
ದಿನೇ ದಿನೇ ನಿಯಂತ್ರಣ ಮೀರಿ ಏರುತ್ತಲೇ ಇರುವ ಇಂಧನ ಬೆಲೆಗಳ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ವಿರೋಧ ಪಕ್ಷಗಳ ಕೆಲ ನಾಯಕರು, 1973ರ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ.
ಈ ವಿಡಿಯೋದಲ್ಲಿ, ಇಂಧನ ಬೆಲೆಯಲ್ಲಿ 7 ಪೈಸೆ ಹೆಚ್ಚಾಗಿದ್ದಕ್ಕೆ ಸಂಸತ್ತಿಗೆ ಎತ್ತಿನಗಾಡಿಯಲ್ಲಿ ಆಗಮಿಸಿದ್ದ ಮಾಜಿ ಪ್ರಧಾನಿ ಹಾಗೂ ವಿರೋಧ ಪಕ್ಷದ ಅಂದಿನ ನಾಯಕ ಅಟಲ್ ಬಿಹಾರಿ ವಾಜಪೇಯಿ ಆಗಿನ ಸರ್ಕಾರದ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿದ್ದರು.
ನಾಳೆಯಿಂದ ರಾಜ್ಯದಲ್ಲಿ ದೇಗುಲಗಳು ಓಪನ್; ಆದರೆ ಶ್ರೀಕೃಷ್ಣನ ದರ್ಶನಕ್ಕಿಲ್ಲ ಒಂದು ವಾರ ಅವಕಾಶ
ಅಂದಿನ ದಿನಗಳಲ್ಲಿ ಜನ ಸಂಘದ ಮುಂಚೂಣಿ ನಾಯಕರಾಗಿದ್ದ ಅಟಲ್‌ರ ಪ್ರತಿಭಟನೆಯ ವಿಡಿಯೋ ತುಣುಕು ಶೇರ್ ಮಾಡಿದ ಕಾಂಗ್ರೆಸ್ ಸಂಸದ ಶಶಿ ತರೂರ್, “ಪೆಟ್ರೋಲ್ ಬೆಲೆಯಲ್ಲಿ 7 ಪೈಸೆ ಏರಿಕೆಯಾಗಿದ್ದನ್ನು ವಿರೋಧಿಸಿ ವಿಪಕ್ಷಗಳು ಪ್ರತಿಭಟನೆಗೆ ಮುಂದಾಗಿದ್ದ ಅಪರೂಪದ ವಿಡಿಯೋ ಫುಟೇಜ್. ಅಟಲ್ ಬಿಹಾರಿ ವಾಜಪೇಯಿ ಅವರು ಸಂಸತ್ತಿಗೆ ಎತ್ತಿನ ಗಾಡಿಯಲ್ಲಿ ಬಂದಿದ್ದರು (ಇಂದಿನ ದಿನಗಳ ಭದ್ರತೆಯ ಹೊಸ ನಿಯಮಗಳ ಅನುಸಾರ ಹೀಗೆಲ್ಲಾ ಮಾಡಲು ಈಗ ಆಗುವುದಿಲ್ಲ !)” ಎಂದು ಟ್ವೀಟ್ ಮಾಡಿದ್ದಾರೆ.
ಆಪರೇಷನ್ ಥಿಯೇಟರ್ ನಲ್ಲೇ ನಕಲಿ ವೈದ್ಯನಿಂದ ಅತ್ಯಾಚಾರಕ್ಕೆ ಯತ್ನ
ದೇಶದ ಅನೇಕ ಕಡೆಗಳಲ್ಲಿ ಪೆಟ್ರೋಲ್ ಬೆಲೆ 100 ರೂ./ಲೀ ದಾಟಿದ್ದು, ದೆಹಲಿ ಹಾಗೂ ಕೋಲ್ಕತ್ತಾಗಳಲ್ಲಿ ಮಾತ್ರವೇ ಇನ್ನೂ ಈ ಗಡಿ ದಾಟಬೇಕಿದೆ.