ಬರೇಲಿ (ಉತ್ತರ ಪ್ರದೇಶ) ಒಬ್ಬರ ಚರ್ಮದ ಬಣ್ಣಕ್ಕೆ ಸಂಬಂಧಿಸಿದ ವರ್ಣಭೇದ ನೀತಿಯು ಪ್ರಪಂಚದಾದ್ಯಂತ ಇನ್ನೂ ಅಸ್ತಿತ್ವದಲ್ಲಿದೆ. ಆದರೆ, ವರನ ಮೈಬಣ್ಣದ ಕಾರಣದಿಂದ ಮದುವೆಗೆ ಕೆಲವು ದಿನಗಳ ಮೊದಲು ವಧು ತನ್ನ ಮದುವೆಯನ್ನು ನಿಲ್ಲಿಸಿದ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ?
ಉತ್ತರ ಪ್ರದೇಶದ ಬರೇಲಿಯಲ್ಲಿ ಇಂತಹದೊಂದು ಘಟನೆ ನಡೆದಿದ್ದು, ವರನನ್ನು ಮದುವೆಯಾಗಲು ಸಿದ್ಧವಾಗಿದ್ದ ಮಹಿಳೆಯೊಬ್ಬರು ಆತನ ಚರ್ಮದ ಬಣ್ಣದಿಂದಾಗಿ ಮದುವೆ ಕ್ಯಾನ್ಸಲ್ ಮಾಡಿದ್ದಾಳೆ.
ವರದಿಗಳ ಪ್ರಕಾರ, ದೆಹಲಿಯ ನಿಹಾಲ್ ವಿಹಾರ್‌ನ ದುರ್ಗಾ ಪ್ರಸಾದ್ ಮತ್ತು ಬರೇಲಿಯ ಯುವತಿಯ ನಡುವೆ ಮದುವೆಯ ಎಲ್ಲಾ ವಿಧಿವಿಧಾನಗಳನ್ನು ನಿಗದಿಪಡಿಸಲಾಗಿದೆ. ಆದಾಗ್ಯೂ, ಪ್ರಸಾದ್ ಅವರನ್ನು ಕಾರ್ಯಕ್ರಮ ಒಂದರಲ್ಲಿ ನೋಡಿದ ಯುವತಿ ಮದುವೆಯನ್ನು ರದ್ದು ಮಾಡಿದ್ದಾಳೆ.
ಅವನನ್ನು ಅವಿದ್ಯಾವಂತ ಮತ್ತು ‘ಸುಂದರನಲ್ಲ’ ಎಂದು ಕರೆದ ಅವಳು ಅವನ ಚರ್ಮದ ಬಣ್ಣವನ್ನು ಹೀಯಾಳಿಸಿದ್ದಾಳೆ. ಕಪ್ಪನೆಯ ಹುಡುಗನನ್ನು ಮದುವೆಯಾದರೆ ಸ್ನೇಹಿತರು ನನ್ನನ್ನು ಗೇಲಿ ಮಾಡುತ್ತಾರೆ ಎಂದು ಹೇಳಿದ್ದಾಳೆ. ಇಷ್ಟಾದ ಮೇಲೆ ವರನೂ ಮದುವೆಗೆ ಒಪ್ಪಲಿಲ್ಲ. ಆಗ ಮದುವೆಯನ್ನು ರದ್ದು ಮಾಡಿದ್ದು ಅವನೇ ಎಂದು ತನ್ನ ಕುಟುಂಬದವರಿಗೆ ಹೇಳಿದ್ದಾಳೆ ಯುವತಿ! ಈಗ ಯುವತಿಯ ಮನೆಯವರು ವರನ ವಿರುದ್ಧ ಕೇಸ್ ದಾಖಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.