ಸಣ್ಣ ಆಗ್ಬೇಕು….. ಚೆನ್ನಾಗಿ ಕಾಣಿಸ್ಬೇಕು ಅನ್ನೋ ಆಸೆ ಯಾರಿಗೆ ಇರೋಲ್ಲ ಹೇಳಿ. ಇದಕ್ಕಾಗಿ ಜಿಮ್ ಹೋಗಿ ವರ್ಕೌಟ್ ಮಾಡೋದು, ಡಯಟ್ ಮಾಡೋದು ಕಾಮನ್. ಇಷ್ಟೆಲ್ಲ ಮಾಡಿದ್ರೂ ಕೆಲವರ ತೂಕ ಮಾತ್ರ ಕಡಿಮೆ ಆಗೋಲ್ಲ. ಚೀನಾದಲ್ಲೂ ಒಬ್ಬ ಮಹಿಳೆ ಎಷ್ಟು ಮಾಡಿದರೂ ಕಡಿಮೆ ಆಗದ ತೂಕದಿಂದ ವೈದ್ಯರ ಬಳಿ ಚಿಕಿತ್ಸೆಗೆ ಹೋಗಿದ್ದಾರೆ.
ಆ ಮಹಿಳೆಯ ಬಾಡಿ ಫುಲ್ ಚೆಕ್ಅಪ್ ಮಾಡಿದ ಮೇಲೆ ಡಾಕ್ಟರ್ ಕೊಟ್ಟ ಸುದ್ದಿ ಎಂಥವರೂ ಕೂಡಾ ಬೆಚ್ಚಿಬೀಳುವ ಹಾಗಿತ್ತು. ಕಾರಣ ಆಕೆಯ ಹೊಟ್ಟೆಯಲ್ಲಿ ಇದ್ದ ಗೆಡ್ಡೆಯೇ ಆಕೆಯ ತೂಕ ಹೆಚ್ಚಾಗೋದಕ್ಕೆ ಕಾರಣ ಅಂತ ವೈದ್ಯರು ಹೇಳಿದ್ದರು.
BIG NEWS: ಬೇವು ಬಿತ್ತಿ ಮಾವು ಬಯಸಲು ಸಾಧ್ಯವೇ……? ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಕುಟುಕಿದ ಬಿಜೆಪಿ
ಜಿಯಾಂಗ್ಸೂ ನಗರದಲ್ಲಿ ವಾಸಿಸೋ, ಲೀನ್ ಅನ್ನೋ ಮಹಿಳೆ ಹೆಚ್ಚಾಗುತ್ತಿರೋ ತೂಕದಿಂದ ಅನಾರೋಗಕ್ಕೆ ಒಳಗಾಗಿದ್ದಳು. ವ್ಯಾಯಾಮ, ಡಯಟ್ ಮಾಡಿದರೂ ತೂಕ ಮಾತ್ರ ಕಡಿಮೆ ಆಗುತ್ತಿರಲಿಲ್ಲ. ಕೊನೆಗೆ ವೈದ್ಯರು ಆ ಮಹಿಳೆ ಸಮಸ್ಯೆಗೆ ಕಾರಣ ಆಕೆಯ ಹೊಟ್ಟೆಯಲ್ಲಿ 18.1 ಇಂಚಿನ ಟ್ಯೂಮರ್ ಅಂದರೆ 11ಕಿಲೋ ಗೆಡ್ಡೆಯೇ ಕಾರಣ ಅನ್ನಲಾಯಿತು. ತಕ್ಷಣವೇ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿಸಿ ಗೆಡ್ಡೆಯನ್ನ ಹೊಟ್ಟೆಯಿಂದ ಹೊರಗೆ ತೆಗೆದಿದ್ದಾರೆ. ಈ ಗೆಡ್ಡೆ ಇರುವುದರಿಂದಲೇ ಆಕೆಯ ಆರೋಗ್ಯ ಪದೇ-ಪದೇ ಹದಗೆಡುತ್ತಿತ್ತು. ಈಗ ಆಪರೇಷನ್ ನಂತರ, ಆಕೆಯ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.