ಒಮಿಕ್ರಾನ್‌ನಿಂದ ಭಾರತದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ನಡುವೆ, ಕೇಂದ್ರ ಆರೋಗ್ಯ ಸಚಿವಾಲಯ ಕೋವಿಡ್ ಚಿಕಿತ್ಸೆ ಸಂಬಂಧ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಹೊಸ ಮಾರ್ಗಸೂಚಿಗಳ ಅನುಸಾರ, ಕೋವಿಡ್-19ನ ಲಘು ಲಕ್ಷಣಗಳಿರುವ ಮಂದಿಗೆ ಮನೆಯಲ್ಲೇ ಇದ್ದುಕೊಂಡು, ಸೋಂಕು ವ್ಯಾಪಿಸದೇ ಇರಲು ತೆಗೆದುಕೊಳ್ಳಬೇಕಾದ ಸರಳ ಕ್ರಮಗಳನ್ನು ತೆಗೆದುಕೊಂಡರೆ ಸಾಕು.
ಅಲ್ಪ ಮಟ್ಟದ ಸೋಂಕಿನ ಲಕ್ಷಣಗಳು ಕಂಡು ಬರುವ ಮಂದಿಯ ಪೈಕಿ ಆಮ್ಲಜನಕದ ಸಂತೃಪ್ತಿ ದರ 90-93 ಪ್ರತಿಶತ ಇದ್ದಲ್ಲಿ, ಕೋವಿಡ್ ಚಿಕಿತ್ಸೆಗೆ ಕ್ಲಿನಿಕಲ್ ವಾರ್ಡ್‌ಗೆ ದಾಖಲಾಗಬೇಕು. ಇಂಥ ರೋಗಿಗಳಿಗೆ ಆಮ್ಲಜನಕದ ಬೆಂಬಲ ಕೊಡಬೇಕಾಗುತ್ತದೆ.
ಸೋಂಕಿನ ತೀವ್ರತೆ ಹೆಚ್ಚಾಗಿರುವ ಮಂದಿಯಲ್ಲಿ ಆಮ್ಲಜನಕದ ಪ್ರಮಾಣ 90%ಗಿಂತ ಕಡಿಮೆ ಇದ್ದಲ್ಲಿ ಮೊದಲು ಅವರನ್ನು ಐಸಿಯುಗೆ ದಾಖಲಿಸಬೇಕು. ಇಂಥ ರೋಗಿಗಳನ್ನು ಉಸಿರಾಟದ ಬೆಂಬಲದ ವ್ಯವಸ್ಥೆಯಲ್ಲಿ ಇಡಬೇಕು. ಮಿಕ್ಕಂತೆ, ಮಾರ್ಗಸೂಚಿಯಲ್ಲಿ ವೈಜ್ಞಾನಿಕವಾಗಿ ತಿಳಿಸಲಾದ ಸೂಚನೆಗಳಂತೆ ಚಿಕಿತ್ಸೆ ಮುಂದುವರೆಸಿ, ಚೇತರಿಕೆ ಕಂಡ ಬಳಿಕ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕು.
ಇದೇ ವೇಳೆ, ರೆಮ್‌ಡೆಸಿವಿರ್ ಮತ್ತು ಟಾಕ್ಲಿಜ಼ುಮಾಬ್ ಮಾತ್ರೆಗಳನ್ನು ವೈದ್ಯರ ಸಲಹೆಯನುಸಾರ, ಸೋಂಕಿನ ತೀವ್ರತೆ ನೋಡಿಕೊಂಡು ಸೇವಿಸಬೇಕಾಗಬಹುದು.