ಆಫ್ಘಾನಿಸ್ತಾನದ ಜನಪ್ರಿಯ ಹಾಸ್ಯನಟ ಖಶಾ ಜ್ವಾನ್ ಮೃತದೇಹ ಯುದ್ಧಪೀಡಿತ ಪ್ರದೇಶದಲ್ಲಿ ಕಂಡು ಬಂದ ನಂತರ, ತಾಲಿಬಾನ್ ಉಗ್ರರು ಆತನಿಗೆ ಕಪಾಳಮೋಕ್ಷ ಮಾಡಿ ಕಿರುಕುಳ ನೀಡಿದ ಆಘಾತಕಾರಿ ವಿಡಿಯೋ ಹೊರಬಂದಿದೆ.
ಖಶಾ ಜ್ವಾನ್ ಎಂದೇ ಖ್ಯಾತರಾಗಿರುವ ಆಫ್ಘಾನಿಸ್ತಾನದ ಜನಪ್ರಿಯ ಹಾಸ್ಯನಟ ನಜರ್ ಮೊಹಮ್ಮದ್ ಅವರಿಗೆ ತಾಲಿಬಾನ್ ಉಗ್ರರು ಕಪಾಳಮೋಕ್ಷ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಅಪರಿಚಿತ ಬಂದೂಕುಧಾರಿಗಳು ಆತನನ್ನು ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಜುಲೈ 27 ರಂದು ಇರಾನ್ ಇಂಟರ್‌ನ್ಯಾಷನಲ್ ನ ಹಿರಿಯ ವರದಿಗಾರ ತಾಜುದ್ದೀನ್ ಸೊರೌಶ್ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ದಂಗೆಕೋರರು ಬಂದೂಕು ಹಿಡಿದು ಖಶಾ ಅವರಿಗೆ ಹಲವಾರು ಬಾರಿ ಕಪಾಳಮೋಕ್ಷ ಮಾಡಿದ್ದಾರೆ. ಸೋಷಿಯಲ್ ಮೀಡಿಯಾ ಪೋಸ್ಟ್ ಪ್ರಕಾರ, ಕಂದಹಾರಿ ಹಾಸ್ಯನಟನನ್ನು ಉಗ್ರಗಾಮಿ ಗುಂಪು ಬಂಧಿಸಿದ್ದು, ಗಲ್ಲಿಗೇರಿಸುವ ಮೊದಲು ಕಪಾಳಮೋಕ್ಷ ಮಾಡಿದ ಕ್ಷಣವನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ವಿದೇಶಿ ಸೈನ್ಯವನ್ನು ಹಿಂತೆಗೆದುಕೊಳ್ಳುವುದು ಮತ್ತು ಅಫ್ಘಾನ್ ಪಡೆಗಳು ಕಡಿಮೆಯಾಗುತ್ತಿದ್ದಂತೆ ಯುದ್ಧ ಪೀಡಿತ ರಾಷ್ಟ್ರದಲ್ಲಿ ತಾಲಿಬಾನ್ ಆಕ್ರಮಣವು ಹೆಚ್ಚಾಗುತ್ತಿದೆ. ಸ್ಥಳೀಯ ಮಾಧ್ಯಮಗಳು ಕಳೆದ ವಾರ ಖಶಾ ಅವರನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗಿ ಕೊಲ್ಲಲಾಯಿತು ಎಂದು ವರದಿ ಮಾಡಿದ್ದವು. ಎಎನ್‌ಐ ಪ್ರಕಾರ, ಕಂದಹಾರ್ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಹಾಸ್ಯನಟನ ಕುಟುಂಬವು ಈ ಹತ್ಯೆಗೆ ತಾಲಿಬಾನ್ ಮೇಲೆ ಆರೋಪ ಹೊರಿಸಿತ್ತು. ಆದಾಗ್ಯೂ, ದಂಗೆಕೋರರ ಗುಂಪು ಈ ಘಟನೆಯಲ್ಲಿ ಯಾವುದೇ ಭಾಗಿಯಾಗಿಲ್ಲ ಎಂದು ನಿರಾಕರಿಸಿತ್ತು.
