alex Certify ಉಕ್ರೇನ್​​ ಗೂಗಲ್ ಮ್ಯಾಪ್​​ನ ಟೂಲ್ಸ್ ನಿಷ್ಕ್ರಿಯಗೊಳಿಸಿದ ಗೂಗಲ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಕ್ರೇನ್​​ ಗೂಗಲ್ ಮ್ಯಾಪ್​​ನ ಟೂಲ್ಸ್ ನಿಷ್ಕ್ರಿಯಗೊಳಿಸಿದ ಗೂಗಲ್…!

ಗೂಗಲ್ ಸಂಸ್ಥೆಯು, ಉಕ್ರೇನ್​​ನಲ್ಲಿ ಟ್ರಾಫಿಕ್​ ಸ್ಥಿತಿ ಮತ್ತು ವಿವಿಧ ಪ್ರದೇಶಗಳು ಎಷ್ಟು ದಟ್ಟಣೆಯಿಂದ ಕೂಡಿವೆ ಎಂಬ ಮಾಹಿತಿಯನ್ನು ಲೈವ್​ ಆಗಿ ತೋರಿಸುವ ಗೂಗಲ್ ಮ್ಯಾಪ್​​ನ,‌ ಕೆಲವು ಟೂಲ್ಸ್​​ಗಳನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಿರುವುದಾಗಿ ಮಾಹಿತಿ ನೀಡಿದೆ.

ವಿಶ್ವದ ದಿಗ್ಗಜ ಸರ್ಚ್​ ಎಂಜಿನ್​ ಆಗಿರುವ ಆಲ್ಪಾಬೆಟ್​​ ಸಂಸ್ಥೆಯ ಗೂಗಲ್​, ಸುರಕ್ಷತಾ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದೇವೆಂದು ಸ್ಪಷ್ಟಪಡಿಸಿದೆ.

ಗೂಗಲ್​ ಮ್ಯಾಪ್​​ನ ಟ್ರಾಫಿಕ್​ ಲೇಯರ್​ ಮತ್ತು ಅಂಗಡಿಗಳು, ರೆಸ್ಟೋರೆಂಟ್​ಗಳಂತಹ ಪ್ರದೇಶಗಳಲ್ಲಿ ಎಷ್ಟರ ಮಟ್ಟಿಗೆ ಜನದಟ್ಟಣೆ ಇದೆ, ಯಾವ ಪ್ರಮಾಣದಲ್ಲಿ ಕಾರ್ಯನಿರತವಾಗಿವೆ ಎಂಬುದರ ಬಗ್ಗೆ ಲೈವ್​ ಮಾಹಿತಿ (ನೈಜ ಸಮಯದ ಮಾಹಿತಿ) ನೀಡುವ ಟೂಲ್​​ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಅಂದರೆ ಉಕ್ರೇನ್​​ನಲ್ಲಿನ ಈ ಮಾಹಿತಿ ಸದ್ಯ ಜಾಗತಿಕವಾಗಿ ಸಿಗುವುದಿಲ್ಲ. ಅಲ್ಲಿನ ಪ್ರಾದೇಶಿಕ ಆಡಳಿತಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಈ ಹೆಜ್ಜೆ ಇಡಲಾಗಿದ್ದು, ಜನರ ಸುರಕ್ಷತೆಗಾಗಿ ತೆಗೆದುಕೊಂಡ ಕ್ರಮ ಇದು ಎಂದೂ ಗೂಗಲ್ ಹೇಳಿಕೊಂಡಿದೆ.

ಉಕ್ರೇನ್​​ ಮೇಲೆ ರಷ್ಯಾ ಆಕ್ರಮಣ ಮಾಡಿದೆ. ನಾಲ್ಕೈದು ದಿನಗಳಿಂದ ಬೀದಿಬೀದಿಗಳಲ್ಲಿ ಹೊಡೆದಾಟ, ದಾಳಿಗಳು ನಡೆಯುತ್ತಿವೆ. ಅಲ್ಲಿನ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು, ಈ ನಿರ್ಧಾರಕ್ಕೆ ಬರಲಾಗಿದೆ. ಯುದ್ಧ ಕಾರ್ಮೋಡದ ಮಧ್ಯೆ ಜನರ ಜೀವ ರಕ್ಷಣೆ ಎಷ್ಟು ಮುಖ್ಯವೋ ಅಷ್ಟೇ ಅವರ ಡಾಟಾ ರಕ್ಷಣೆ ಕೂಡ ಮುಖ್ಯ ಎಂಬುದು ಗೂಗಲ್ ಸೇರಿದಂತೆ ಹಲವು ಟೆಕ್ ದೈತ್ಯ ಕಂಪನಿಗಳ ಅಭಿಪ್ರಾಯ.

ಸಧ್ಯ, ಗೂಗಲ್​ ಮ್ಯಾಪ್​​ನಲ್ಲಿ ಟರ್ನ್​ ಬೈ ಟರ್ನ್​ ನ್ಯಾವಿಗೇಶನ್​ ಫೀಚರ್ ಬಳಸಿಕೊಂಡು ವಾಹನ ಚಾಲನೆ ಮಾಡಬಹುದಾಗಿದೆ. ಅಂಥವರಿಗೆ ಲೈವ್​ ಮಾಹಿತಿ ಲಭ್ಯ ಇರಲಿದೆ ಎಂದು ಗೂಗಲ್ ಸಂಸ್ಥೆ ಸ್ಪಷ್ಟಪಡಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...