ಬೆಂಗಳೂರು : ರ್ಯಾಪರ್ ಸಿಂಗರ್ ಚಂದನ್ ಶೆಟ್ಟಿ ಹೊಸ ವಿವಾದದಲ್ಲಿ ಸಿಲುಕಿದ್ದು, ‘ಕಾಟನ್ ಕ್ಯಾಂಡಿ’ ಟ್ಯೂನ್ ಕದ್ದ ಆರೋಪ ಕೇಳಿಬಂದಿದೆ.
ಹೌದು. ಚಂದನ್ ಶೆಟ್ಟಿ ವಿರುದ್ಧ ಹೊಸ ಆರೋಪವೊಂದು ಕೇಳಿಬಂದಿದ್ದು, ‘ಚಂದನ್ ಶೆಟ್ಟಿ ವಿರುದ್ಧ ಕೃತಿಚೌರ್ಯದ ಆರೋಪ ಕೇಳಿಬಂದಿದೆ. ಚಂದನ್ ಶೆಟ್ಟಿ ‘ನಾನು 6 ವರ್ಷದ ಹಿಂದೆಯೇ ಮಾಡಿದ ಟ್ಯೂನ್ ಕದ್ದಿದ್ದಾರೆ’ ಎಂದು ಯುವರಾಜ್ ವೈಬುಲ್ ಆರೋಪಿಸಿದ್ದಾರೆ.
ನಾನು ಚಂದನ್ ಶೆಟ್ಟಿ ಅವರ ವಿರುದ್ಧ ಕಾಪಿರೈಟ್ ಕೇಸ್ ಹಾಕುವೆ ಎಂದು ಯುವರಾಜ್ ವೈಬುಲ್ ಹೇಳಿದ್ದಾರೆ. ಹೊಸ ವರ್ಷಕ್ಕೆ ರಿಲೀಸ್ ಆದ ಚಂದನ್ ಶೆಟ್ಟಿಯ ಕಾಟನ್ ಕ್ಯಾಂಡಿ ಹಾಡು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದೆ. ಈ ಹಾಡಿಗೆ ಇದೀಗ ಸಂಕಷ್ಟ ಎದುರಾಗಿದೆ.
ಆದರೆ ಆ ರೀತಿ ಆಗಿಲ್ಲ, ನಾನು ಕಷ್ಟಪಟ್ಟು ಟ್ಯೂನ್ ಮಾಡಿದ್ದೇನೆ. ನಾನು ಯಾವುದೇ ಟ್ಯೂನ್ ಕಾಪಿ ಮಾಡಿಲ್ಲ.ಅವರು ಕೇಸ್ ಹಾಕಿದ್ದರೆ ನಾನು ಕೂಡ ದಾಖಲೆಗಳನ್ನು ಇಟ್ಟುಕೊಂಡು ಹೋರಾಟ ಮಾಡುತ್ತೇನೆ ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.