17 ವರ್ಷದ ಅಪ್ರಾಪ್ತ 66 ಕೆವಿ ವಿದ್ಯುತ್ ಹೈಟೆನ್ಶನ್ ತಂತಿಯ ಮೇಲೆ ಹತ್ತುವ ಮೂಲಕ ಆತಂಕಕ್ಕೆ ಕಾರಣವಾದ ಘಟನೆ ಹರಿಯಾಣದ ಪಲ್ವಾಲ್ ಜಿಲ್ಲೆಯಲ್ಲಿ ನಡೆದಿದೆ. 4 ಗಂಟೆಗಳ ಕಾರ್ಯಾಚರಣೆಯ ಬಳಿಕ ಬಾಲಕನನ್ನು ಕೆಳಗೆ ಇಳಿಸುವಲ್ಲಿ ರಕ್ಷಣಾ ತಂಡ ಯಶಸ್ವಿಯಾಗಿದೆ.
ಅದೃಷ್ಟವಶಾತ್ ಅಪ್ರಾಪ್ತ ವಿದ್ಯುತ್ ಕಂಬ ಏರಿದ್ದ ವೇಳೆ ವಿದ್ಯುತ್ ಇರಲಿಲ್ಲ. ಈ ರೀತಿ ಆತಂಕಕ್ಕೆ ಕಾರಣವಾದ ಹುಡುಗ ಮಾನಸಿಕ ಅಸ್ವಸ್ಥ ಎನ್ನಲಾಗಿದೆ. ಈತನನ್ನು ಕೆಳಗೆ ಇಳಿಸುವಲ್ಲಿ ಯಶಸ್ವಿಯಾದ ಪೊಲೀಸರು ಆತನನ್ನು ಚಾದಂತ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ವಿದೇಶಿ ಡಿಗ್ರಿ ಪರೀಕ್ಷೆ ಪಾಸ್ ಮಾಡಲು ನಕಲಿ ಜ್ಯೋತಿಷಿ ಮೊರೆಹೋದ ವೈದ್ಯೆ…!
ಈ ವಿಚಾರ ಬೆಳಕಿಗೆ ಬರ್ತಿದ್ದಂತೆ ಪೊಲೀಸರು ವಿದ್ಯುತ್ ಇಲಾಖೆ ಸಿಬ್ಬಂದಿಯ ಜೊತೆಗೆ ಸ್ಥಳಕ್ಕೆ ಧಾವಿಸಿದ್ದರು. ವಿದ್ಯುತ್ ಇಲಾಖೆ ಸಿಬ್ಬಂದಿ ಹುಡುಗನನ್ನು ಕೆಳಗೆ ಇಳಿಸುವ ಪ್ರಯತ್ನಕ್ಕೆ ಮುಂದಾಗಿದ್ದರು. ಆದರೆ ಈ ಕೆಲಸ ಅಷ್ಟೊಂದು ಸುಲಭವಾಗಿರಲಿಲ್ಲ. ರಕ್ಷಣಾ ತಂಡವು ವಿದ್ಯುತ್ ಕಂಬವನ್ನೇರಲು ಪ್ರಾರಂಭಿಸುತ್ತಿದ್ದಂತೆಯೇ ಬಾಲಕ ಕಂಬದಿಂದ ಜಿಗಿಯುವುದಾಗಿ ಬೆದರಿಕೆಯೊಡ್ಡಿದ್ದಾನೆ.
ರಕ್ಷಣಾ ತಂಡದ ಎದುರು ಬಾಲಕ ಹತ್ತಾರು ಬೇಡಿಕೆಗಳನ್ನು ಇಟ್ಟಿದ್ದಾನೆ. ಅದನ್ನು ಪೂರೈಸಿದ ಬಳಿಕವೂ ಅವನು ಕೆಳಗೆ ಇಳಿಯಲು ತಯಾರಿರಲಿಲ್ಲ. ಆದರೆ ಗಂಟೆಗಳ ಪ್ರಯತ್ನದ ಬಳಿಕ ಅಪ್ರಾಪ್ತನನ್ನು ಕೆಳಗೆ ಇಳಿಸುವಲ್ಲಿ ರಕ್ಷಣಾ ತಂಡ ಯಶಸ್ವಿಯಾಗಿದೆ.