ವಿಹಾರ ಮುಗಿಸಿ ವಾಪಸಾದ ಮಹಿಳೆಯೊಬ್ಬರು ಸೂಟ್ಕೇಸ್ ತೆಗೆದಾಗ ಚೇಳುಗಳು ಕಂಡುಬಂದಿದ್ದು, ಆಕೆ ಗಾಬರಿ ಬಿದ್ದಿದ್ದಾರೆ.
ಆಸ್ಟ್ರಿಯಾ ನಾರ್ಟನ್ಬಾಚ್ನ ಮಹಿಳೆಯೊಬ್ಬರು ಕ್ರೊಯೇಷಿಯಾದಲ್ಲಿ ವಿಹಾರಕ್ಕೆ ತೆರಳಿದ್ದು, ವಿಹಾರ ಮುಗಿಸಿ ತಮ್ಮೂರಿಗೆ ವಾಪಸಾದ ನಂತರ ತಮ್ಮ ಸೂಟ್ಕೇಸ್ನಲ್ಲಿ 18 ಜೀವಂತ ಚೇಳುಗಳು ಸೇರಿಕೊಂಡಿದ್ದನ್ನು ನೋಡಿ ಆಘಾತ ಅನುಭವಿಸಿದರು.
ತಾಯಿ ಚೇಳು ಮತ್ತು ಮರಿ ಚೇಳು ಸೇರಿ ಇವು 18 ರ ಸಂಖ್ಯೆಯಲ್ಲಿದ್ದವು ಎಂದು ಗುರುತಿಸಿದ್ದು, ಆಕೆ ತಕ್ಷಣ ಪ್ರಾಣಿ ರಕ್ಷಣಾ ಸೇವೆಗೆ ಕರೆ ಮಾಡಿ ನೆರವು ಬಯಸಿದರು.
ತಾಯಿ ಚೇಳು ಮತ್ತು ಮರಿ ಚೇಳುಗಳ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪ್ರಾಣಿ ರಕ್ಷಣಾ ಸೇವೆಯ ತಂಡವು, ಪ್ರಸ್ತುತ ಅವು ಲಿಂಜ್ ಪ್ರಾಣಿಗಳ ಆಶ್ರಯದಲ್ಲಿವೆ ಎಂದು ಹೇಳಿದೆ. ಈಗ ಅವುಗಳನ್ನುಕ್ರೊಯೇಷಿಯಾಕ್ಕೆ ಹಿಂದಿರುಗಿಸಲು ಯೋಜಿಸಿದ್ದಾರೆ.
ಈ ಹಿಂದೆ ಜೂನ್ 30 ರಂದು ಕ್ರೊಯೇಷಿಯಾದಲ್ಲಿ ತನ್ನ ರಜೆಯ ನಂತರ ಲಿಂಜ್ನ ಮಹಿಳೆಯೊಬ್ಬರು ತಮ್ಮ ಅಪಾರ್ಟ್ಮೆಂಟ್ನಲ್ಲಿ ಚೇಳನ್ನು ಗುರುತಿಸಿದ್ದರು. ಕುತೂಹಲಕಾರಿ ಎಂದರೆ ಆ ಮಹಿಳೆ ತನ್ನ ರಜೆಯಿಂದ ಹಿಂದಿರುಗಿದ ಮೂರು ವಾರಗಳ ನಂತರ ಗುರುತಿಸಿದ್ದರು.
https://www.facebook.com/Tierhilfegusental/posts/755016182586623