alex Certify ಆಸ್ಪ್ರೇಲಿಯಾ ಪ್ರವಾಸದಲ್ಲಿ ಮಹತ್ತರ ನಿರ್ಧಾರ ತೆಗೆದುಕೊಂಡಿದ್ದೆ, ಆದರೆ ಆ ಶ್ರೇಯವೆಲ್ಲವೂ ಬೇರೊಬ್ಬರ ಪಾಲಾಯ್ತು ಎಂದ ರಹಾನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ಪ್ರೇಲಿಯಾ ಪ್ರವಾಸದಲ್ಲಿ ಮಹತ್ತರ ನಿರ್ಧಾರ ತೆಗೆದುಕೊಂಡಿದ್ದೆ, ಆದರೆ ಆ ಶ್ರೇಯವೆಲ್ಲವೂ ಬೇರೊಬ್ಬರ ಪಾಲಾಯ್ತು ಎಂದ ರಹಾನೆ

2020-21ರ ಬಾರ್ಡರ್‌-ಗವಾಸ್ಕರ್‌ ಟ್ರೋಫಿಯಲ್ಲಿ ವಿರಾಟ್‌ ಕೊಹ್ಲಿ ಕ್ಯಾಪ್ಟನ್‌ ಸ್ಥಾನ ಬಿಟ್ಟುಕೊಟ್ಟಾಗ ಅದನ್ನು ಸಮರ್ಥವಾಗಿ ನಿಭಾಯಿಸಿದವರು ಅಜಿಂಕ್ಯಾ ರಹಾನೆ.
ಇತ್ತೀಚೆಗೆ ಅಡಿಲೇಡ್‌ನಲ್ಲಿ ಭಾರಿ ಮುಖಭಂಗ ಅನುಭವಿಸಿದ ಬಳಿಕ ಮೆಲ್ಬರ್ನ್‌ ನಲ್ಲಿ ಅಮೋಘ 100 ರನ್‌ ಬಾರಿಸುವ ಮೂಲಕ ಭಾರತದ ಕ್ರಿಕೆಟ್‌ ತಂಡಕ್ಕೆ ಜಯದ ಹುಮ್ಮಸ್ಸು ತಂದುಕೊಟ್ಟವರು ರಹಾನೆ ಅವರೇ.

ಅವರ ಪ್ರಕಾರ ಆಸ್ಪ್ರೇಲಿಯಾ ಪ್ರವಾಸದಲ್ಲಿ ಟೀಮ್‌ ಪರವಾಗಿ ಅವರು ಮಹತ್ತರ ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ಮಾಜಿ ಉಪನಾಯಕರಾಗಿ ರಹಾನೆ ಅವರ ನಿರ್ಧಾರಗಳನ್ನು ಬೇರೊಬ್ಬ ಖ್ಯಾತ ಕ್ರಿಕೆಟಿಗ ತನ್ನದೆಂಬಂತೆ ಬಿಂಬಿಸಿಕೊಂಡು ಶ್ರೇಯ ಪಡೆದಿದ್ದಾರಂತೆ.

ಬ್ಯಾಕ್‌ಸ್ಟೆಜ್‌ ವಿತ್‌ ಬೊರಿಯಾ ಕಾರ್ಯಕ್ರಮದಲ್ಲಿ ರಹಾನೆ ಅವರು ಮನದಾಳವನ್ನು ಈ ರೀತಿ ತೆರೆದಿಟ್ಟಿದ್ದಾರೆ.

ಸೀರೆಗಾಗಿ ಮಗನ ಜೀವ ಪಣಕ್ಕಿಟ್ಟ ಮಹಿಳೆ: ಬಾಲ್ಕನಿಯಿಂದ ಸೀರೆ ತರಲು ಬಾಲಕನಿಗೆ ಬೆಡ್ ಶೀಟ್ ಕಟ್ಟಿ ಇಳಿಬಿಟ್ಟ ತಾಯಿ

’’ ಡ್ರೆಸ್ಸಿಂಗ್‌ ರೂಮ್‌ನಲ್ಲಿ ಮತ್ತು ಮೈದಾನದಲ್ಲಿ ನಿರ್ಣಯಾತ್ಮಕ ಕಾರ್ಯತಂತ್ರವನ್ನು ಹೆಣೆದಿದ್ದೆ. ಆದರೆ, ಶ್ರೇಯವೆಲ್ಲವೂ ಪರರ ಪಾಲಾಯ್ತು. ಯಾರಾದರೂ ರಹಾನೆಯ ಕ್ರಿಕೆಟ್‌ ಜೀವನ ಅಂತ್ಯವಾಯ್ತು ಎಂದು ಹೇಳಿದಾಗ ಮನಸ್ಸಿಗೆ ಬೇಜಾರಾದರು ಕೂಡ ಸುಮ್ಮನೆ ನಕ್ಕು ಹಿಂದಿರುಗಿ ಬಂದುಬಿಡುತ್ತೇನೆ. ಯಾಕೆಂದರೆ ಕ್ರಿಕೆಟ್‌ ಉಸಿರಾಡುವವರಿಗೆ ಅವರ ವೃತ್ತಿ ಎಂದಿಗೂ ಮುಕ್ತಾಯವಾಗಲ್ಲ ಎನ್ನುವ ಅರಿವು ಚೆನ್ನಾಗಿ ಇರುತ್ತದೆ. ಕ್ರಿಕೆಟ್‌ ಇಷ್ಟಪಡುವವರು ಬಹಳ ಜಾಗರೂಕರಾಗಿ ಮಾತನಾಡುತ್ತಾರೆ. ಉದ್ವೇಗದಲ್ಲಿ ಬಾಯಿಗೆ ಬಂದಂತೆ ಹರಟುವವರು ನಿಜವಾದ ಕ್ರಿಕೆಟ್‌ ಪ್ರೇಮಿಗಳಲ್ಲ, “ಎಂದು ರಹಾನೆ ಅವರು ಟೀಕಾಕಾರರಿಗೆ ತಿರುಗೇಟು ಕೊಟ್ಟಿದ್ದಾರೆ.

ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ ಕ್ರಿಕೆಟ್‌ ತಂಡವು ಕಳಪೆ ಪ್ರದರ್ಶನ ತೋರಿದೆ. ರಹಾನೆ ಅವರು ಮುಂಬಯಿನಲ್ಲಿ ರಣಜಿ ಟ್ರೋಫಿಗಾಗಿ ಹಿಂದಿರುಗಿದ್ದಾರೆ. ಮುಂಬರುವ ಶ್ರೀಲಂಕಾ ಸರಣಿಗೆ ರಹಾನೆ ಆಯ್ಕೆ ಬೇಡ ಎಂಬ ಒತ್ತಾಯ ಕೇಳಿಬರುತ್ತಿದೆ. ಹಾಗಾಗಿ ದೇಶೀಯ ಅಂಗಳದಲ್ಲಿ ತಮ್ಮ ಪ್ರದರ್ಶನ ಸಾಮರ್ಥ್ಯ‌ವನ್ನು ಸಾಬೀತುಪಡಿಸುವ ಅನಿವಾರ್ಯತೆ ರಹಾನೆಗೆ ಎದುರಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...