ತೈವಾನ್‌ನ ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಕಂಪನಿಯಾದ ಗೊಗೊರೊ ತನ್ನ ಗೊಗೊರೊ ಸೂಪರ್‌ಸ್ಪೋರ್ಟ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತದಲ್ಲಿ ಪ್ರಾರಂಭಿಸಿದೆ.
100ರಿಂದ 120CC ಸಾಮರ್ಥ್ಯವನ್ನು ಈ ಸ್ಕೂಟರ್ ಹೊಂದಿದೆ. ಲಿಕ್ವಿಡ್ ಕೂಲ್ಡ್ ಬ್ಯಾಟರಿ ಪ್ಯಾಕ್ ನೀಡುವ ಸ್ಕೂಟರ್ ಬ್ಯಾಟರಿ ಸ್ವಾಪಿಂಗ್ ತಂತ್ರಜ್ಞಾನವನ್ನು ಹೊಂದಿದೆ. ಗೊಗೊರೊ ಸೂಪರ್‌ಸ್ಪೋರ್ಟ್ ಪ್ರತಿ 1.3 kWh ಸಾಮರ್ಥ್ಯದ ಎರಡು ಬ್ಯಾಟರಿ ಪ್ಯಾಕ್‌ಗಳನ್ನು ನೀಡುತ್ತದೆ. 2.6 kWh ಶಕ್ತಿಯ ಎರಡು ಬ್ಯಾಟರಿಗಳೊಂದಿಗೆ, ಗೊಗೊರೊ ಸೂಪರ್‌ಸ್ಪೋರ್ಟ್ ಸುಮಾರು 170 ಕಿಮೀ ದೂರದ ವ್ಯಾಪ್ತಿಯನ್ನು ಒದಗಿಸುವ ನಿರೀಕ್ಷೆಯಿದೆ.
6 ಸೆಕೆಂಡುಗಳಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳಲ್ಲಿ ಖಾಲಿ ಬ್ಯಾಟರಿ ಪ್ಯಾಕ್‌ಗಳನ್ನು ಬದಲಾಯಿಸಿಕೊಳ್ಳಬಹುದು ಎಂದು ಕಂಪನಿ ಹೇಳಿಕೊಂಡಿದೆ. ಅನ್‌ಲಾಕ್ ಮಾಡಲು ಗೊಗೊರೊ ಕೀಲೆಸ್ ಎಂಟ್ರಿ, NFC ಸ್ಮಾರ್ಟ್‌ಕಾರ್ಡ್ ಅನ್ನು ಬಳಸಬಹುದು. ಹ್ಯಾಂಡಲ್ ಬಾರ್ ಸ್ವಯಂಚಾಲಿತವಾಗಿ ಲಾಕ್ ಆಗುತ್ತದೆ.
ಈ ಸ್ಕೂಟರ್ ಮುಂಭಾಗ ಮತ್ತು ಹಿಂದಿನ ಚಕ್ರಗಳಿಗೆ ಡಿಸ್ಕ್ ಬ್ರೇಕ್‌ಗಳನ್ನು ನೀಡಲಾಗಿದೆ.