ಗಂಡ -ಹೆಂಡತಿಯ ಸಂಬಂಧ ಜನ್ಮಜನ್ಮದ ಅನುಬಂಧ ಎಂಬ ಮಾತು ಗೊತ್ತೇ ಇದೆ. ಪತಿಗೆ ಏನಾದರೂ ತೊಂದರೆ ಆದಾಗ ತನ್ನ ಸರ್ವಸ್ವವನ್ನು ಕೂಡ ಧಾರೆ ಎರೆಯುವ ಪತ್ನಿಯ ಬಗ್ಗೆ ಅನೇಕ ಪುರಾಣ ಕಥೆಗಳಲ್ಲಿ ಉಲ್ಲೇಖ ಕೂಡ ಇದೆ. ಆದರೆ, ಇಕ್ವೆಡಾರ್‌ನ ಎಲ್ ಗುವಾಬೊದಲ್ಲಿ ನಡೆದ ವಿಚಿತ್ರ ಘಟನೆಯಲ್ಲಿ ಪೊಲೀಸ್ ವಾಹನ ಏರಿ ಕುಳಿತಿದ್ದ ಪತಿರಾಯನ ಹಿಂದೆ ನವವಧು ಓಡಿದ ವಿಡಿಯೊವೊಂದು ಭಾರಿ ವೈರಲ್ ಆಗಿದೆ…!
ಅರೆ ಯಾಕೆ ಹೀಗೆ ಎಂದು ಪ್ರಶ್ನೆ ಮೂಡುತ್ತಿದೆಯೇ..? ಅದಕ್ಕೆ ಉತ್ತರ ವರ ಮಹಾಶಯನು ತಾನು ಸಂಬಂಧ ಹೊಂದಿದ್ದ ಮತ್ತೊಬ್ಬ ಹೆಂಗಸಿಗೆ ಜೀವನಾಂಶ ಕೊಡದೆಯೇ ಹೊಸದಾಗಿ ಮದುವೆಯಾಗಲು ಮುಂದಾಗಿದ್ದ. ಸಂಬಂಧ ಹೊಂದಿದ್ದ ಮಹಿಳೆಗೆ ಈತ ಮಕ್ಕಳನ್ನು ಕೂಡ ಕೊಟ್ಟಿದ್ದ. ಆದರೆ ಅವರ ಪಾಲನೆಗೆ ಅಗತ್ಯ ಆರ್ಥಿಕ ನೆರವು ಕೊಡದೆಯೇ ಮತ್ತೊಬ್ಬಳೊಂದಿಗೆ ವಿವಾಹವಾಗಲು ಮುಂದಾಗಿದ್ದ.
ಹೆಣ್ಮಕ್ಳೇ ಸ್ಟ್ರಾಂಗ್ ಗುರೂ….! ಸ್ಕರ್ಟ್ ಧರಿಸಿ ರಸ್ತೆಯಲ್ಲಿ ಪಲ್ಟಿ ಹೊಡೆದ ಯುವತಿ
ಪೊಲೀಸರಿಗೆ ಈ ಬಗ್ಗೆ ದೂರು ಸಿಕ್ಕಿತ್ತು. ಕೂಡಲೇ ಅವರು ಮದುವೆ ಮಂಟಪಕ್ಕೆ ನುಗ್ಗಿದ್ದರು. ನವ ವರನನ್ನು ಜೀಪಿನಲ್ಲಿ ಎತ್ತಾಕ್ಕೊಂಡು ಹೋದರು. ಆಗ ವಧುವು ವಾಹನದ ಹಿಂದೆ ಓಡಿದ್ದಾಳೆ.