ಕತ್ತೆ ಮದುವೆ, ಕಪ್ಪೆ ಮದುವೆ ಹೀಗೆ ವೆರೈಟಿ ವೆರೈಟಿ ಮದುವೆಗಳನ್ನ ನಾವು ಕೇಳಿರ್ತೆವೆ. ನೋಡಿರ್ತೆವೆ ಕೂಡಾ. ಇಂದು ನಾವು ನಿಮಗೆ ಇಂಥಹದ್ದೇ ವಿಚಿತ್ರ ಮದುವೆಯೊಂದರ ಬಗ್ಗೆ ಹೇಳೊದಕ್ಕೆ ಹೊರಟಿದ್ದೇವೆ. ಈ ಮದುವೆ ಹೆಸರು ನಾಯಿ ಮದುವೆ.
ಈ ವಿಚಿತ್ರ ಮದುವೆ ನಡೆದಿರೋದು ಬಿಹಾರ್‌ನ ಮೋತಿಹಾರಿದ ಮಜುರಹಾನ್ ಗ್ರಾಮದಲ್ಲಿ. ಗ್ರಾಮಸ್ಥರೆಲ್ಲರು ಸೇರಿ ಗಂಡು ನಾಯಿ ಹಾಗೂ ಹೆಣ್ಣು ನಾಯಿಗೆ ಮದುವೆ ಮಾಡಿಸಿದ್ದಾರೆ. ಅದು ಕೂಡಾ ಸಂಪ್ರದಾಯಬದ್ಧವಾಗಿ. ಮದುವೆ ಮಾಡಿಸಿ ಇಡೀ ಊರಿಗೆ ಭರ್ಜರಿ ಊಟ ಹಾಕಿಸಿದ್ದಾರೆ.
ಗ್ರಾಮಸ್ಥರ ಮುಂದೆ ಕಲ್ಲು ಎಂಬ ಗಂಡು ನಾಯಿ ಮತ್ತು ವಸಂತಿ ಎಂಬ ಹೆಣ್ಣು ನಾಯಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟವು. ನರೇಶ್ ಸಾಹ್ನಿ ಮತ್ತು ಸವಿತಾ ದೇವಿ ದಂಪತಿ ಸಾಕಿರುವ ನಾಯಿಯಾಗಿದೆ. ಈ ದಂತಿಗಳಿಗೆ ಮಕ್ಕಳಿಲ್ಲ, ಆದ್ದರಿಂದ ಇವರು ದೇವರಿಗೆ ಹರಕೆ ಹೊತ್ತಿಕೊಂಡಿದ್ದರು. ಒಂದು ವೇಳೆ ಹರಕೆ ತೀರಿದರೆ ನಾಯಿಗಳಿಗೆ ಮದುವೆ ಮಾಡಿಸೋದಾಗಿ ದೇವರಲ್ಲಿ ಕೇಳಿಕೊಂಡಿದ್ದರು. ಈಗ ಅವರ ಆಸೆ ಈಡೇರಿದೆ. ಸವಿತಾ ದೇವಿಯರು ಗರ್ಭಿಣಿಯಾಗಿದ್ದಾರೆ. ಆದ್ದರಿಂದ ಮೊದಲೇ ದೇವರಿಗೆ ಹರಕೆ ಹೊತ್ತಿರುವ ಹಾಗೆ ನಾಯಿಗಳಿಗೆ ಮದುವೆ ಮಾಡಿಸಿದ್ದಾರೆ.
ಪಂಡಿತರು ಸಂಪೂರ್ಣ ಹಿಂದೂ ಸಂಪ್ರದಾಯಿಕ ಹಾಡುಗಳೊಂದಿಗೆ ನಾಯಿಗಳ ಅರಿಶಿಣ ಕಾರ್ಯಕ್ರಮ ನಡೆದಿದೆ. ಈ ವೇಳೆ ಗ್ರಾಮದ ಮಹಿಳೆಯರು ವಿವಿಧ ಹಾಡುಗಳಿಗೆ ಕುಣಿದು ಕುಪ್ಪಳಿಸಿದ್ದಾರೆ. ಅಷ್ಟೇ ಅಲ್ಲ ಹೆಣ್ಣು ನಾಯಿಗೆ ಮಾಂಗಲ್ಯ ಭಾಗ್ಯ ಕೂಡಾ ಸಿಗುವಂತೆ ಮಾಡಿದ್ದಾರೆ. ಬಳಿಕ ಸಂಪೂರ್ಣ ವಿಧಿವಿಧಾನಗಳ ಪ್ರಕಾರ ಹಿಂದೂ ಸಂಪ್ರದಾಯದಂತೆ ಪಂಡಿತರು ಸಿಂಧೂರವನ್ನು ದಾನ ಮಾಡುವ ಮೂಲಕ ಶ್ವಾನ ಜೋಡಿಗಳನ್ನ ಪತಿ-ಪತ್ನಿ ಎಂದು ಘೋಷಿಸಿದ್ದಾರೆ.
ಈ ಮದುವೆಗೆ ಅಂತಾನೇ ಸ್ಪೆಷಲ್ ಆರ್ಕೆಸ್ಟ್ರಾ ವ್ಯವಸ್ಥೆ ಕೂಡಾ ಮಾಡಲಾಗಿತ್ತು. ಮದುವೆ ನಂತರ ಜೋಡಿಗಳನ್ನ ಇಡೀ ಊರಿನ ತುಂಬಾ ಮೆರವಣಿಗೆ ಮಾಡಿಸಿದ್ದಾರೆ. ಈ ವಿಶೇಷ ಮದುವೆಗೆ ಅಂತಾನೇ ಭರ್ಜರಿ ಊಟದ ವ್ಯವಸ್ಥೆಯನ್ನ ಮಾಡಲಾಗಿತ್ತು. ಈ ನಾಯಿಗಳ ಮದುವೆಗೆ ಬಂದು ಜನರು ಜೋಡಿಗೆ ಆಶೀರ್ವದಿಸಿ ಹೊಟ್ಟೆ ತುಂಬಾ ಊಟ ಮಾಡಿಕೊಂಡು ಹೋದರು. ಸೋಶಿಯಲ್ ಮೀಡಿಯಾದಲ್ಲಿ ಈಗ ಮದುವೆಯದ್ದೇ ಸದ್ದು ಹೆಚ್ಚಾಗಿದೆ.