
“ನಾನು ನನ್ನ ಮಕ್ಕಳೊಂದಿಗೆ ಕಾಬೂಲ್‌ಗೆ ಬಂದಿದ್ದು, ಜನರಿಗೆ ರಕ್ಷಣೆ ನೀಡಲು ತಾಲಿಬಾನ್ ಅನ್ನು ಕೋರಲಿದ್ದೇನೆ” ಎಂದು ತಮ್ಮ ಮೂವರು ಹೆಣ್ಣುಮಕ್ಕಳೊಂದಿಗೆ ವಿಡಿಯೋ ಸಂದೇಶವೊಂದರ ಮೂಲಕ ಮಾಜಿ ಅಧ್ಯಕ್ಷರು ಕೋರಿದ್ದು, ತಾವು ಹಾಗೂ ಇತರ ನಾಯಕರು ವಿಷಯಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಲು ನೋಡುವುದಾಗಿ ತಿಳಿಸಿದ್ದಾರೆ. 2001 ರಿಂದ 2014ರ ವರೆಗೂ ಅಫ್ಘಾನಿಸ್ತಾನದ ಅಧ್ಯಕ್ಷರಾಗಿದ್ದ ಕರ್ಜ಼ಾಯ್, ಜನರಿಗೆ ಮನೆಯಲ್ಲೇ ಇರಲು ಕೋರಿದ್ದಾರೆ.
ಕಳೆದ ತಿಂಗಳು ಅಮೆರಿಕ ನೇತೃತ್ವದ ಪಡೆಗಳು ಅಫ್ಘಾನಿಸ್ತಾನದಿಂದ ಸಂಪೂರ್ಣವಾಗಿ ಹಿಂದಿರುಗಿದ ಬಳಿಕ ತಾಲಿಬಾನ್ ಭಯೋತ್ಪಾದಕರು ಅಫ್ಘಾನಿಸ್ತಾನದ ಮಿಲಿಟರಿ ಪಡೆಗಳ ಮೇಲೆ ಹಂತಹಂತವಾಗಿ ಹಿಡಿತ ಸಾಧಿಸುತ್ತಾ ಬಂದಿದ್ದಾರೆ.