alex Certify ಊಟ ವಿಳಂಬ ಮಾಡಿದ್ದಕ್ಕೆ ಪತ್ನಿಯನ್ನೇ ಹೊಡೆದು ಕೊಂದ ಪಾಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಊಟ ವಿಳಂಬ ಮಾಡಿದ್ದಕ್ಕೆ ಪತ್ನಿಯನ್ನೇ ಹೊಡೆದು ಕೊಂದ ಪಾಪಿ

ರಾತ್ರಿ ಊಟ ಬಡಿಸಲು ನಿಧಾನ ಮಾಡಿದ್ದಕ್ಕೆ ಕೋಪಗೊಂಡ 70 ವರ್ಷದ ಪತಿ, ಪತ್ನಿಯನ್ನು ಬರ್ಬರವಾಗಿ ಕೊಲೆಗೈದ ಅಮಾನವೀಯ ಘಟನೆಯು ಜಾರ್ಖಂಡ್​​ನ ಕುಂತಿ ಎಂಬಲ್ಲಿ ನಡೆದಿದೆ.

ಕುಂತಿ ಪೊಲೀಸ್​ ಠಾಣೆ ವ್ಯಾಪ್ತಿಯ ಕಲಿಮತಿ ಎಂಬ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೃತ ವೃದ್ಧೆಯನ್ನು ಹೀರಾಮಣಿ ಎಂದು ಗುರುತಿಸಲಾಗಿದೆ.

ಕುಂತಿ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಆರೋಪಿ ತಡರಾತ್ರಿ ಪಾನಮತ್ತನಾಗಿ ಮನೆಗೆ ತೆರಳಿದ್ದ. ಊಟದ ಸಮಯದಲ್ಲಿ ವಿಳಂಬವಾಗಿದ್ದಕ್ಕೆ ವೃದ್ಧ ದಂಪತಿಯ ನಡುವೆ ಕಲಹ ಏರ್ಪಟ್ಟಿತ್ತು. ಇದರಿಂದ ಕೋಪಗೊಂಡ ಪತಿಯು ಪತ್ನಿಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಪತಿಯು ಆಯುಧಗಳಿಂದ ದಾಳಿ ಮಾಡಿದ ಪರಿಣಾಮ ಹೀರಾಮಣಿಯ ತಲೆಗೆ ಪೆಟ್ಟಾಗಿತ್ತು. ಪ್ರಜ್ಞೆ ತಪ್ಪಿ ಬಿದ್ದಿದ್ದ ಹೀರಾಮಣಿ ಅತಿಯಾಗಿ ರಕ್ತಸ್ರಾವವಾದ ಹಿನ್ನೆಲೆಯಲ್ಲಿ ಸಾವನ್ನಪ್ಪಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...