alex Certify ಈ ದ್ವೀಪದಲ್ಲಿ ಹಾವುಗಳದ್ದೇ ಸಾಮ್ರಾಜ್ಯ; ಮನುಷ್ಯರ ಪ್ರವೇಶಕ್ಕೆ ಹೇರಲಾಗಿದೆ ನಿಷೇಧ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ದ್ವೀಪದಲ್ಲಿ ಹಾವುಗಳದ್ದೇ ಸಾಮ್ರಾಜ್ಯ; ಮನುಷ್ಯರ ಪ್ರವೇಶಕ್ಕೆ ಹೇರಲಾಗಿದೆ ನಿಷೇಧ….!

ವಿಷಪೂರಿತ ಹಾವುಗಳು ಪ್ರಪಂಚದಾದ್ಯಂತ ಕಂಡುಬರುತ್ತವೆ. ಆದರೆ ಕೇವಲ ವಿಷಕಾರಿ ಹಾವುಗಳಿಂದಲೇ ತುಂಬಿರುವ ದ್ವೀಪವೊಂದಿದೆ. ಅಲ್ಲಿನ ಹಾವುಗಳ ವಿಷವು ಮನುಷ್ಯರನ್ನು ಕ್ಷಣಮಾತ್ರದಲ್ಲಿ ಕೊಂದುಬಿಡಬಲ್ಲದು. ಹಾಗಾಗಿ ಈ ದ್ವೀಪಕ್ಕೆ ಮನುಷ್ಯರ ಪ್ರವೇಶವನ್ನೇ ನಿಷೇಧಿಸಲಾಗಿದೆ.

ಈ ದ್ವೀಪದ ಹೆಸರು ಇಲ್ಹಾ ಡ ಕ್ವಿಮಡಾ ಗ್ರಾಂಡೆ. ಈ ದ್ವೀಪದಲ್ಲಿ ಸಾವಿರಾರು ವಿಷಕಾರಿ ಹಾವುಗಳು ವಾಸಿಸುತ್ತವೆ. ಇದನ್ನು “ಹಾವುಗಳ ಸಾಮ್ರಾಜ್ಯ” ಎಂದೂ ಕರೆಯುತ್ತಾರೆ. ಇಲ್ಲಿನ ರಾಜನೂ ಹಾವು, ಪ್ರಜೆಗಳೂ ಹಾವುಗಳೇ, ಕಾವಲುಗಾರರೂ ಹಾವುಗಳೇ. ಈ ದ್ವೀಪದಲ್ಲಿ ವಿಶ್ವದ ಅತ್ಯಂತ ಅಪಾಯಕಾರಿ ಹಾವುಗಳಿವೆ. ಮೂಲಗಳ ಪ್ರಕಾರ ಈ ದ್ವೀಪದಲ್ಲಿ 2,000 – 4,000 ವಿಷಕಾರಿ ಹಾವುಗಳು ವಾಸಿಸುತ್ತವೆ.

ಇದು ಬ್ರೆಜಿಲ್‌ನ ಸಾವೊ ಪಾಲೊ ನಗರದಿಂದ ಸುಮಾರು 90 ಮೈಲುಗಳಷ್ಟು ದೂರದಲ್ಲಿದೆ. ಮನುಷ್ಯರು ಈ ದ್ವೀಪಕ್ಕೆ ಹೋಗದಂತೆ ಅಲ್ಲಿನ ಸರ್ಕಾರ ನಿಷೇಧಿಸಿದೆ. ಏಕೆಂದರೆ ಇಲ್ಲಿಗೆ ಪ್ರವೇಶಿಸುವುದು ಮಾರಕವಾಗಬಹುದು.

“ಗೋಲ್ಡನ್ ಲ್ಯಾನ್ಸ್ಹೆಡ್ ವೈಪರ್” ಎಂಬ ವಿಶ್ವದ ಅತ್ಯಂತ ಅಪಾಯಕಾರಿ ಹಾವು ಕೂಡ ಈ ದ್ವೀಪದಲ್ಲಿದೆ. ಈ ಹಾವುಗಳು ಬ್ರೆಜಿಲಿಯನ್ ದ್ವೀಪದಲ್ಲಿ ಮಾತ್ರ ಕಂಡುಬರುತ್ತವೆ. ಈ ಹಾವುಗಳ ವಿಷವು ಎಷ್ಟು ಅಪಾಯಕಾರಿ ಎಂದರೆ ಅದು ಮಾನವರ ಮಾಂಸವನ್ನು ಕರಗಿಸುತ್ತದೆ. ಕೇವಲ ಒಂದು ಗಂಟೆಯೊಳಗೆ ಆರೋಗ್ಯವಂತ ವ್ಯಕ್ತಿಯನ್ನು ಸಹ ಕೊಲ್ಲುತ್ತದೆ.

ಇಲ್ಹಾ ಡ ಕ್ವಿಮಡಾ ಗ್ರಾಂಡೆ ದ್ವೀಪವನ್ನು ಸ್ಥಳೀಯರು ಬೆಂಕಿಯ ದೊಡ್ಡ ದ್ವೀಪ ಎಂದೂ ಕರೆಯುತ್ತಾರೆ. ವಿಷಕಾರಿ ಹಾವುಗಳನ್ನು ಓಡಿಸಲು ಅಲ್ಲಿ ಬೆಂಕಿ ಹಚ್ಚಲಾಗುತ್ತಿತ್ತು. ಹಲವು ವರ್ಷಗಳ ಹಿಂದೆ ಈ ದ್ವೀಪದಲ್ಲಿ ಜನರು ವಾಸಿಸುತ್ತಿದ್ದರು. ಆದರೆ ಈಗ ಈ ದ್ವೀಪದಲ್ಲಿ ಯಾರೂ ವಾಸಿಸುತ್ತಿಲ್ಲ. ಆದರೆ ಕೆಲವರು ಅಕ್ರಮವಾಗಿ ಹಾವುಗಳನ್ನು ಹಿಡಿಯಲು ಈ ದ್ವೀಪಕ್ಕೆ ಬರುತ್ತಾರೆ. ಏಕೆಂದರೆ ಈ ಹಾವುಗಳನ್ನು ಕಾಳಸಂತೆಯಲ್ಲಿ ಕೋಟ್ಯಂತರ ರೂಪಾಯಿಗೆ ಮಾರಾಟ ಮಾಡಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...