ಮಾತುಗಳ ಮೇಲೆ ಪ್ರಜ್ಞೆಯೇ ಇಲ್ಲದಂತೆ ಭಾಷಣ ಮಾಡುವುದು ನಮ್ಮ ದೇಶದ ರಾಜಕಾರಣಿಗಳಿಗೆ ಹೊಸದೇನಲ್ಲ. ತ್ರಿಪುರಾದ ಆಡಳಿತಾರೂಢ ಬಿಜೆಪಿಯ ಶಾಸಕ ಅರುಣ್ ಚಂದ್ರ ಭೌಮಿಕ್ ಇದಕ್ಕೊಂದು ಉದಾಹರಣೆಯಾಗಿದ್ದಾರೆ.
ತೃಣಮೂಲ ಕಾಂಗ್ರೆಸ್ ನಾಯಕರು ತಮ್ಮ ರಾಜ್ಯದ ರಾಜಧಾನಿ ಅಗರ್ತಲಾ ವಿಮಾನ ನಿಲ್ದಾಣಕ್ಕೆ ಬರುತ್ತಲೇ ’ತಾಲಿಬಾನ್ ಶೈಲಿಯಲ್ಲಿ’ ಅವರಿಗೆ ಕೌಂಟರ್ ಮಾಡಬೇಕೆಂದು ಹೇಳುವ ಮೂಲಕ ಭೌಮಿಕ್ ಭಾರೀ ವಿವಾದಕ್ಕೆ ಸಿಲುಕಿದ್ದಾರೆ.
ಕೇಂದ್ರದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯಕ್ಕೆ ರಾಜ್ಯ ಸಚಿವೆಯಾಗಿ ನೇಮಕಗೊಂಡ ಪ್ರತಿಮಾ ಭೌಮಿಕ್ ರನ್ನು ದಕ್ಷಿಣ ತ್ರಿಪುರಾ ಜಿಲ್ಲೆಯ ಬೆಲೋನಿಯಾ ಹಾಲ್‌ನಲ್ಲಿ ಸನ್ಮಾನ ಮಾಡುವ ವೇಳೆ ಮಾತನಾಡಿದ ಶಾಸಕ, “25 ವರ್ಷಗಳ ಕಮ್ಯೂನಿಸ್ಟ್ ಸರ್ಕಾರಕ್ಕೆ ಮಂಗಳ ಹಾಡಿ ತ್ರಿಪುರಾದಲ್ಲಿ ಅಧಿಕಾರಕ್ಕೆ ಬಂದ ಬಿಪ್ಲಬ್ ಕುಮಾರ್ ದೇಬ್ ಸರ್ಕಾರವನ್ನು ಹಾಳು ಮಾಡಲು ಟಿಎಂಸಿ ನೋಡುತ್ತಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕುಮ್ಮಕ್ಕಿನಿಂದ ಇವೆಲ್ಲಾ ಆಗುತ್ತಿವೆ” ಎಂದಿದ್ದಾರೆ.
ಸಲಿಂಗಿಳ ಇಮೇಜ್ ಬದಲಿಸಲು ಛಲತೊಟ್ಟು ನಿಂತ ರಾಜಾವಿ
“ಅವರನ್ನು ನೀವು ತಾಲಿಬಾನಿ ಶೈಲಿಯಲ್ಲಿ ದಾಳಿ ಮಾಡಬೇಕೆಂದು ನಿಮ್ಮಲ್ಲಿ ಮನವಿ ಮಾಡುತ್ತೇನೆ. ಅವರು ವಿಮಾನ ನಿಲ್ದಾಣದಲ್ಲಿ ಇಳಿಯುತ್ತಲೇ ಅವರ ಮೇಲೆ ದಾಳಿ ಮಾಡಬೇಕು. ಬಿಪ್ಲಬ್ ಕುಮಾರ್ ಸರ್ಕಾರದ ರಕ್ಷಣೆಗೆ ನಾವು ನಮ್ಮ ರಕ್ತದ ಕೊನೆಯ ಹನಿ ಇರೋವರೆಗೂ ಹೋರಾಡುತ್ತೇವೆ” ಎಂದು ಹೇಳಿದ್ದಾರೆ ಭೌಮಿಕ್.
ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ, ಭೌಮಿಕ್‌ರ ಹೇಳಿಕೆಗಳು ಅವರ ವೈಯಕ್ತಿಕವಾಗಿದ್ದು, ಇದಕ್ಕೆ ಅವರೇ ಪೂರ್ಣ ಜವಾಬ್ದಾರರು ಎಂದು ಸೇಫಾಗಿ ಬ್ಯಾಟ್ ಮಾಡಿದೆ.
2023 ವಿಧಾನ ಸಭಾ ಚುನಾವಣೆಗೆ ಪಕ್ಷವನ್ನು ಬಲಗೊಳಿಸಲೆಂದು ಟಿಎಂಸಿ ನಾಯಕರು ಆಗಾಗ ರಾಜ್ಯಕ್ಕೆ ಭೇಟಿ ನೀಡುತ್ತಲೇ ಇರುತ್ತಾರೆ. ಈ ವೇಳೆ ಬಿಜೆಪಿ ಹಾಗೂ ಟಿಎಂಸಿ ನಾಯಕರ ನಡುವೆ ವಾಗ್ವಾದ ನಡೆಯುತ್ತಿರುತ್ತವೆ.
https://twitter.com/AITC4Tripura/status/1428032066818502656?ref_src=twsrc%5Etfw%7Ctwcamp%5Etweetembed%7Ctwterm%5E1428032066818502656%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fnews%2Findia%2Fviral-video-in-talibani-style-tripura-bjp-leader-calls-for-attack-on-tmc-watch-4899627%2F