ಯಶಸ್ಸು ಎಂಬುದು ತಕ್ಷಣಕ್ಕೆ ಸಿಗುವುದಲ್ಲ. ಸತತ ಪರಿಶ್ರಮ, ಪ್ರಾಮಾಣಿಕತೆಯಿಂದ ಯಶಸ್ಸನ್ನು ಪಡೆಯಬಹುದು. ಅಡ್ಡದಾರಿಯಿಂದ ಬಹುಬೇಗನೆ ನೀವು ಯಶಸ್ಸನ್ನು ತಲುಪಬಹುದೆಂದು ಭಾವಿಸಿರಬಹುದು. ಅದು ಆ ಕ್ಷಣಕ್ಕೆ ಯಶಸ್ಸನ್ನು ತಂದುಕೊಟ್ಟರೂ, ಹೆಚ್ಚು ಕಾಲ ಉಳಿಯುವುದಿಲ್ಲ.
ಸುಲಭ ಮಾರ್ಗದಲ್ಲಿ ಸಕ್ಸಸ್ ಪಡೆಯಲು ಹೆಚ್ಚಿನವರು ಇಷ್ಟ ಪಡುತ್ತಾರೆ. ಪರಿಶ್ರಮ, ಸರಿಯಾದ ದಾರಿಯಲ್ಲಿ ಪಡೆದ ಯಶಸ್ಸಿನಿಂದ ಸಿಗುವ ಸಂತೋಷ ಬೇರೆಯದೇ ಆಗಿರುತ್ತದೆ.
ಯಾವುದೇ ಕೆಲಸವನ್ನು ಆರಂಭಿಸುವಾಗ ಮೊದಲೇ ಪ್ಲಾನ್ ಮಾಡಿಕೊಂಡು ಆರಂಭಿಸಿ, ಹಂತ, ಹಂತವಾಗಿ ಕೆಲಸ ಮಾಡುವುದರಿಂದ ಆಯಾಸ ಕಾಣುವುದಿಲ್ಲ. ಆಲಸ್ಯದಿಂದ ಕೆಲಸವನ್ನು ಮಾಡದೇ ಆ ಸಮಯಕ್ಕೆ ಕೆಲಸವನ್ನು ಮುಗಿಸಬೇಕೆಂಬ ಉತ್ಸಾಹದಿಂದ ಕೆಲಸವನ್ನು ಮಾಡಿ.
ಕೆಲಸ, ಕಾರ್ಯಗಳನ್ನು ಒಂದೇ ಸಮನೇ ಮಾಡುವುದರಿಂದ ಪ್ರಯೋಜನವಿಲ್ಲ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೆಲಸದ ಜೊತೆಗೆ ಕೌಶಲ್ಯವೂ ಇರಬೇಕು. ಕೌಶಲ್ಯತೆ ನೀವು ಮುನ್ನಡೆಯಲು ಸಹಕಾರಿಯಾಗುತ್ತದೆ.
ಯಶಸ್ಸಿಗೆ ಕೌಶಲ್ಯತೆ, ಆತ್ಮ ವಿಶ್ವಾಸ ಕೂಡ ಮುಖ್ಯವಾಗಿದೆ. ಇವುಗಳಿಂದ ನಿಮಗೆ ಅವಕಾಶ ಹೆಚ್ಚಾಗಿ ಸಿಗುತ್ತವೆ.