alex Certify ಸಾಂಕ್ರಾಮಿಕದ ಎರಡನೇ ವರ್ಷದಲ್ಲಿ ದುಃಖ ಅನುಭವಿಸಿದ ಜಗತ್ತು; ಸಮೀಕ್ಷೆಯಲ್ಲಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಂಕ್ರಾಮಿಕದ ಎರಡನೇ ವರ್ಷದಲ್ಲಿ ದುಃಖ ಅನುಭವಿಸಿದ ಜಗತ್ತು; ಸಮೀಕ್ಷೆಯಲ್ಲಿ ಬಹಿರಂಗ

ಕೋವಿಡ್-19 ನ ಎರಡನೇ ವರ್ಷದಲ್ಲಿ ವಿಶ್ವದಲ್ಲಿ ಸಾಕಷ್ಟು ನೋವು ತಂಬಿತ್ತು ಎಂದು ಗ್ಯಾಲಪ್ ಪೋಲ್ ಸಮೀಕ್ಷೆ ಹೇಳಿದೆ. ಈ ಸಮೀಕ್ಷೆಯ ಪ್ರಕಾರ ಸಾಂಕ್ರಾಮಿಕ ರೋಗದ ಎರಡನೇ ವರ್ಷವು ಜಗತ್ತಿನಾದ್ಯಂತ ತುಂಬಾ ಭಾವನಾತ್ಮಕ ಅನುಭವಕ್ಕೆ ಕಾರಣವಾಗಿತ್ತು ಮತ್ತು ದುಃಖದಿಂದ ಕೂಡಿತ್ತು.

122 ದೇಶಗಳಲ್ಲಿ ಈ ಸಮೀಕ್ಷೆಯನ್ನು ಕೈಗೊಳ್ಳಲಾಗಿದ್ದು, 10 ವಯಸ್ಕರರ ಪೈಕಿ ನಾಲ್ಕು ಮಂದಿ ಸಾಂಕ್ರಾಮಿಕದ ಎರಡನೇ ವರ್ಷದಲ್ಲಿ ತೀವ್ರ ಒತ್ತಡಕ್ಕೆ ಸಿಲುಕಿದ್ದೆವು ಎಂದು ಹೇಳಿಕೊಂಡಿದ್ದಾರೆ. ಹತ್ತು ಜನರಲ್ಲಿ ನಾಲ್ಕು ಮಂದಿ ನಮಗೆ ಗಂಭೀರವಾದ ದೈಹಿಕ ನೋವುಂಟಾಗಿತ್ತು ಎಂದು ಹೇಳಿದ್ದರೆ, ನಾಲ್ಕು ಜನರಲ್ಲಿ ಒಬ್ಬರು ತುಂಬಾ ಆಘಾತಕಾರಿ ಹಾಗೂ ದುಃಖಕರವಾದ ಪರಿಸ್ಥಿತಿಯನ್ನು ಅನುಭವಿಸಿದೆವು ಎಂದು ಹೇಳಿದ್ದಾರೆ.

BIG NEWS: ಸ್ವರ ಭಾಸ್ಕರ್ ಗೆ ಅನಾಮಧೇಯನಿಂದ ಜೀವ ಬೆದರಿಕೆ ಪತ್ರ

ಇನ್ನು, ಹತ್ತು ಜನರ ಪೈಕಿ ಏಳು ಮಂದಿ(ಶೇ.69) ಈ ಅವಧಿಯಲ್ಲಿ ತಾವು ತುಂಬಾ ವಿಶ್ರಾಂತಿ ಪಡೆದೆವು ಎಂದಿದ್ದರೆ, ಶೇ.70 ರಷ್ಟು ಜನರು ಸಾಕಷ್ಟು ಎಂಜಾಯ್ ಮಾಡಿದೆವು ಎಂದಿದ್ದಾರೆ.

ತಾಲಿಬಾನ್ ಆಡಳಿತವಿರುವ ಅಫ್ಘಾನಿಸ್ತಾನ ನಕಾರಾತ್ಮಕ ಅನುಭವದ ಸೂಚ್ಯಂಕದಲ್ಲಿ ಮೊದಲ ಸ್ಥಾನದಲ್ಲಿದೆ. ಇಲ್ಲಿ ತಾಲಿಬಾನ್, ದೇಶವನ್ನು ತನ್ನ ವಶಕ್ಕೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಅರಾಜಕತೆ ನಿರ್ಮಾಣವಾಗಿದೆ. ನಕಾರಾತ್ಮಕ ಸೂಚ್ಯಂಕದಲ್ಲಿ ಅಫ್ಘಾನಿಸ್ತಾನಕ್ಕೆ 59 ಅಂಕಗಳು ಲಭಿಸುವ ಮೂಲಕ ಮೊದಲ ಸ್ಥಾನದಲ್ಲಿದೆ ಎಂದು ಸಮೀಕ್ಷೆ ತಿಳಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...