ಕಾಡಿನಲ್ಲಿ ಆಹಾರ ಸಿಗದೆಯೇ ನಾಡಿನತ್ತ ವಲಸೆ ಬಂದ ಆನೆಗಳ ದೊಡ್ಡ ಹಿಂಡೊಂದು ಪಶ್ಚಿಮ ಬಂಗಾಳದ ಬಂಕುರಾದಲ್ಲಿನ ಸೋನಾಮುಖಿ ಪ್ರದೇಶದಲ್ಲಿನ ಅಂಗಡಿ ಮುಂಗಟ್ಟುಗಳನ್ನು ಪುಡಿಪುಡಿ ಮಾಡಿದೆ.
ಬೊರೊಜೊರಾ ವಲಯದ ತೋಟ-ಗದ್ದೆಗಳಲ್ಲಿನ ಬೆಳೆಗಳನ್ನು ಪೂರ್ಣವಾಗಿ ನಾಶಪಡಿಸಿದೆ. ಈ ಹಿಂಡಿನಲ್ಲಿದ್ದ ಸಲಗದ ರಭಸಕ್ಕೆ ಕೃಷಿಭೂಮಿಯಲ್ಲಿನ ಬೆಳೆಗಳು ಕೆಸರಿನಲ್ಲಿ ಬಿದ್ದು ಕೊಳೆಯುತ್ತಿವೆ. ಈ ಸಂಬಂಧ ಸ್ಥಳೀಯ ಅರಣ್ಯ ಇಲಾಖೆಯು ಶೀಘ್ರದಲ್ಲಿಯೇ ಸಂತ್ರಸ್ತರಿಗೆ ಪರಿಹಾರ ಕೊಡಿಸುವ ಭರವಸೆ ನೀಡಿದೆ.
ಮನೆಯಲ್ಲಿ ಈ ಮೂರ್ತಿ ಇದ್ದರೆ ಹೆಚ್ಚುತ್ತೆ ಸಂತಸ ಹಾಗೂ ಅದೃಷ್ಟ….!
ಮತ್ತೊಂದೆಡೆ, ಹುಲಾ ಪಾರ್ಟಿ (ಜೋರಾದ ಶಬ್ದ ಮಾಡುತ್ತಾ ಆನೆಗಳನ್ನು ಬೆನ್ನತ್ತುವ ವ್ಯವಸ್ಥೆ) ಮೂಲಕ ಆನೆಗಳ ಹಿಂಡನ್ನು ಕಾಡಿಗೆ ಪುನಃ ಅಟ್ಟಲು ಇಲಾಖೆ ಸಿದ್ಧತೆ ಮಾಡಿಕೊಂಡಿದೆ.