alex Certify BIG NEWS: ಲಸಿಕೆ ವಿಚಾರದಲ್ಲಿ ಹೊಸ ಮೈಲಿಗಲ್ಲು; 5-11 ವರ್ಷ ಮಕ್ಕಳಿಗಾಗಿ ಫಿಜರ್ ವ್ಯಾಕ್ಸಿನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಲಸಿಕೆ ವಿಚಾರದಲ್ಲಿ ಹೊಸ ಮೈಲಿಗಲ್ಲು; 5-11 ವರ್ಷ ಮಕ್ಕಳಿಗಾಗಿ ಫಿಜರ್ ವ್ಯಾಕ್ಸಿನ್

ವಾಷಿಂಗ್ಟನ್: ಯುನೈಟೆಡ್ ಸ್ಟೇಟ್ಸ್ 5 ರಿಂದ 11 ವರ್ಷ ವಯಸ್ಸಿನ ಮಕ್ಕಳಿಗೆ ಫಿಜರ್ ಕೋವಿಡ್ ಲಸಿಕೆ ನೀಡುವುದನ್ನು ಶುಕ್ರವಾರ ಅಧಿಕೃತಗೊಳಿಸಿದೆ, 28 ಮಿಲಿಯನ್ ಯುವ ಅಮೆರಿಕನ್ನರಿಗೆ ಶೀಘ್ರದಲ್ಲೇ ರೋಗನಿರೋಧಕ ಲಸಿಕೆ ಪಡೆಯಲು ಈ ನಿರ್ಧಾರ ದಾರಿ ಮಾಡಿಕೊಟ್ಟಿದೆ.

ಈ ವಾರ ಸರ್ಕಾರಕ್ಕೆ ಸಲಹೆ ನೀಡಿದ ಉನ್ನತ ಮಟ್ಟದ ವೈದ್ಯಕೀಯ ಸಮಿತಿಯು ಲಸಿಕೆ ನೀಡುವುದನ್ನು ಅನುಮೋದಿಸಿದ ನಂತರ ಈ ನಿರ್ಧಾರ ಹೊರ ಬಂದಿದೆ. ಅಡ್ಡಪರಿಣಾಮಗಳ ಅಪಾಯಗಳನ್ನು ಇವು ಮೀರಿವೆ ಎಂದು ಹೇಳಲಾಗಿದೆ.

ಯುನೈಟೆಡ್ ಸ್ಟೇಟ್ಸ್, ಚೀನಾ, ಚಿಲಿ, ಕ್ಯೂಬಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿದಂತೆ ಬೆರಳೆಣಿಕೆಯಷ್ಟು ಇತರ ದೇಶಗಳಲ್ಲಿ ವಿವಿಧ ಲಸಿಕೆಗಳನ್ನು ಕಿರಿಯ ಮಕ್ಕಳಿಗೆ ಲಸಿಕೆ ನೀಡಲಾಗ್ತಿದೆ.

ತಾಯಿ, ವೈದ್ಯರು, ಪೋಷಕರು, ಆರೈಕೆ ಮಾಡುವವರು, ಶಾಲಾ ಸಿಬ್ಬಂದಿ ಮತ್ತು ಮಕ್ಕಳು ಇಂದಿನ ದಿನಕ್ಕಾಗಿ ಕಾಯುತ್ತಿದ್ದಾರೆ ಎಂದು ನನಗೆ ತಿಳಿದಿದೆ ಎಂದು ಆಹಾರ ಮತ್ತು ಔಷಧ ಆಡಳಿತದ ಕಾರ್ಯನಿರ್ವಾಹಕ ಮುಖ್ಯಸ್ಥ ಜಾನೆಟ್ ವುಡ್‌ಕಾಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

COVID-19 ವಿರುದ್ಧ ಕಿರಿಯ ಮಕ್ಕಳಿಗೆ ಲಸಿಕೆ ನೀಡುವುದರಿಂದ ಸಾಮಾನ್ಯ ಸ್ಥಿತಿಗೆ ಮರಳಲು ನಮಗೆ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.

ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು(CDC) ಕ್ಲಿನಿಕಲ್ ಶಿಫಾರಸುಗಳನ್ನು ಮತ್ತಷ್ಟು ಚರ್ಚಿಸಲು ಮಂಗಳವಾರ ಸಮಿತಿಯನ್ನು ಕರೆದ ನಂತರ ಲಸಿಕೆ ರೋಲ್ ಔಟ್ ಪ್ರಾರಂಭವಾಗಬೇಕಿದೆ.

ಫಿಜರ್ ಮತ್ತು ಅದರ ಪಾಲುದಾರ ಬಯೋಎನ್‌ಟೆಕ್ ನಿಂದ ಈ ವಾರ 50 ಮಿಲಿಯನ್ ಗೂ ಹೆಚ್ಚಿನ ಡೋಸ್‌ ಗಳನ್ನು US ಸರ್ಕಾರವು ಖರೀದಿಸಿದೆ ಎಂದು ಘೋಷಿಸಿದ್ದು, ಇದು ಅಂತಿಮವಾಗಿ ಐದು ವರ್ಷದೊಳಗಿನ ಮಕ್ಕಳನ್ನು ಒಳಗೊಂಡಂತೆ ಮಕ್ಕಳನ್ನು ರಕ್ಷಿಸಲು ಕೆಲಸ ಮಾಡುತ್ತದೆ ಎನ್ನಲಾಗಿದೆ.

2,000 ಕ್ಕಿಂತ ಹೆಚ್ಚು ಜನ ಭಾಗವಹಿಸಿದ್ದ ಕ್ಲಿನಿಕಲ್ ಪ್ರಯೋಗದಲ್ಲಿ ರೋಗವನ್ನು ತಡೆಗಟ್ಟುವಲ್ಲಿ ಶೇಕಡ 90 ಕ್ಕಿಂತ ಹೆಚ್ಚು ಪರಿಣಾಮಕಾರಿ ಎಂಬುದನ್ನು ಈ ಲಸಿಕೆ ಸಾಬೀತುಪಡಿಸಿದೆ. ಲಸಿಕೆಯ ಸುರಕ್ಷತೆಯ ಬಗ್ಗೆ 3,000 ಕ್ಕೂ ಹೆಚ್ಚು ಮಕ್ಕಳಲ್ಲಿ ಅಧ್ಯಯನ ಮಾಡಲಾಗಿದೆ. ನಡೆಯುತ್ತಿರುವ ಅಧ್ಯಯನದಲ್ಲಿ ಯಾವುದೇ ಗಂಭೀರ ಅಡ್ಡಪರಿಣಾಮಗಳು ಪತ್ತೆಯಾಗಿಲ್ಲ.

ಈ ವಯಸ್ಸಿನ ಗುಂಪಿನವರಿಗೆ ಲಸಿಕೆಯನ್ನು ಮೂರು ವಾರಗಳ ಅಂತರದಲ್ಲಿ ಎರಡು ಬಾರಿ ನೀಡಲಾಗುತ್ತದೆ, 10 ಮೈಕ್ರೋಗ್ರಾಂಗಳಷ್ಟು ಪ್ರಮಾಣದಲ್ಲಿ ನೀಡಲಾಗುತ್ತದೆ. ಇದು ವಯಸ್ಸಾದವರಿಗೆ ನೀಡಲಾಗುವ ಲಸಿಕೆಯ ಮೂರನೇ ಒಂದು ಭಾಗದಷ್ಟು ಆಗಿದೆ.

ಸಿಡಿಸಿ ಪ್ರಕಾರ, ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ 5 ರಿಂದ 11 ವರ್ಷ ವಯಸ್ಸಿನ 8,300 ಮಕ್ಕಳು ಕೋವಿಡ್ ಆಸ್ಪತ್ರೆಗೆ ದಾಖಲಾಗಿದೆ. 146 ಸಾವುಗಳು ಸಂಭವಿಸಿವೆ.

ಮಕ್ಕಳಲ್ಲಿ ಮಲ್ಟಿಸಿಸ್ಟಮ್ ಉರಿಯೂತದ ಸಿಂಡ್ರೋಮ್‌ ನ(MIS-C) 5,000 ಕ್ಕೂ ಹೆಚ್ಚು ಪೀಡಿಯಾಟ್ರಿಕ್ ಪ್ರಕರಣಗಳು ಕಂಡುಬಂದಿವೆ.

