ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಅಂದರ್ ಆಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಗೆ ರಾಜಾತಿಥ್ಯ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಮೂರು ಎಫ್ಐಆರ್ ಗಳನ್ನು ದಾಖಲಿಸಲಾಗಿದೆ.ಈ ಮೂರು ಪ್ರಕರಣಗಳ ಪೈಕಿ 2 ಕೇಸ್ ನಲ್ಲಿ ನಟ ದರ್ಶನ್ ಎ 1 ಆರೋಪಿಯಾಗಿದ್ದಾರೆ.
ಎಫ್ ಐ ಆರ್ ಗಳಲ್ಲಿ ‘ಡಿ ಬಾಸ್’ ಎಂದು ಉಲ್ಲೇಖ
ಇಷ್ಟು ದಿನ ಅಭಿಮಾನಿಗಳು ನಟ ದರ್ಶನ್ ರನ್ನು ಡಿ ಬಾಸ್ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಅದೇ ‘ಡಿ ಬಾಸ್’ ಹೆಸರನ್ನು ಪೊಲೀಸರು ಎಫ್ ಐ ಆರ್ ನಲ್ಲಿ ಉಲ್ಲೇಖಿಸಿದ್ದಾರೆ. ನಟ ದರ್ಶನ್ ವಿರುದ್ಧ ದಾಖಲಾದ ಎರಡು ಎಫ್ ಐ ಆರ್ ಗಳಲ್ಲಿ ದರ್ಶನ್ ಅಲಿಯಾಸ್ ಡಿ ಬಾಸ್ ಎಂದು ಉಲ್ಲೇಖಿಸಲಾಗಿದೆ.
ಮೊದಲನೇ ಪ್ರಕರಣದಲ್ಲಿ ದರ್ಶನ್ ಎ1, ನಾಗರಾಜ್ ಎ2, ವಿಲ್ಸನ್ ಗಾರ್ಡನ್ ನಾಗ ಎ3, ಕುಳ್ಳ ಸೀನ ಎ4 ಆರೋಪಿಗಳಾಗಿದ್ದಾರೆ.ಎರಡನೇ ಪ್ರಕರಣದಲ್ಲಿ ನಟ ದರ್ಶನ್ ಎ1, ಧರ್ಮ ಎ2, ಸತ್ಯ ಎ3 ಆರೋಪಿಗಳಾಗಿದ್ದಾರೆ. ಮೂರನೇ ಪ್ರಕರಣದಲ್ಲಿ ಕೆ.ಎಸ್. ಸುದರ್ಶನ್ ಎ1, ಮುಜೀಬ್ ಎ2, ಪರಮೇಶ್ ನಾಯಕ ಲಮಾಣಿ ಎ3, ಕೆ.ಬಿ. ರಾಯಮನೆ ಎ4 ಆರೋಪಿಗಳಾಗಿದ್ದಾರೆ.