ದೆಹಲಿ ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ. ಮತ್ತೊಂದು ಯು-ಟರ್ನ್‌ನಲ್ಲಿ, ದೆಹಲಿಯ ಮೇಯರ್ ಮತ್ತು ಉಪಮೇಯರ್ ಹುದ್ದೆಗಳಿಗೆ ಎಎಪಿ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ನಿರ್ಧರಿಸಿದೆ.
ನಾಗರಿಕ ಚುನಾವಣೆಯ ಸೋಲಿನಿಂದ ಹಲವು ಬಾರಿ ವ್ಯತಿರಿಕ್ತ ಹೇಳಿಕೆಗಳ ನಂತರ, ಬಿಜೆಪಿ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (MCD) ಹುದ್ದೆಗಳಿಗೆ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ.
ಶಾಲಿಮಾರ್ ಬಾಗ್‌ನ ಬಿಜೆಪಿ ಕೌನ್ಸಿಲರ್ ರೇಖಾ ಗುಪ್ತಾ ಅವರು ಮೇಯರ್ ರೇಸ್‌ಗೆ ಆಯ್ಕೆಯಾಗಿದ್ದು, ರಾಮನಗರ ವಾರ್ಡ್‌ನ ಕಮಲ್ ಬಾಗ್ರಿ ಉಪಮೇಯರ್ ಸ್ಥಾನಕ್ಕೆ ಹೋರಾಟ ನಡೆಸಲಿದ್ದಾರೆ.
ಈಗ ಪೌರ ಸಂಸ್ಥೆಯಲ್ಲಿ ಗರಿಷ್ಠ ಸಂಖ್ಯೆಯ ಕೌನ್ಸಿಲರ್‌ಗಳನ್ನು ಹೊಂದಿರುವ ಎಎಪಿ, ಶೆಲ್ಲಿ ಒಬೆರಾಯ್ ಅವರನ್ನು ಮೇಯರ್ ಅಭ್ಯರ್ಥಿಯಾಗಿ ಮತ್ತು ಮೊಹಮ್ಮದ್ ಇಕ್ಬಾಲ್ ಅವರನ್ನು ಉಪಮೇಯರ್ ಹುದ್ದೆಗೆ ಸ್ಪರ್ಧೆಗೆ ಘೋಷಿಸಿದೆ.
ಡಿಸೆಂಬರ್ 4 ರ ಚುನಾವಣೆ ಫಲಿತಾಂಶದಂದು ದೆಹಲಿಯ ನಾಗರಿಕ ಸಂಸ್ಥೆಯಲ್ಲಿ ಬಿಜೆಪಿಯು 15 ವರ್ಷಗಳ ಆಡಳಿತವನ್ನು ಕಳೆದುಕೊಂಡು ಕಡಿಮೆ ಸ್ಥಾನಕ್ಕೆ ಕುಸಿಯಿತು. ಒಟ್ಟು 250 ಸ್ಥಾನಗಳಲ್ಲಿ 134 ರಲ್ಲಿ AAP ವಿಜಯಶಾಲಿಯಾಗಿದೆ. ಬಿಜೆಪಿ 104 ಸ್ಥಾನಗಳೊಂದಿಗೆ ಎರಡನೇ ಸ್ಥಾನ ಗಳಿಸಿದೆ.
ಮೇಯರ್ ಸ್ಥಾನದ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ. ನಾವು ಸ್ವತಂತ್ರ ಅಭ್ಯರ್ಥಿಯನ್ನು ಬೆಂಬಲಿಸುತ್ತೇವೆ ಎಂದಿದ್ದ ಬಿಜೆಪಿಯನ್ನ ಎಎಪಿ ಟೀಕಿಸಿದ ಬೆನ್ನಲ್ಲೇ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.
ದೆಹಲಿ ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಜನವರಿ 6 ರಂದು ಚುನಾವಣೆ ನಡೆಯಲಿದೆ.