ಕೇರಳದಲ್ಲಿ ನಡೆದ ಭೀಕರ ಅಪಘಾತವೊಂದರಲ್ಲಿ ಪವಾಡಸದೃಶ ರೀತಿಯಲ್ಲಿ ಮಗು ಸೇರಿದಂತೆ ನಾಲ್ವರು ಪಾರಾಗಿದ್ದಾರೆ.
ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಆಘಾತಕಾರಿ ಘಟನೆಯಲ್ಲಿ, ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಕರುಮಲಾ ಬಳಿ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ತಲೆಕೆಳಗಾಗಿ ತಿರುಗುತ್ತಾ ನಿಂತಿತು.
ಅತಿ ವೇಗದ ಚಾಲನೆಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿದ ಘಟನೆ ಮಂಗಳವಾರ ಸಂಜೆ 6.15ಕ್ಕೆ ನಡೆದಿದೆ. ಕಾರ್ ಉರುಳುವ ಮುನ್ನ ರಸ್ತೆ ಬದಿಯ ಗೋಡೆಗೆ ಡಿಕ್ಕಿ ಹೊಡೆದಿದೆ. ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಕಾರ್ ನಲ್ಲಿದ್ದ ಮಹಿಳೆ ಅಪಘಾತಕ್ಕೊಳಗಾದ ಕಾರು ಉಲ್ಟಾ ತಿರುಗುತ್ತಿದ್ದಾಗ ಅದನ್ನು ಬಿಗಿಯಾಗಿ ಹಿಡಿದುಕೊಂಡಿದ್ದನ್ನ ಕಾಣಬಹುದು.
ಅಪಘಾತ ಸಂಭವಿಸಿದ ಕೆಲವೇ ಕ್ಷಣಗಳಲ್ಲಿ ಬೈಕ್‌ಗಳಲ್ಲಿ ಬಂದ ದಾರಿಹೋಕರು ತಮ್ಮ ವಾಹನಗಳನ್ನು ನಿಲ್ಲಿಸಿ ಪ್ರಯಾಣಿಕರಿಗೆ ಸಹಾಯ ಮಾಡಲು ಮುಂದಾದರು. ಘಟನೆಯಲ್ಲಿ ಎಲ್ಲಾ ಪ್ರಯಾಣಿಕರು ಬದುಕುಳಿದಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಯಿಲಾಂಡಿ-ಎಡವನ್ನಾ ರಾಜ್ಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಅಪಘಾತದ ನಂತರ ಸಂಚಾರವನ್ನು ಭಾಗಶಃ ನಿರ್ಬಂಧಿಸಲಾಗಿತ್ತು.