ನ್ಯೂಜಿಲೆಂಡ್: ನ್ಯೂಜಿಲೆಂಡ್‌ನಲ್ಲಿ ಭಾರೀ ಮಳೆಯು ದೇಶದ ಪ್ರಮುಖ ಭಾಗಗಳನ್ನು ಸ್ಥಗಿತಗೊಳಿಸಿದೆ. ಇದರ ಮಧ್ಯೆ, ಜಲಾವೃತಗೊಂಡ ಪ್ರದೇಶದಲ್ಲಿ ಒಳಗಾದ ರಸ್ತೆಗಳ ಮೂಲಕ ವಾಹನ ಚಲಾಯಿಸುವುದನ್ನು ತಪ್ಪಿಸುವಂತೆ ನಾಗರಿಕರಿಗೆ ಎಚ್ಚರಿಕೆ ನೀಡಲಾಗಿದ್ದರೂ, ಆಕ್ಲೆಂಡ್‌ನಲ್ಲಿನ ಬಸ್ ಚಾಲಕರೊಬ್ಬರು ಸುರಕ್ಷತಾ ಸಲಹೆಯಿಂದ ತಲೆಕೆಡಿಸಿಕೊಳ್ಳದಿರುವುದು ಕಂಡುಬಂದಿದೆ.
ಬಸ್ ಡ್ರೈವರ್ ಪ್ರವಾಹದ ನೀರಿನ ಮೂಲಕ ಸಂಚರಿಸುತ್ತಿರುವ ವಿಡಿಯೋವನ್ನು ಸೆರೆಹಿಡಿಯಲಾಗಿದ್ದು, ಇದು ಭೀತಿ ಹುಟ್ಟಿಸುವಂತಿದೆ. ಈ ವಿಡಿಯೋ ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿದೆ. ವೀಡಿಯೊವನ್ನು ಚಿತ್ರೀಕರಿಸುವ ವ್ಯಕ್ತಿಯು ಹಲವಾರು ವಾಹನಗಳು ಹೇಗೆ ರಸ್ತೆಯಲ್ಲಿ ಸಿಲುಕಿಕೊಂಡಿವೆ ಎಂಬುದನ್ನು ಸೆರೆಹಿಡಿದಿದ್ದಾನೆ.
ಹಲವಾರು ಪ್ರಯಾಣಿಕರನ್ನು ತುಂಬಿದ ಬಸ್ ಪ್ರವಾಹದಿಂದ ತುಂಬಿದ ರಸ್ತೆಯ ಮೂಲಕ ಸಾಕಷ್ಟು ಸುಲಭವಾಗಿ ಚಲಿಸುತ್ತಿದೆ. ಇದನ್ನು ನೋಡಿದರೆ ಮೈ ಝುಂ ಎನ್ನುವಂತಿದೆ. ಇಂಟರ್ನೆಟ್‌ನ ಒಂದು ವಿಭಾಗವು ಬಸ್ ಚಾಲಕನನ್ನು ಖಂಡಿಸಿದರೆ, ಮತ್ತೊಂದು ವಿಭಾಗವು ಭಾರೀ ಪ್ರವಾಹದಿಂದಲೂ ಜನರನ್ನು ಸಾಗಿಸುವ ಅವರ ಅವಿರತ ಪ್ರಯತ್ನವನ್ನು ಶ್ಲಾಘಿಸಿದೆ.