alex Certify ಬೆನ್ನಟ್ಟಿದಾಗ ಸಿಗದಿದ್ದರೂ ಬಾವಿಯಲ್ಲಿ ಮುಖಾಮುಖಿಯಾಯ್ತು ಚಿರತೆ-ಬೆಕ್ಕು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆನ್ನಟ್ಟಿದಾಗ ಸಿಗದಿದ್ದರೂ ಬಾವಿಯಲ್ಲಿ ಮುಖಾಮುಖಿಯಾಯ್ತು ಚಿರತೆ-ಬೆಕ್ಕು

ನಾಸಿಕ್: ಬೆಕ್ಕನ್ನು ಅಟ್ಟಿಸಿಕೊಂಡು ಹೋದ ಚಿರತೆಯೊಂದು ಬೆಕ್ಕಿನ ಜೊತೆಗೆ ತಾನೂ ಬಾವಿಗೆ ಬಿದ್ದಿದೆ. ಬಾವಿಯಲ್ಲಿ ಚಿರತೆ-ಬೆಕ್ಕು ಮುಖಾಮುಖಿಯಾದರೂ ಜೀವಂತವಾಗಿ ಉಳಿದಿದೆ. ಈ ಘಟನೆ ಮಹಾರಾಷ್ಟ್ರದ ನಾಸಿಕ್ ನಲ್ಲಿ ಸಂಭವಿಸಿದೆ.

ಬೆಕ್ಕನ್ನು ಅಟ್ಟಿಸಿಕೊಂಡು ಹೋದ ಚಿರತೆಯು ಬಾವಿಯೊಳಗೆ ಬಿದ್ದಿದೆ. ಬಾವಿಯಲ್ಲಿ ಚಿರತೆ-ಬೆಕ್ಕು ಮುಖಾಮುಖಿಯಾಗಿದೆ. ಮೊದಲಿಗೆ ಸುಮ್ಮನೆ ಕುಳಿತ ಚಿರತೆ ನಂತರ ಬೆಕ್ಕಿನ ಬಳಿ ಹೋಗಿ ಹೆದರಿಸಿದೆ.

ಆದರೂ ಕೂಡ ಬೆಕ್ಕನ್ನು ಸಾಯಿಸದೆ ಜೀವಂತವಾಗಿ ಬಿಟ್ಟಿದೆ. ಈ ದೃಶ್ಯ ನೋಡಿದ್ರೆ ಚಿರತೆಯು, ನೀನು ಬೀಳೋದಲ್ಲದೆ ನನ್ನನ್ನೂ ಬೀಳಿಸಿದೆಯಲ್ವಾ ಅನ್ನೋ ಕೋಪದಲ್ಲಿ ಇದ್ದ ಹಾಗೆ ಅನಿಸುತ್ತದೆ. ಚಿರತೆ ಹಾಗೂ ಬೆಕ್ಕಿನ ದೃಶ್ಯಾವಳಿಯು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸದ್ಯ ಭಾರಿ ವೈರಲ್ ಆಗಿದೆ.

BIG NEWS: ಟಿ – 20 ವಿಶ್ವಕಪ್: ನಾಳೆ ಘೋಷಣೆಯಾಗಲಿದೆ ಟೀಂ ಇಂಡಿಯಾ

ಇನ್ನು ಇದರ ರಕ್ಷಣೆ ಅಷ್ಟು ಸುಲಭವಾಗಿರಲಿಲ್ಲ ಎನ್ನಲಾಗಿದೆ. ರಕ್ಷಿಸಲ್ಪಟ್ಟ ಚಿರತೆಯನ್ನು ಅದರ ಆವಾಸಸ್ಥಾನದಲ್ಲಿ ಬಿಡಲಾಯಿತು ಎಂದು ಪಶ್ಚಿಮ ನಾಸಿಕ್ ನ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಂಕಜ್ ಗರ್ಗ್ ಹೇಳಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...