alex Certify ವರ್ಷದಲ್ಲಿ ಒಂದು ದಿನ 12 ಗಂಟೆಗಳ ಕಾಲ ಮನೆ ತೊರೆಯುತ್ತಾರೆ ಈ ಗ್ರಾಮದ ಜನ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವರ್ಷದಲ್ಲಿ ಒಂದು ದಿನ 12 ಗಂಟೆಗಳ ಕಾಲ ಮನೆ ತೊರೆಯುತ್ತಾರೆ ಈ ಗ್ರಾಮದ ಜನ….!

ಪಾಟ್ನಾ: ನಮ್ಮ ದೇಶ ವಿವಿಧತೆಯಲ್ಲಿ ಏಕತೆ ಮೈಗೂಡಿಸಿಕೊಂಡಿರುವ ದೇಶ. ಇಲ್ಲಿನ ವಿಶೇಷ ಆಚರಣೆಗಳು, ಪದ್ಧತಿಗಳು, ಸಂಪ್ರದಾಯಗಳು ವಿಭಿನ್ನ ವಿಶಿಷ್ಟವಾಗಿರುವುದಲ್ಲದೇ ಪ್ರದೇಶವಾರು ಬದಲಾವಣೆಗೊಳಗಾಗುತ್ತದೆ. ಕೆಲವು ಪ್ರದೇಶಗಳಲ್ಲಿ ಈ ಹಿಂದೆ ಹಿರಿಯರು ನಡೆಸಿಕೊಂಡು ಬಂದ ಪದ್ಧತಿಗಳನ್ನು ಇಂದಿಗೂ ಆಚರಿಸಿಕೊಂಡು ಬರಲಾಗುತ್ತಿದೆ. ಇಂತಹದ್ದೇ ಒಂದು ಘಟನೆಗೆ ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಬಗಾಹದಲ್ಲಿರುವ ನೌರಂಗಿಯಾ ಪ್ರದೇಶ ಸಾಕ್ಷಿಯಾಗಿದೆ.

ಈ ಹಿಂದೆ ಶ್ರೀರಾಮ 14 ವರ್ಷಗಳ ಕಾಲ ವನವಾಸ ಅನುಭವಿಸಿದ ಎಂದು ರಾಮಾಯಣದಲ್ಲಿ ಉಲ್ಲೇಖಿಸಲಾಗಿದೆ. ಆದರೆ ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಬಗಾಹದಲ್ಲಿರುವ ನೌರಂಗಿಯಾ ಜನರು ವರ್ಷದಲ್ಲಿ 12 ಗಂಟೆ ವನವಾಸ ಅನುಭವಿಸುತ್ತಾರೆ. ಇದು ನಂಬಲು ಅಸಾಧ್ಯವಾದರೂ ಸತ್ಯ.

ತಾರು ಜನಾಂಗ ಪ್ರಾಬಲ್ಯವಿರುವ ನೌರಂಗಿಯಾದ ಜನರು ಬೈಸಾಖ್ ನ ನವಮಿಯಂದು ಇಡೀ ಗ್ರಾಮವನ್ನು ದನಕರುವನ್ನು ಬಿಡದೆ ಸಂಪೂರ್ಣವಾಗಿ ಖಾಲಿ ಮಾಡಿಕೊಂಡು ಆ 12 ಗಂಟೆಗಳ ಕಾಲ ಕಾಡಿನಲ್ಲಿ ದೇವಿಯ ಆರಾಧನೆಯಲ್ಲಿ ತೊಡಗಿಕೊಳ್ಳುತ್ತಾರೆ. ಈ ರೀತಿ ಮಾಡುವುದರಿಂದ ದೇವಿಯು ಶಾಂತಗೊಳ್ಳುತ್ತಾಳೆ ಎಂಬುದು ಇಲ್ಲಿನ ಜನರ ನಂಬಿಕೆ.

ದಂತಕಥೆಗಳ ಪ್ರಕಾರ, ಅನೇಕ ವರ್ಷಗಳ ಹಿಂದೆ ಈ ಗ್ರಾಮ ಕಾಲರಾ, ಸಿಡುಬು ಇಂತಹ ಸಾಂಕ್ರಾಮಿಕ ರೋಗಗಳಿಗೆ ಮತ್ತು ಹಲವು ಬಾರಿ ಬೆಂಕಿಗೆ ಆಹುತಿಯಾಗಿತ್ತು. ಆಗ ಬಾಬಾ ಪರಮಹಂಸರು ಎಂದು ಕರೆಯಲ್ಪಡುವ ಸಾಧು ಅವರ ಕನಸಿನಲ್ಲಿ ಮಾತೆ ದುರ್ಗಾ ದೇವತೆಯು ಈ ಎಲ್ಲಾ ಕಷ್ಟಗಳ ನಿವಾರಣೆಗೆ ನವಮಿಯಂದು ಇಡೀ ಗ್ರಾಮವನ್ನು ತೊರೆಯಬೇಕೆಂದು ಆದೇಶಿಸಿದ್ದಳಂತೆ.

ಅಂದಿನಿಂದ ಇಂದಿನವರೆಗೂ ಈ ಆಚರಣೆ ನಡೆದುಕೊಂಡು ಬಂದಿದ್ದು, ಎಲ್ಲಾ ತೊಂದರೆಗಳು ನಿವಾರಣೆಯಾಯಿತು ಎಂದು ನಂಬಿದ್ದಾರೆ. ಹಾಗಾಗಿ ಈಗ ಸಹ ನವಮಿಯಂದು ಜನರು ತಮ್ಮ ಮನೆಗಳನ್ನು ಖಾಲಿ ಮಾಡಿ ವಾಲ್ಮೀಕಿ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ಭಜನಿ ಕುಟ್ಟಿಯಲ್ಲಿ ಇಡೀ ದಿನ ದುರ್ಗಾದೇವಿಯನ್ನು ಪೂಜಿಸುತ್ತಾರೆ. ಈ ಜನಾಂಗದ ಆಚರಣೆಯನ್ನು ತಡೆಯಲು ಅರಣ್ಯ ಇಲಾಖೆ ಹಲವು ಬಾರಿ ಪ್ರಯತ್ನಿಸಿದರೂ ಅದು ವಿಫಲವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...