ಕಚ್: 86 ವರ್ಷದ ವೃದ್ಧೆಯನ್ನು ಒಬ್ಬ ಮಹಿಳಾ ಪೋಲೀಸ್ ಗುಜರಾತಿನ ರಾನ್ ಆಫ್ ಕಚ್ ಮರುಭೂಮಿಯಲ್ಲಿ ತನ್ನ ಭುಜದ ಮೇಲೆ ಹೊತ್ತುಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರೂ ಪೊಲೀಸ್ ಪೇದೆಗೆ ಹ್ಯಾಟ್ಸಾಫ್ ಹೇಳಿದ್ದಾರೆ.
ಗುಜರಾತ್‌ನ ಕಚ್ ಜಿಲ್ಲೆಯ ರಾಪರ್ ಪೊಲೀಸ್ ಠಾಣೆಯ 27 ವರ್ಷದ ವರ್ಷಾ ಪರ್ಮಾರ್ ಪೊಲೀಸ್ ಆಗಿ ಕಾರ್ಯನಿರ್ವಹಿಸುತ್ತಿರುವ ಮೊದಲ ಪೊಲೀಸ್ ಠಾಣೆ. ಕರ್ತವ್ಯದಲ್ಲಿದ್ದಾಗ, ಕಚ್ ನ ಮರುಭೂಮಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವ ಮಹಿಳೆಯನ್ನು ಗಮನಿಸಿ ತಕ್ಷಣವೇ ಸಹಾಯಕ್ಕೆ ಧಾವಿಸಿದ್ದಾರೆ. ಯಾವುದೇ ವಾಹನ ಲಭ್ಯವಿಲ್ಲದ ಕಾರಣ ವಾಹನಕ್ಕೆ ಕಾಯದೇ ಸ್ವಯಂಪ್ರೇರಿತವಾಗಿ ವಯಸ್ಸಾದ ಮಹಿಳೆಯನ್ನು ಸುರಕ್ಷಿತವಾಗಿ ಕೊಂಡೊಯ್ಯಲು ನಿರ್ಧರಿಸಿ ಮಹಿಳೆಯನ್ನು ಹೊತ್ತು ನಡೆದಿದ್ದಾರೆ. ಇವರ ಸೇವೆಗೆ ಪ್ರಶಂಸೆಯ ಮಹಾಪೂರವೆ ಹರಿದು ಬರುತ್ತಿದೆ.
ವೃದ್ದೆ ಇಬ್ಬರು ವಯಸ್ಸಾದ ಮಹಿಳೆಯರೊಂದಿಗೆ ಹತ್ತಿರದ ದೇವಸ್ಥಾನಕ್ಕೆ ಪ್ರಾರ್ಥನೆ ಸಲ್ಲಿಸಲು ಹೋಗಿದ್ದರು, ಆದರೆ ಅವರು ಹಿಂದಿರುಗುತ್ತಿದ್ದಾಗ ಮೂರ್ಛೆ ಹೋದರು. ದಾರಿಹೋಕರೊಬ್ಬರು ಪರ್ಮಾರ್‌ಗೆ ಮಾಹಿತಿ ನೀಡಿದ ತಕ್ಷಣವೇ ನೀರಿನ ಬಾಟಲಿಯೊಂದಿಗೆ ಸ್ಥಳಕ್ಕೆ ಧಾವಿಸಿ ಮಹಿಳೆಯನ್ನು ತನ್ನ ಬೆನ್ನಿನ ಮೇಲೆ ಕರೆದುಕೊಂಡು ಹೋಗಲು ನಿರ್ಧರಿಸಿದರು.