ನಾಯಿಯೊಂದು ಹಾವಿನ ಜತೆ ಜಗಳಕ್ಕಿಳಿದು ಅದರಿಂದ ಕಚ್ಚಿಸಿಕೊಂಡು ಮುಖ ಊದಿಸಿಕೊಂಡ ಪ್ರಸಂಗವೊಂದು ನಡೆದಿದೆ.
ಚೀನಾದ ವ್ಯಕ್ತಿಯೊಬ್ಬ ತನ್ನ ಸಾಕು ನಾಯಿಯ ಮುಖ ಅನಿರೀಕ್ಷಿತವಾಗಿ ಊದಿಕೊಂಡಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ. ಆ ನಾಯಿ ಮುಖ ವಿಪರೀತ ಊದಿಕೊಂಡಿತ್ತು. ಅದರ ಹಿಂದಿನ ಕತೆಯನ್ನೂ ಆತ ವಿವರಿಸಿದ್ದಾನೆ.
ತನ್ನ ಮನೆಯ ನಾಯಿ ಸೂಬಿಯ ಮುಖ ಏಕಾಏಕಿ ಊದಿಕೊಂಡಿದ್ದೇಕೆ ಎಂದು ಆತನಿಗೆ ಮೊದಲು ಅರ್ಥವಾಗಲೇ ಇಲ್ಲವಂತೆ. ನಾಯಿ ಕೂಡ ಮನೆಯೊಳಗೆ ಬರುತ್ತಿರಲಿಲ್ಲ. ಕೊನೆಗೆ ಆತ ತಕ್ಷಣವೇ ಗಾಬರಿಗೊಂಡು ನಾಯಿಯ ಫೋಟೋ ಕ್ಲಿಕ್ಕಿಸಿ ಪಶುವೈದ್ಯರಿಗೆ ಕಳುಹಿಸಿದ. ವೈದ್ಯರು ಈ ಲಕ್ಷಣ ನೋಡಿ ನಾಯಿಗೆ ವಿಷಕಾರಿ ಹಾವು ಕಚ್ಚಿದೆ ಎಂದು ಖಚಿತಪಡಿಸಿದರು.
‘ಕಾಂಗ್ರೆಸ್ ಗೆ ಜಾತಿ ಕೆಸರು ಹಚ್ಚಿದ ಡಿಕೆಶಿ, ಸಿದ್ಧರಾಮಯ್ಯ: ರಮೇಶ್ ಕುಮಾರ್ ಹೇಳಿಕೆಯಿಂದ ಕಾಂಗ್ರೆಸ್ ಭ್ರಷ್ಟತನ ಬಯಲು’
ಚೀನಾದಲ್ಲಿ ಕಂಡುಬರುವ ವಿಷಕಾರಿ ಹಾವು ಪಿಟ್ ವೈಪರ್ನಿಂದ ಕಚ್ಚಲ್ಪಟ್ಟಿದೆ ಎಂಬುದೂ ಸಹ ಖಚಿತವಾಯಿತು. ನಂತರ, ಸೂಬಿಯನ್ನು ಚಿಕಿತ್ಸೆಗಾಗಿ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಯಿತು. ಬಳಿಕ ವಿಷ ನಿಧಾನವಾಗಿ ಇಳಿಯಿತು, ಮುಖವು ಸಹಜಸ್ಥಿತಿಗೆ ಬಂದಿತು.
ಸೂಬಿ ಊದಿದ ಮುಖದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಾಯಿ ಅದೃಷ್ಟಶಾಲಿ ಎಂದು ಕೆಲವರು ಹೇಳಿದರೆ, ಸೂಕ್ತ ಸಮಯಕ್ಕೆ ಚಿಕಿತ್ಸೆ ನೀಡಿದ ನಾಯಿ ಯಜಮಾನನನ್ನು ಮತ್ತೆ ಕೆಲವರು ಶ್ಲಾಘಿಸಿದರು.
ಸೂಬಿಯ ಮಾಲೀಕ ಮೂರು ದಿನಗಳ ನಂತರ ನಾಯಿ ಸ್ಥಿತಿಯ ಬಗ್ಗೆ ಮತ್ತೊಮ್ಮೆ ಅಪ್ಡೇಟ್ ನೀಡಿದ್ದು, ಊದಿದ್ದ ಮುಖ ಸಹಜ ಸ್ಥಿತಿಗೆ ಬಂದಿದ್ದು, ಚೇತರಿಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.