವ ಮಾಹಿತಿಯ ಪ್ರಕಾರ ನಟ ಸೋನು ಸೂದ್​ 20 ಕೋಟಿ ರೂಪಾಯಿಗೂ ಅಧಿಕ ತೆರಿಗೆ ವಂಚನೆ ಮಾಡಿರುವುದು ಕಂಡುಬಂದಿದೆ. ತೆರಿಗೆ ತಪ್ಪಿಸುವ ಉದ್ದೇಶದಿಂದ ಸಾಲವನ್ನು ತೋರಿಸಲಾಗಿದೆ. ಹೂಡಿಕೆ ಮಾಡಲು ಹಾಗೂ ಆಸ್ತಿ ಖರೀದಿಸಲು ಈ ನಕಲಿ ಸಾಲಗಳನ್ನು ಬಳಕೆ ಮಾಡಲಾಗಿದೆ ಎಂದು ತೆರಿಗೆ ಇಲಾಖೆ ಹೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...