ನವದೆಹಲಿ: ಕಡತ ತ್ವರಿತ ವಿಲೇವಾರಿಗೆ ನವೆಂಬರ್ ನಿಂದ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ. ಸರ್ಕಾರಕ್ಕೆ ಒಂದು ಫೈಲ್ ಕಳುಹಿಸಿದರೆ ಅದು ಮೇಜಿನಿಂದ ಮೇಜಿಗೆ ಹೋಗಿ ವಿಲೇವಾರಿ ಆಗಲು ವರ್ಷಗಟ್ಟಲೆ ಸಮಯವಾಗುತ್ತದೆ. ಇದನ್ನು ತಡೆಯುವ ಉದ್ದೇಶದಿಂದ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ತಿಂಗಳಿನಿಂದ ಕ್ರಾಂತಿಕಾರಿ ಸುಧಾರಣೆ ಜಾರಿಗೆ ಬರಲಿದ್ದು, ಒಂದು ಕಡತ ನಾಲ್ಕಕ್ಕಿಂತ ಹೆಚ್ಚು ಕೈಗಳಿಗೆ ಹೋಗುವಂತಿಲ್ಲ. ಅತಿಬೇಗನೆ ಕಡತ ವಿಲೇವಾರಿ ಮಾಡಬೇಕಿದೆ. ತೀರ್ಮಾನ ಕೈಗೊಳ್ಳುವ ಪ್ರಕ್ರಿಯೆಗೆ ವೇಗ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ.
ಕೆಳಹಂತದಲ್ಲಿ ತೀರ್ಮಾನ ಕೈಗೊಳ್ಳಬಹುದಾದ ಕಡತಗಳನ್ನು ಮೇಲಾಧಿಕಾರಿಗಳಿಗೆ ರವಾನೆ ಮಾಡಲಾಗುತ್ತದೆ. ಇದರಿಂದ ವಿಳಂಬವಾಗುತ್ತದೆ. ಈ ಹಿನ್ನೆಲೆಯಲ್ಲಿ ಕಡತಗಳ ತ್ವರಿತ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದ್ದು, ಪ್ರಮುಖವಾಗಿ ಕೇವಲ ನಾಲ್ಕು ಹಂತದಲ್ಲಿ ಮಾತ್ರ ಫೈಲ್ ಬದಲಾವಣೆಯಾಗಬೇಕಿದೆ. ಹಿಂದೆ ಸುಮಾರು 7 ಬಾರಿ ಕೆಲವೊಮ್ಮೆ 12 ಬಾರಿ ಕಡತಗಳು ಕೈಯಿಂದ ಕೈಗೆ ಬದಲಾವಣೆಯಾಗುತ್ತಿತ್ತು. ಇದನ್ನು ಕಡಿಮೆ ಮಾಡಲು ತೀರ್ಮಾನಿಸಲಾಗಿದೆ. ಕಡತ ವಿಲೇವಾರಿಗೆ ಅಧಿಕಾರ ವಿಕೇಂದ್ರೀಕರಣದ ಮೂಲಕ ಕೆಳಹಂತದಲ್ಲಿಯೇ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಅವಶ್ಯವಿದ್ದರೆ ಮಾತ್ರ ಮೇಲಾಧಿಕಾರಿಗಳಿಗೆ ಫೈಲ್ ರವಾನೆ ಮಾಡಬೇಕಿದೆ.