ಇತ್ತೀಚಿನ ಮಾಧ್ಯಮ ವರದಿಗಳ ಪ್ರಕಾರ, ತಾಲಿಬಾನ್ ಸದಸ್ಯರು ಸರ್ಕಾರಿ ನೌಕರರನ್ನು ಹುಡುಕಲು ಮನೆ ಮನೆಗೆ ಹೋದಾಗ ಖಶಾ ಅವರನ್ನು ಬಂಧಿಸಿದ್ದರು. ಉಗ್ರಗಾಮಿ ಗುಂಪು ಗುರುವಾರ ಖಶಾರನ್ನು ಬಂಧಿಸಿ, ಮರಕ್ಕೆ ಕಟ್ಟಿ ಗಂಟಲು ಕತ್ತರಿಸಿದೆ. ಜನಪ್ರಿಯ ಹಾಸ್ಯನಟನ ಗಂಟಲು ಸೀಳಿಕೊಂಡು ನೆಲದ ಮೇಲೆ ಬಿದ್ದಿರುವುದು ಕಂಡುಬಂದಿದೆ. ಅಫ್ಘಾನಿಸ್ತಾನದ ಮೇಲೆ ಉಗ್ರರ ದಾಳಿಯನ್ನು ಖಂಡಿಸಿದ್ದರಿಂದ ಖಶಾ ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.
ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಅವರು, ಯುಎಸ್ ಪಡೆಗಳು ಹಿಮ್ಮೆಟ್ಟಿದ ಕೆಲವೇ ತಿಂಗಳುಗಳಲ್ಲಿ ಅಫ್ಘಾನ್ ಸರ್ಕಾರ ದಂಗೆಕೋರರ ಹಿಡಿತಕ್ಕೆ ಬೀಳಬಹುದು ಎಂದು ಹೇಳಿದ್ದರು. ಯುನೈಟೆಡ್ ಸ್ಟೇಟ್ಸ್ ಗುಪ್ತಚರ ವಿಭಾಗದ ಮಾಹಿತಿಯಂತೆ. ತಾಲಿಬಾನ್ ಪ್ರಭಾವ ಮುಂದುವರಿಸುತ್ತಲೇ ಇದ್ದು, ಈಗಾಗಲೇ ಹಲವಾರು ಪ್ರದೇಶ ಸ್ವಾಧೀನಪಡಿಸಿಕೊಂಡಿದೆ. ಅಫ್ಘಾನ್ ಅಧಿಕಾರಿಗಳು, ಪಾಕಿಸ್ತಾನ ಕೂಡ ತಾಲಿಬಾನ್ ಉಗ್ರರಿಗೆ ಆಶ್ರಯ ನೀಡಿ ಸಹಾಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ತಾಲಿಬಾನ್ ಈವರೆಗೆ 22 ಅಪಘಾನ್ ಕಮಾಂಡೋಗಳನ್ನು ಗಲ್ಲಿಗೇರಿಸಿದೆ
ಈ ತಿಂಗಳ ಆರಂಭದಲ್ಲಿ, ಅಫ್ಘಾನಿಸ್ತಾನದಿಂದ ಹೊರಹೊಮ್ಮಿದ ಮತ್ತೊಂದು ವಿಡಿಯೋದಲ್ಲಿ ಆಫ್ಘಾನಿಸ್ತಾನದ ವಿಶೇಷ ಪಡೆಗಳ ಘಟಕದಿಂದ ಕನಿಷ್ಠ ಒಂದು ಡಜನ್ ಪುರುಷರನ್ನು ತಾಲಿಬಾನ್ ಉಗ್ರರು ಗುಂಡಿಕ್ಕಿ ಕೊಂದಿದ್ದಾರೆ ಎಂದು ತೋರಿಸುತ್ತದೆ.
ಅಫ್ಘಾನಿಸ್ತಾನದ ತುರ್ಕಮೆನಿಸ್ತಾನ್ ಗಡಿಯ ಸಮೀಪವಿರುವ ಫರಿಯಾಬ್ ಪ್ರಾಂತ್ಯದ ದಾವ್ಲತ್ ಅಬಾದ್ ಪಟ್ಟಣದಲ್ಲಿ ಜೂನ್ 16 ರಂದು ಆನೇಕ ಹತ್ಯೆಗಳು ನಡೆದಿವೆ. ಅಫ್ಘಾನ್ ಪಡೆಗಳ ಹಲವಾರು ನಿರಾಯುಧ ಪುರುಷರನ್ನು ಕೊಲ್ಲುವ ಮೊದಲು ಕಮಾಂಡೋಗಳು ಶರಣಾಗತಿ ಎಂದು ಕೂಗಿದ್ದಾರೆ ಎಂದು ಹೇಳಲಾಗಿದೆ.