ನವದೆಹಲಿ: ಐವರು ಜಾನುವಾರು ಕಳ್ಳಸಾಗಾಣಿಕೆದಾರರನ್ನು 22 ಕಿಮೀ ಬೆನ್ನಟ್ಟಿದ ನಂತರ ದೆಹಲಿಯ ಬಳಿಯ ಗುರುಗ್ರಾಮ್ ನಲ್ಲಿ ಬಂಧಿಸಲಾಗಿದೆ. ಆರೋಪಿಗಳು ತಮ್ಮ ಟ್ರಕ್ ಅನ್ನು ಗಾಳಿ ಇಲ್ಲದ ಟೈರ್ ಗಳಲ್ಲೇ ಅತಿವೇಗವಾಗಿ ಓಡಿಸಿದ್ದು, ಬೆನ್ನಟ್ಟುತ್ತಿದ್ದಾಗಲೇ ಚಲಿಸುವ ವಾಹನದಿಂದ ಹಸುಗಳನ್ನು ಎಸೆದಿದ್ದಾರೆ.
ಶನಿವಾರ ಮುಂಜಾನೆ ಗುರುಗ್ರಾಮ್ ನ ಸೈಬರ್ ಸಿಟಿ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯ ವಿವರಗಳನ್ನು ನೀಡಿದ ಅಧಿಕಾರಿಗಳು, ಹಸು ಕಳ್ಳಸಾಗಣೆದಾರರಿಂದ ಕೆಲವು ದೇಶಿ ನಿರ್ಮಿತ ಬಂದೂಕುಗಳು ಮತ್ತು ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ದೆಹಲಿ ಗಡಿಯಿಂದ ಗುರುಗ್ರಾಮ್ ಗೆ ಪ್ರವೇಶಿಸುವಾಗ ಹಸು ಕಳ್ಳಸಾಗಣೆದಾರರು ವಾಹನವನ್ನು ನಿಲ್ಲಿಸಲು ಸೂಚಿಸಿದರೂ, ಕೇಳದೇ ವೇಗವಾಗಿ ಓಡಿಸಿಕೊಂಡು ತೆರಳಿದ್ದು, ನಂತರ ಚೇಸ್ ಪ್ರಾರಂಭವಾಯಿತು. ಗೋರಕ್ಷಕರು ತಮ್ಮ ವಾಹನದ ಟೈರ್ ಗಳನ್ನು ಪಂಕ್ಚರ್ ಮಾಡಿದರೂ ಆರೋಪಿಗಳು ವಾಹನವನ್ನು ಅತಿವೇಗದಲ್ಲಿ ಚಲಾಯಿಸಿಕೊಂಡು ಮುಂದೆ ಸಾಗಿದ್ದಾರೆ.
22 ಕಿಮೀ ಬೆನ್ನಟ್ಟಿದ ಸಂದರ್ಭದಲ್ಲಿ ಹಲವು ಹಂತಗಳಲ್ಲಿ ಕಳ್ಳಸಾಗಾಣಿಕೆದಾರರು ಗೋರಕ್ಷಕರ ಗಮನವನ್ನು ಬೇರೆಡೆ ಸೆಳೆಯಲು ಕಳ್ಳಸಾಗಣೆ ಮಾಡಿದ ಹಸುಗಳನ್ನು ಚಲಿಸುವ ವಾಹನದಿಂದ ಹೊರಕ್ಕೆ ಎಸೆದಿದ್ದಾರೆ.
22 ಕಿ.ಮೀ.ಗಳ ಬೆನ್ನಟ್ಟಿದ ನಂತರ ಗೋವು ಕಳ್ಳಸಾಗಣೆದಾರರನ್ನು ಹಿಡಿಯಲಾಯಿತು. ಅವರ ವಾಹನದಿಂದ ಅಕ್ರಮ ಬಂದೂಕುಗಳು ಮತ್ತು ಗುಂಡುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಎಲ್ಲಾ ಹಸುಗಳನ್ನು ಎಸೆದ ನಂತರ, ಗುರುಗ್ರಾಮ್ ಪೊಲೀಸರ ತಂಡ ಹಸು ಕಳ್ಳಸಾಗಣೆದಾರರನ್ನು ಬಂಧಿಸಿದೆ, ಗೋರಕ್ಷಕರಾದ ಅಶೋಕ್ ತಿಳಿಸಿದ್ದಾರೆ.
https://youtu.be/Svt58LkChug