ಸುಖ-ಶಾಂತಿ ನೆಲೆಸಿರುವ ಮನೆ ಬೇಕೆಂದು ಎಲ್ಲರೂ ಬಯಸ್ತಾರೆ. ಸದಾ ಸಂತೋಷ ತುಂಬಿರುವ ಮನೆ ನಿರ್ಮಾಣಕ್ಕೆ ಫೆಂಗ್ ಶುಯಿ ಸಹಾಯ ಮಾಡುತ್ತದೆ. ಮನೆಯಲ್ಲಿ ಯಾವ ಕೋಣೆ ಎಲ್ಲಿರಬೇಕೆಂಬುದನ್ನು ಫೆಂಗ್ ಶುಯಿಯಲ್ಲಿ ಹೇಳಲಾಗಿದೆ. ಮನೆಯ ಪ್ರತಿಯೊಂದು ಕೋಣೆಯ ಮಹತ್ವ ಹಾಗೂ ಯಾವ ಕೋಣೆ ಎಲ್ಲಿರಬೇಕೆನ್ನುವ ಬಗ್ಗೆ ತಿಳಿಸಲಾಗಿದೆ.
ಮಲಗುವ ಕೋಣೆ: ಈಗಷ್ಟೇ ಮದುವೆಯಾಗಿರುವ, ನವ ವಧುವರರು ಮನೆಯ ಉತ್ತರ-ಪಶ್ಚಿಮ ದಿಕ್ಕಿನಲ್ಲಿರುವ ಕೋಣೆಯಲ್ಲಿ ಮಲಗಬೇಕು. ಮಹತ್ವಾಕಾಂಕ್ಷಿ ದಂಪತಿ ದಕ್ಷಿಣ ದಿಕ್ಕಿನಲ್ಲಿ ಬೆಡ್ ರೂಂ ಹೊಂದಿದ್ದರೆ ಒಳ್ಳೆಯದು. ಗುರಿಯನ್ನು ಬೇಗ ಮುಟ್ಟಲು ಬಯಸುವವರು ಉತ್ತರ ದಿಕ್ಕಿನಲ್ಲಿ ಬೆಡ್ ರೂಂ ಹೊಂದಿರಬೇಕು. ಹಿರಿಯ ದಂಪತಿ ಪೂರ್ವ ದಿಕ್ಕಿನಲ್ಲಿರುವ ಕೋಣೆಯನ್ನು ಬೆಡ್ ರೂಂ ಮಾಡಿಕೊಳ್ಳುವುದು ಒಳ್ಳೆಯದು.
ಗೆಸ್ಟ್ ರೂಂ ವಾಯುವ್ಯ ದಿಕ್ಕಿನಲ್ಲಿರಬೇಕು. ಮಲಗುವಾಗ ನಿಮ್ಮ ತಲೆ ದಕ್ಷಿಣಕ್ಕಿರಲಿ. ಸಾಧ್ಯವಿಲ್ಲ ಎಂದಾದಲ್ಲಿ ಪೂರ್ವ ದಿಕ್ಕಿಗೆ ತಲೆಯಿಟ್ಟು ಮಲಗಬಹುದು.
ಅಡುಗೆ ಮನೆ : ನೆನಪಿನಲ್ಲಿರಲಿ, ಅಡುಗೆ ಮನೆ ಆಗ್ನೇಯ ದಿಕ್ಕಿನಲ್ಲಿರಲಿ. ಈಶಾನ್ಯ, ಪೂರ್ವ ಹಾಗೂ ದಕ್ಷಿಣ ದಿಕ್ಕಿನಲ್ಲಿ ಅಡುಗೆ ಮನೆ ಇರದಂತೆ ನೋಡಿಕೊಳ್ಳಿ.
ಸ್ನಾನ ಗೃಹ ಪೂರ್ವ ಹಾಗೂ ಉತ್ತರ ದಿಕ್ಕಿನಲ್ಲಿರಲಿ. ಆದ್ರೆ ಸ್ನಾನ ಗೃಹಕ್ಕೆ ಹೆಚ್ಚಿನ ಅಲಂಕಾರ ಬೇಡ. ಆದ್ರೆ ಸ್ವಚ್ಛತೆ ಕಾಯ್ದುಕೊಳ್ಳಿ.