ವಿಶ್ವದ ಅತಿದೊಡ್ಡ ಕೋವಿಡ್ ವಿರುದ್ಧದ ಲಸಿಕಾ ಅಭಿಯಾನ ಭಾರತದಲ್ಲಿ ನಡೆಯುತ್ತಿದೆ. ಈ ವೇಳೆ ವಿವಿಧ ಕಡೆ ಒಂದಷ್ಟು ಸಣ್ಣ ಪುಟ್ಟ ವ್ಯತ್ಯಾಸಗಳಾಗಿವೆ.
ಕಾನ್ಪುರ ಪ್ರದೇಶದ ಜಲಾನ್ ಎಂಬಲ್ಲಿ ಆರೋಗ್ಯ ಸಿಬ್ಬಂದಿಯು ಎಪ್ಪತ್ತು ವರ್ಷದ ಮಹಿಳೆಗೆ ಕೆಲವೇ ನಿಮಿಷಗಳ ಅಂತರದಲ್ಲಿ ಎರಡು ಬಾರಿ ಲಸಿಕೆ ನೀಡಿಬಿಟ್ಟಿದ್ದಾರೆ.
ಜಯಘಾ ಬ್ಲಾಕ್ ಎಂಬಲ್ಲಿ ಸ್ಥಳೀಯರಿಗೆ ಲಸಿಕೆ ನೀಡಲು ಎರಡು ಕೌಂಟರ್‌ಗಳನ್ನು ಸ್ಥಾಪಿಸಲಾಗಿತ್ತು. ಮೊದಲ ಕೌಂಟರ್‌ನಲ್ಲಿ ಭಗವತಿ ದೇವಿ ಎಂಬಾಕೆಗೆ ಲಸಿಕೆ ನೀಡಿದ್ದು, ಆಕೆ ಹೊರಡಲು ಅನುವಾದಾಗ ಅಲ್ಲಿದ್ದ ಸಿಬ್ಬಂದಿ ಎರಡನೇ ಕೌಂಟರ್‌ನಲ್ಲಿ ಪ್ರಮಾಣಪತ್ರ ಪಡೆದುಕೊಳ್ಳುವಂತೆ ತಿಳಿಸಿದ್ದಾನೆ.
ದೋಷ ನಿವಾರಕ ಏಲಕ್ಕಿ ಯಿಂದ ಹೀಗೆ ‘ಲಾಭ’ ಪಡೆಯಿರಿ
ಆಕೆ ಅಲ್ಲಿಗೆ ತೆರಳಿ ಕಾರ್ಡ್ ಕೇಳಿದಾಗ, ಅಲ್ಲಿನ ಉದ್ಯೋಗಿಗಳು ಡೋಸ್ ನೀಡಿದ ನಂತರ ನೀಡಲಾಗುವುದು ಎಂದು ಹೇಳಿದರಲ್ಲದೇ ಕೆಲವೇ ನಿಮಿಷಗಳಲ್ಲಿ, ವಯಸ್ಸಾದ ಮಹಿಳೆಗೆ ಲಸಿಕೆಯ ಇನ್ನೊಂದು ಡೋಸ್ ನೀಡಿದರು.
ಅವಳು ಈಗಾಗಲೇ ಡೋಸ್ ತೆಗೆದುಕೊಂಡಿದ್ದಾಳೆ ಎಂದು ಎಂದು ನಂತರವಷ್ಟೇ ತಿಳಿದು ಗಾಬರಿ ಬಿದ್ದರು. ಈ ನಡುವೆ ಒಟ್ಟೊಟ್ಟಿಗೆ ಎರಡು ಲಸಿಕೆ ಪಡೆದಾಕೆಯ ಆರೋಗ್ಯದ ಸ್ಥಿತಿ ಹದಗೆಡಲು ಪ್ರಾರಂಭಿಸಿತು. ತಕ್ಷಣ ಅವಳನ್ನು ಹತ್ತಿರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಯಿತು. ಸದ್ಯ ಆಕೆಯ ಸ್ಥಿತಿ ಈಗ ಸ್ಥಿರವಾಗಿದೆ ಎಂದು ವೈದ್ಯಾಧಿಕಾರಿ ತಿಳಿಸಿದ್ದಾರೆ.