ಸುರಕ್ಷತಾ ಮೇಲ್ವಿಚಾರಣೆ

ಇನ್ನು ಅಧ್ಯಯನದ ಸಂದರ್ಭದಲ್ಲಿ ಮಯೋಕಾರ್ಡಿಟಿಸ್ ಮತ್ತು ಪೆರಿಕಾರ್ಡಿಟಿಸ್(ಹೃದಯದ ಉರಿಯೂತ ಮತ್ತು ಹೃದಯದ ಸುತ್ತ ಉರಿಯೂತ) ನಂತಹ ಅತ್ಯಂತ ಅಪರೂಪದ ಅಡ್ಡ ಪರಿಣಾಮಗಳನ್ನು ಆರೋಗ್ಯ ಅಧಿಕಾರಿಗಳು ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸಲಿದ್ದಾರೆ.

ಕ್ಲಿನಿಕಲ್ ಪ್ರಯೋಗಗಳಲ್ಲಿ ಇವನ್ನು ಪತ್ತೆಹಚ್ಚುವುದು ಸುಲಭವಲ್ಲ. ಅವುಗಳು ಅತ್ಯಂತ ಅಪರೂಪವಾಗಿರುತ್ತವೆ. ಇದರ ಪರಿಣಾಮ ಟೆಸ್ಟೋಸ್ಟೆರಾನ್ ಮಟ್ಟಗಳಿಗೆ ಸಂಬಂಧಿಸಿದೆ ಎಂದು ಹೇಳಲಾಗಿದೆ.

ಕೋವಿಡ್ ಮಯೋಕಾರ್ಡಿಟಿಸ್‌ನ ಹೆಚ್ಚು ತೀವ್ರ ಸ್ವರೂಪಗಳಿಗೆ ಕಾರಣವಾಗಬಹುದು, ಇದು ಸಮುದಾಯದೊಳಗೆ ಹರಡುವ ಮಟ್ಟವನ್ನು ಅವಲಂಬಿಸಿರುತ್ತದೆ. ಮಕ್ಕಳ ಆರೋಗ್ಯವನ್ನು ರಕ್ಷಿಸುವುದರ ಹೊರತಾಗಿ, ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಈ ಗುಂಪಿಗೆ ಲಸಿಕೆ ಹಾಕುವುದರಿಂದ ಶಾಲೆ ಮತ್ತು ಇತರ ಚಟುವಟಿಕೆಗಳಿಗೆ ಅವಕಾಶ ಸಿಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಲಸಿಕೆಯನ್ನು ಪಡೆಯಬೇಕೆ ಎಂಬ ನಿರ್ಧಾರ ಮಗುವಿನ ಅಪಾಯಕಾರಿ ಅಂಶಗಳನ್ನು ಅವಲಂಬಿಸಿರುತ್ತದೆ ಮತ್ತು ಅದನ್ನು ಕುಟುಂಬಗಳಿಗೆ ಬಿಡಬೇಕು ಎಂದು ಹೇಳಲಾಗಿದೆ.

ಯುನೈಟೆಡ್ ಸ್ಟೇಟ್ಸ್ ತನ್ನ ಇತ್ತೀಚಿನ ಕರೋನವೈರಸ್ ತರಂಗದಿಂದ ಕಂಗೆಟ್ಟಿದೆ. ಡೆಲ್ಟಾ-ವೇರಿಯಂಟ್‌ನಿಂದ ಇತ್ತೀಚೆಗೆ ಸೋಂಕಿತರ ಸಂಖ್ಯೆ ಮತ್ತೆ ಏರಿಕೆಯಾಗ್ತಿದೆ. ವಿಶೇಷವಾಗಿ ಶೀತ ಪ್ರದೇಶವಾಗಿರುವ ಉತ್ತರದ ರಾಜ್ಯಗಳಲ್ಲಿ ವ್ಯಾಕ್ಸಿನೇಷನ್ ಕಾರ್ಯ ಹಿಂದುಳಿದಿದೆ ಎಂಬುದನ್ನು ಗಮನಿಸಬಹುದಾಗಿದೆ. ಅಮೆರಿಕದ ಒಟ್ಟು ಜನಸಂಖ್ಯೆಯ ಸುಮಾರು ಶೇಕಡ 58 ರಷ್ಟು ಜನ ಈಗ ಸಂಪೂರ್ಣವಾಗಿ ಲಸಿಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...