ತನ್ನ ದೇಶದಲ್ಲಿ ಸಿಗುವ ಮಾಂಸದ ಪ್ರಮುಖ ಮೂಲವಾದ ಹಂದಿಗಳಿಗೆ ಯಾವುದೇ ವೈರಾಣುಗಳ ಕಾಟ ಬಾರದೇ ಇರಲಿ ಎಂದು ಅವುಗಳನ್ನು ದೊಡ್ಡ ಮಟ್ಟದ ಜೈವಿಕ ಭದ್ರತೆಯಲ್ಲಿ ಇಡಲು ಚೀನಾ ಮುಂದಾಗಿದೆ.
2018ರಲ್ಲಿ ಆಫ್ರಿಕಾದ ಹಂದಿ ಜ್ವರದಿಂದ ಚೀನಾದಲ್ಲಿರುವ ಅರ್ಧದಷ್ಟು ಹಂದಿಗಳು ಮೃತಪಟ್ಟಿರುವ ಕಾರಣ, ಬಹುಅಂತಸ್ತಿನ ಹೊಟೇಲುಗಳಲ್ಲಿ ಹಂದಿಗಳನ್ನು ಸುಭದ್ರವಾಗಿ ಇಡಲು ಚೀನಾದ ಅಧಿಕಾರಿಗಳು ಮುಂದಾಗಿದ್ದಾರೆ.
ಚೀನಾದಲ್ಲಿರುವ 400 ದಶಲಕ್ಷ ಹಂದಿಗಳ ಪೈಕಿ ಅರ್ಧಕ್ಕಿಂತ ಹೆಚ್ಚು ಈ ವೈರಾಣುಗಳಿಗೆ ಬಲಿಯಾದ ಕಾರಣ ಹಂದಿಮಾಂಸಕ್ಕೆ ಬರ ಬಂದಿದೆ. ಈ ಕಾರಣದಿಂದ ಹಂದಿ ಮಾಂಸದ ಬೆಲೆ ಗಗನಕ್ಕೇರಿದೆ.
ಮಕ್ಕಳ ಅಶ್ಲೀಲ ಚಿತ್ರಗಳನ್ನು ಇನ್ಮುಂದೆ ಸುಲಭವಾಗಿ ಪತ್ತೆ ಹಚ್ಚಲಿದೆ ಐ ಫೋನ್…..!
ತನ್ನ ಜೈವಿಕಭದ್ರತೆಯನ್ನು ಖಾತ್ರಿ ಪಡಿಸಲು ಅಮೆರಿಕ, ಯೂರೋಪ್‌ಗಳಂಥ ದೇಶಗಳಲ್ಲಿ ಅನುಸರಿಸುವ ಉತ್ತಮ ಅಭ್ಯಾಸಗಳನ್ನು ಚೀನಾ ತನ್ನಲ್ಲೂ ಅಳವಡಿಸಿಕೊಳ್ಳುತ್ತಿರುವ ಭಾಗವಾಗಿ ಹೀಗೆ ಮಾಡಿದೆ.