
ಇಬ್ಬರು ಮಹಿಳೆಯರು ರೋಲೆಕ್ಸ್ ಕೈಗಡಿಯಾರಕ್ಕಾಗಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿರುವ ಭಯಾನಕ ಘಟನೆ ನಡೆದಿದೆ. 36 ವರ್ಷದ ಸುರ್‌ಪ್ರೀತ್ ಧಿಲ್ಲೋನ್ ಮತ್ತು 21 ವರ್ಷದ ಟೆಮಿಡಾಯೊ ಅವೆ ಎನ್ನುವವರು ಸೇರಿ 33 ವರ್ಷದ ಸಾಲ್ ಮುರ್ರೆಯ ಕೊಲೆ ಮಾಡಿದ್ದಾರೆ.
ರೋಲೆಕ್ಸ್ ಕೈಗಡಿಯಾರವನ್ನು ಕದಿಯಲು ಅವರು ಈ ಕೊಲೆ ಮಾಡಿದ್ದಾರೆ. ಕೊಲೆ ನಡೆದ ಮೇಲೆ ಗೊತ್ತಾಗಿದೆ ಅದು ನಕಲಿ ಗಡಿಯಾರವೆಂದು. ಯುರೋಪ್ ನ ಬೆಡ್‌ಫೋರ್ಡ್‌ಶೈರ್‌ನ ಲುಟನ್‌ನ ನಿವಾಸಿಯಾದ ಸಾಲ್ ತನ್ನ ಅಪಾರ್ಟ್‌ಮೆಂಟ್‌ನ ಪ್ರವೇಶದ್ವಾರದಲ್ಲಿ ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ನಂತರ ತನಿಖೆ ವೇಳೆ, ಹನಿಟ್ರ್ಯಾಪ್ಗೆ ಸಾಲ್ ಅವರನ್ನು ಒಳಪಡಿಸಿ ಕೊಲೆ ಮಾಡಿರುವುದು ತಿಳಿದುಬಂದಿದೆ. ಲೈಂಗಿಕ ಚಟುವಟಿಕೆಯನ್ನು ನಡೆಸಿದ ನಂತರ ಇವರ ಕೊಲೆ ಆಗಿರುವುದು ತಿಳಿದಿದೆ.