ಉತ್ತರ ಪ್ರದೇಶದ ಶಾಸಕರೊಬ್ಬರು ಕಳಪೆ ರಸ್ತೆ ನಿರ್ಮಾಣವನ್ನ ಪ್ರಶ್ನಿಸಿ ಗುತ್ತಿಗೆದಾರನನ್ನು ತರಾಟೆಗೆ ತೆಗೆದುಕೊಂಡ ಘಟನೆಯ ವಿಡಿಯೋ ವೈರಲ್ ಆಗಿದೆ.
ತಮ್ಮ ಕ್ಷೇತ್ರದಲ್ಲಿ ಹೊಸದಾಗಿ ನಿರ್ಮಿಸ್ತಿದ್ದ ರಸ್ತೆಯ ಕಳಪೆ ಗುಣಮಟ್ಟದ ಬಗ್ಗೆ ಗುತ್ತಿಗೆದಾರರನ್ನು ಖಂಡಿಸುವ ವೀಡಿಯೊವನ್ನು ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
“ಇದು ರಸ್ತೆಯೇ? ಈ ರಸ್ತೆಯಲ್ಲಿ ಕಾರು ಓಡಬಹುದೇ,” ಎಂದು ಆಕ್ರೋಶದಿಂದ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ ಶಾಸಕ ಬೇಡಿರಾಮ್ ಅವರು ಪ್ರಶ್ನಿಸಿದ್ದಾರೆ.
ತಮ್ಮ ಕ್ಷೇತ್ರವಾದ ಗಾಜಿಪುರದಲ್ಲಿ ಕ್ಷೇತ್ರದ ನಿವಾಸಿಗಳು ನೀಡಿದ ದೂರಿನ ಮೇರೆಗೆ ರಸ್ತೆ ತಪಾಸಣೆ ನಡೆಸಿದರು. ತಮ್ಮ ಕಾಲಿನ ಬೂಟಿನಿಂದ ರಸ್ತೆಯ ಮೇಲೆ ಹಾಕಿದ್ದ ಟಾರ್ ಅನ್ನು ಕಿತ್ತುಹಾಕಿದರು. ಶಾಸಕರು ಬೂಟ್ ನಿಂದ ಒದೆಯುತ್ತಿದ್ದಂತೆ ಟಾರ್ ಹಣ್ಣಿನ ಸಿಪ್ಪೆ ಸುಲಿಯುವಂತೆ ಕಳಚಿಕೊಳ್ತಾ ಇತ್ತು.