ಅತ್ಯಪರೂಪದಲ್ಲೇ ಅತ್ಯಪರೂಪವಾದ ನಿದರ್ಶನವೊಂದರಲ್ಲಿ ಮಹಿಳೆಯೊಬ್ಬರ ಲಿವರ್‌ನಲ್ಲಿ ಭ್ರೂಣ ಬೆಳೆಯುತ್ತಿರುವುದು ಅಲ್ಟ್ರಾಸೌಂಡ್ ಪರೀಕ್ಷೆಯಲ್ಲಿ ಕಂಡು ಬಂದಿದೆ. ಈ ವೈದ್ಯಕೀಯ ಪರಿಸ್ಥಿತಿಯನ್ನು ಎಕ್ಟೋಪಿಕ್ ಗರ್ಭಧಾರಣೆ ಎನ್ನಲಾಗುತ್ತದೆ.
ಕೆನಡಾದ ಮಾನಿಟೋಬಾದಲ್ಲಿರುವ ಮಕ್ಕಳ ಆಸ್ಪತ್ರೆ ಸಂಶೋಧನಾ ಸಂಸ್ಥೆಯ ಪೆಡಿಯಾಟ್ರಿಷಿಯನ್ ವೈದ್ಯ ಮೈಕೇಲ್ ನಾರ್ವೇ ಈ ಪ್ರಕರಣವನ್ನು ಪತ್ತೆ ಮಾಡಿದ್ದಾರೆ. ಅಲ್ಟ್ರಾಸೌಂಡ್ ಮಾಡುವ ವೇಳೆ ಮಹಿಳೆಯ ಲಿವರ್‌ನಲ್ಲಿ ಮಗು ಬೆಳೆಯುತ್ತಿರುವುದು ಕಂಡು ಬಂದಿದೆ.
ಗರ್ಭದಿಂದ ಹೊರಗೆ ಮಗು ಬೆಳೆಯುವ ಈ ಅಪರೂಪದ ನಿದರ್ಶನವು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಸಂಭವಿಸುವ ಜನನಗಳ ಪೈಕಿ 1-2% ಪ್ರಕರಣಗಳಲ್ಲಿ ಸಂಭವಿಸುತ್ತದೆ. ಆದರೆ ಈ ಪರಿಸ್ಥಿತಿಯಿಂದಾಗಿ ಗರ್ಭಧಾರಣೆಯ ಮೊದಲ ಮೂರೇ ತಿಂಗಳಲ್ಲಿ ನಿಧನರಾಗುವ ಮಹಿಳೆಯರ ಸಂಖ್ಯೆ 6-13%ನಷ್ಟಿದೆ.
ತ್ವರಿತವಾಗಿ ಚಾರ್ಜ್ ಆಗುವ ಬ್ಯಾಟರಿಗಾಗಿ ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ನೊಂದಿಗೆ ಕೈಜೋಡಿದ ಹೀರೋ ಎಲೆಕ್ಟ್ರಿಕ್
ಟಿಕ್‌ಟಾಕ್‌ನಲ್ಲಿ ಈ ವಿಷಯ ಹಂಚಿಕೊಂಡ ವೈದ್ಯ, ಅಲ್ಟ್ರಸೌಂಡ್ ಪರೀಕ್ಷೆಯ ಕ್ಲಿಪ್ ಶೇರ್ ಮಾಡಿ, “ನಾನು ಎಲ್ಲ ಥರದ್ದನ್ನೂ ನೋಡಿದ್ದೇನೆ ಎಂದುಕೊಂಡಿದ್ದೆ. 33 ವರ್ಷದ ಈ ಮಹಿಳೆ ತನ್ನ ಋತು ಚಕ್ರದ 49 ದಿನಗಳ ಬಳಿಕ 14 ದಿನಗಳ ಋತುಸ್ರಾವದ ಇತಿಹಾಸದೊಂದಿಗೆ ನಮ್ಮ ಬಳಿ ಬಂದಿದ್ದಾರೆ.”
“ಆಕೆಯ ಲಿವರ್‌ನಲ್ಲಿ ಮಗು ಕಂಡುಬಂದಿದೆ. ಆಕೆಗೆ ಎಕ್ಟೋಪಿಕ್ ಗರ್ಭಧಾರಣೆ ಆಗಿದೆ. ಕೆಲವೊಮ್ಮೆ ನಾವು ಕಿಬ್ಬೊಟ್ಟೆಯಲ್ಲಿ ಹೀಗಾಗುವುದನ್ನು ನೋಡಿದ್ದೇವೆ ಆದರೆ ಲಿವರ್‌ನಲ್ಲಿ ಎಂದೂ ನೋಡಿಲ್ಲ,” ಎಂದು ವಿವರಿಸಿದ್ದಾರೆ.