ತಪ್ಪು ತಿಳುವಳಿಕೆಯಿಂದಾಗಿ 18 ವರ್ಷದ ಯುವಕನನ್ನು ಹಾಡಹಗಲೇ 9 ಮಂದಿ ಸೇರಿ ಕೊಲೆಗೈದ ಘಟನೆಯು ಮಹಾರಾಷ್ಟ್ರದ ಪಾಲ್ಘರ್ನಲ್ಲಿ ನಡೆದಿದೆ.
ಪಾಲ್ಘರ್ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ 9 ಮಂದಿ ಯುವಕರು ವಿರಾರ್ನ ಮೀರಾ ರಸ್ತೆಯಲ್ಲಿ 18 ವರ್ಷದ ಯುವಕನನ್ನು ಕೊಲೆಗೈದಿದ್ದಾರೆ. ಈ ಸಂಬಂಧ ಕೊಲೆಯಾದ ಯುವಕನ ಸಂಬಂಧಿಗಳು ಪೊಲೀಸರಿಗೆ ದೂರನ್ನು ಸಲ್ಲಿಸಿದ್ದಾರೆ.
ಕೊಲೆಯಾದ ಯುವಕನನ್ನು ಶುಭಂ ಭುವದ್ ಎಂದು ಗುರುತಿಸಲಾಗಿದೆ. ಈತ ಮೀರಾ ರೋಡ್ ಏರಿಯಾದ ನಿವಾಸಿಯಾಗಿದ್ದು ಮೃತನ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಇಲ್ಲಿದೆ ಜಿಯೋ ಬಿಡುಗಡೆ ಮಾಡಿದ ಹೊಸ ಪ್ರೀಪೇಯ್ಡ್ ಪ್ಲಾನ್ಗಳ ವಿವರ
ಯಾರೋ ಎಂದು ತಿಳಿದು ಈತನನ್ನು ತಪ್ಪಾಗಿ ತಿಳಿದು ಕೊಲೆ ಮಾಡಿದ್ದೇವೆ ಎಂದು ಪೊಲೀಸರ ಎದುರು ಆರೋಪಿಗಳು ಹೇಳಿದ್ದಾರೆ. ಕೆಂಪು ಬಣ್ಣದ ಟೀ ಶರ್ಟ್ ಧರಿಸಿದ ಮತ್ತೊರ್ವ ಯುವಕನನ್ನು ಕೊಲೆ ಮಾಡಲು ಹೋಗಿ ಈತನೂ ಅದೇ ಬಣ್ಣದ ಟೀ ಶರ್ಟ್ ಧರಿಸಿದ್ದರಿಂದ ಈತನನ್ನು ಕೊಲೆ ಮಾಡಿರೋದಾಗಿ ಹೇಳಿದ್ದಾರೆ.