ರಾಜಸ್ಥಾನದಿಂದ ಬಂದಿರುವ ಉದ್ಯಮದ ದೊಡ್ಡ ಕುಳಗಳನ್ನು ಬಹಳಷ್ಟು ಕೇಳಿದ್ದೇವೆ. ಆದರೆ, ಲಕ್ಷಾಧಿಪತಿ ಪಾರಿವಾಗಳು ವಾಸಿಸುವ ರಾಜ್ಯದ ನಗೌರ್‌ನಲ್ಲಿರುವ ಜಸ್ನಗರ್ ಎಂಬ ಪಟ್ಟಣದ ಬಗ್ಗೆ ನೀವು ಕೇಳಿರುವುದಿಲ್ಲ.
ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಆಸ್ತಿಗಳಿಗೆ ಈ ಪಾರಿವಾಳಗಳ ಹೆಸರನ್ನು ಇಡಲಾಗಿರುವ ಈ ಊರಿನ ಅನೇಕ ಅಂಗಡಿಗಳು, ಜಮೀನುಗಳನ್ನು ಪಾರಿವಾಳಗಳ ಹೆಸರಿನಿಂದ ಕರೆಯಲಾಗುತ್ತದೆ.
ಪಾರಿವಾಳಗಳ ಹೆಸರಿನಲ್ಲಿ 27 ಅಂಗಡಿಗಳಿದ್ದು, 126 ಭಿಗಾ ಭೂಮಿ ಹಾಗೂ 30 ಲಕ್ಷ ರೂಪಾಯಿಯ ನಗದನ್ನು ಇಡಲಾಗಿದೆ. ಇದಲ್ಲದೇ 10 ಭಿಗಾ ಭೂಮಿಯಲ್ಲಿ ನಡೆಸಲಾಗುತ್ತಿರುವ ಗೋಶಾಲೆಗಳಿಗೂ ಪಾರಿವಾಳಗಳ ಹೆಸರನ್ನೇ ಇಡಲಾಗಿದೆ.
ಟೇಕಾಫ್ ಆಗಬೇಕಿದ್ದ ಫ್ಲೈಟ್ ನಲ್ಲಿತ್ತು ಹಾವು……!
ನಾಲ್ಕು ದಶಕಗಳ ಹಿಂದೆ ಹೊಸ ಉದ್ಯಮಿಯೊಬ್ಬರು ಕಬೂತರನ್ ಟ್ರಸ್ಟ್ ಸ್ಥಾಪಿಸಿದ್ದು, ತಮ್ಮ ಹಿರೀಕರಿಂದ ಸ್ಪೂರ್ತಿ ಪಡೆದು, ಸರ್ಪಂಚರಾದ ರಾಂದಿನ್ ಚೋಟಿಯಾ ಮತ್ತು ಅವರ ಗುರುಗಳ ನೆರವಿನಿಂದ ಮೂಕ ಹಕ್ಕಿಗಳಿಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡಿದ್ದರು. ಸಜ್ಜನ್‌ರಾಜ್ ಜೈನ್ ಎಂಬ ಉದ್ಯಮಿ ಈ ಯೋಜನೆ ಆರಂಭಿಸಿದ್ದಾರೆ.
ಯೋಜನೆ ಆರಂಭಗೊಳ್ಳುತ್ತಲೇ ಜನರು ಧಾರಾಳವಾಗಿ ಹಣ ಸಹಾಯ ಮಾಡಿದ್ದು, ಇದೀಗ ಪಾರಿವಾಳಗಳ ಹೆಸರಿನಲ್ಲಿ ಗೋಶಾಲೆಗಳನ್ನು ನಡೆಸಿ, 500 ಗೋವುಗಳಿಗೆ ಸಕಲ ಸವಲತ್ತುಗಳುಳ್ಳ ಆಶ್ರಯ ನೀಡಲಾಗುತ್ತಿದೆ.
ಭಾರೀ ದೇಣಿಗೆ ನೆರವಿನಿಂದ ಪಾರಿವಾಳಗಳ ರಕ್ಷಣೆ ಹಾಗೂ ಅವುಗಳಿಗೆ ಆಹಾರ-ನೀರು ಒದಗಿಸಲು 27 ಕಟ್ಟಡಗಳನ್ನು ತೆರೆಯಲಾಗಿದೆ. ಅಂಗಡಿಗಳು ತಿಂಗಳಿಗೆ 80,000 ರೂಪಾಯಿ ಬಾಡಿಗೆ ಪಡೆಯುತ್ತಿದ್ದು, ಈ ಆದಾಯವನ್ನೆಲ್ಲಾ ಬ್ಯಾಂಕಿನಲ್ಲಿ ಠೇವಣಿ ಇಡಲಾಗುತ್ತಿದ್ದು, 30 ಲಕ್ಷ ರೂಪಾಯಿಗೆ ಬೆಳೆದಿದೆ.