ನವದೆಹಲಿ : ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಪ್ರತಿಷ್ಠಾಪನೆಯ ದಿನವೇ ಪ್ರಧಾನಿ ಪವಿತ್ರ ನಗರವನ್ನು ತಲುಪುವ ನಿರೀಕ್ಷೆಯಿದೆ. ಪ್ರಸ್ತುತ, ಪ್ರಧಾನಿ ಮೋದಿ ವಿವಿಧ ದೇವಾಲಯಗಳಿಗೆ ಭೇಟಿ ನೀಡುತ್ತದ್ದಾರೆ. ಅವರು ಕಾರ್ಯಕ್ರಮಕ್ಕೆ ಮುಂಚಿತವಾಗಿ 11 ದಿನಗಳ ವಿಶೇಷ ವತ್ರವನ್ನು ಆಚರಿಸುತ್ತಿದ್ದಾರೆ.
ಪ್ರಧಾನಿ ಮೋದಿ ವೇಳಾಪಟ್ಟಿ
ಪ್ರಧಾನಿ ಮೋದಿ ಸೋಮವಾರ ಅಯೋಧ್ಯೆಗೆ ತಲುಪಲಿದ್ದು, ಸೋಮವಾರ ಮಧ್ಯಾಹ್ನ 12:05 ಕ್ಕೆ ನಡೆಯಲಿರುವ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ದೇವಾಲಯದ ಒಳಗೆ ರಾಮ್ ಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪಿಸಿದ ಪ್ರಧಾನಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಭಾಷಣ ಮಧ್ಯಾಹ್ನ 1 ಗಂಟೆಗೆ ಪ್ರಾರಂಭವಾಗುವ ನಿರೀಕ್ಷೆಯಿದೆ.
ಪ್ರಾಣ ಪ್ರತಿಷ್ಠಾ ಸಮಾರಂಭ ಮುಗಿದ ನಂತರ ಪ್ರಧಾನಿ ಕುಬೇರ ತಿಲಕಕ್ಕೆ ತೆರಳಲಿದ್ದಾರೆ. ಮಧ್ಯಾಹ್ನ 2:15 ಕ್ಕೆ ಸ್ಥಳಕ್ಕೆ ತಲುಪಲಿದ್ದು, ಭಗವಾನ್ ಶಜರ್ ದೇವಾಲಯದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ವಿಶೇಷ ಗಣ್ಯರು ಸೇರಿದಂತೆ ಸಾವಿರಾರು ಜನರು ಪ್ರಧಾನಿಗೆ ಸಾಥ್ ನೀಡಲಿದ್ದಾರೆ. ಅತಿಥಿಗಳು ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಅವರಂತಹ ಉದ್ಯಮಿಗಳಿಂದ ಹಿಡಿದು ಅಮಿತಾಬ್ ಬಚ್ಚನ್ ಮತ್ತು ಅನುಷ್ಕಾ ಶರ್ಮಾ ಅವರಂತಹ ಚಲನಚಿತ್ರ ತಾರೆಯರು ಮತ್ತು ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಸೇರಿದಂತೆ ಹಲವರಿಗೆ ಆಹ್ವಾನ ನೀಡಲಾಗಿದೆ.
ದೇವಾಲಯದ ವಿಗ್ರಹ ಅನಾವರಣ
ಅಯೋಧ್ಯೆ ದೇವಾಲಯದ ಒಳಗೆ ಸ್ಥಾಪಿಸಲಾಗುವ ರಾಮ್ ಲಲ್ಲಾ ವಿಗ್ರಹವನ್ನು ಶುಕ್ರವಾರ ಬಹಿರಂಗಪಡಿಸಲಾಯಿತು. ಕಪ್ಪು ಬಣ್ಣದ ಈ ವಿಗ್ರಹವನ್ನು ಮೈಸೂರಿನ ಪ್ರಸಿದ್ಧ ಶಿಲ್ಪಿ ಅರುಣ್ ಯೋಗಿರಾಜ್ ತಯಾರಿಸಿದ್ದಾರೆ. ಸುಮಾರು 150 ರಿಂದ 200 ಕೆಜಿ ತೂಕ ಮತ್ತು 4 ಅಡಿ 3 ಇಂಚು ಎತ್ತರವಿರುವ ವಿಗ್ರಹವನ್ನು 3 ಅಂತಸ್ತಿನ ದೇವಾಲಯದ ಮೇಲಿನ ಮಹಡಿಯಲ್ಲಿ ಇರಿಸಲಾಗುವುದು.
ದೇಶಾದ್ಯಂತ ದೇವಾಲಯಗಳು ಏಕಕಾಲದಲ್ಲಿ ಗಂಟೆ ಬಾರಿಸುವ ಮೂಲಕ ಸಮಾರಂಭದಲ್ಲಿ ಭಾಗವಹಿಸಲಿವೆ. ದೇಶಾದ್ಯಂತ ದೇವಾಲಯಗಳಲ್ಲಿ ಪ್ರತಿಷ್ಠಾಪನಾ ಸಮಾರಂಭದ ದಿನದಂದು ಇತರ ಅನೇಕ ಆಚರಣೆಗಳು ಸಹ ನಡೆಯಲಿದೆ.