alex Certify ರಾಜ್ಯ ಸರ್ಕಾರದಿಂದ ಮಹತ್ವದ ಕ್ರಮ : ಇನ್ಮುಂದೆ `PDO’ ಗಳಿಗೆ ‘ಬಯೋ ಮೆಟ್ರಿಕ್’ ಹಾಜರಾತಿ ಕಡ್ಡಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯ ಸರ್ಕಾರದಿಂದ ಮಹತ್ವದ ಕ್ರಮ : ಇನ್ಮುಂದೆ `PDO’ ಗಳಿಗೆ ‘ಬಯೋ ಮೆಟ್ರಿಕ್’ ಹಾಜರಾತಿ ಕಡ್ಡಾಯ

ಮಂಗಳೂರು : ಮುಂದಿನ ವರ್ಷದಿಂದ ಪಿಡಿಒಗಳ ಕೌನ್ಸೆಲಿಂಗ್‌ ಮಾಡಿ, ಪಂಚಾಯತಿ  ಪರವಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುತ್ತೇವೆ. ಪಿಡಿಒಗಳಿಗೆ ಹೆಚ್ಚಿನ ಹೊಣೆಗಾರಿಕೆ ನೀಡಲಿದ್ದೇವೆ. ಪಿಡಿಒಗಳಿಗಾಗಿ ಬಯೋ ಮೆಟ್ರಿಕ್‌ ವ್ಯವಸ್ಥೆ ಜಾರಿಗೆ ತರಲು ಸಿದ್ದತೆ ಮಾಡಿಕೊಂಡಿದ್ದು ಹಾಜರಾತಿಗೆ ಅನುಗುಣವಾಗಿ ಸಂಬಳ ನೀಡಲಿದ್ದೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

 ಮಂಗಳೂರಿನ ಪುರಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಪಂಚಾಯತ್ ರಾಜ್ ಪ್ರತಿನಿಧಿಗಳ ಜಿಲ್ಲಾ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ಪ್ರಜಾಪ್ರಭುತ್ವದ ಮೂಲ ಘಟಕವೇ ಈ ಪಂಚಾಯತ್‌ ರಾಜ್‌ ವ್ಯವಸ್ಥೆಯಾಗಿದೆ. ಪ್ರಜಾಪ್ರಭುತ್ವ ಯಾವ ರೀತಿ ಕೆಲಸ ಮಾಡುತ್ತಿದೆ ಎಂಬುದು ನಮಗೆ ಇಲ್ಲಿ ಕಾಣುತ್ತದೆ. ಬುದ್ದ, ಬಸವಣ್ಣ, ನಾರಾಯಣಗುರುಗಳ ತತ್ವದ ಮೇಲೆ ಈ ಪಂಚಾಯತ್‌ ರಾಜ್‌ ವ್ಯವಸ್ಥೆ ಸ್ಥಾಪನೆ ಆಗಿದೆ ಎಂದರು.

ಶ್ರೀ ರಾಜೀವ್ ಗಾಂಧಿ ಅವರು ಸಂಸತ್ ನಲ್ಲಿ ಭಾಷಣ ಮಾಡಿರುವುದನ್ನು ನಮ್ಮ ಯುವಕರು ಕೇಳಬೇಕು. ನಮ್ಮ  ದೇಶ  21ನೇ ಶತಮಾನದಲ್ಲಿ ಮುಂದುವರೆದ ರಾಷ್ಟ್ರವಾಗಬೇಕು, ವಿಶ್ವದಲ್ಲಿ ಅಗ್ರಸ್ಥಾನ ಪಡೆಯಬೇಕು ಎಂದಾದರೆ, ಕೇವಲ ಸಂಸತ್ ನಲ್ಲಿ ಮಾಡುವ ನೀತಿಯಿಂದ ಅಷ್ಟೇ ಅಲ್ಲ, ನಮ್ಮ ಹಳ್ಳಿಗಳು, ಸಾಮಾಜಿಕವಾಗಿ, ಆರ್ಥಿಕವಾಗಿ ಮುಂದುವರೆದಾಗ ಹಾಗೂ ಸಶಕ್ತರಾದಾಗ ಮಾತ್ರ ದೇಶ ಮುಂದುವರೆಯಲು ಸಾಧ್ಯ ಎಂಬುವುದನ್ನು ಅವರು ಅಂದೇ ಸ್ಪಷ್ಟವಾಗಿ ಹೇಳಿದ್ದರು.

ನಾವು ವಿಧಾನಸೌಧದಿಂದ ಕೆಳಗಿಳಿದು ಮಂಗಳೂರಿಗೆ ಬಂದು ನಿಮ್ಮ ಪಂಚಾಯತಿಗಳ ವ್ಯವಸ್ಥೆಯ ಬಗ್ಗೆ ನಿಮ್ಮಿಂದ ಕೇಳಿದಾಗ ಮಾತ್ರ ಒಳ್ಳೆಯ ನೀತಿಗಳನ್ನು ರೂಪಿಸಲು ಸಾಧ್ಯವಾಗುತ್ತದೆ. ಏಕೆಂದರೆ ನಮ್ಮದು ಆಳುವ ಸರ್ಕಾರವಲ್ಲ, ಆಲಿಸುವ ಸರ್ಕಾರ. ಮುಂದಿನ ವರ್ಷದಿಂದ ಪಿಡಿಒಗಳ ಕೌನ್ಸೆಲಿಂಗ್‌ ಮಾಡಿ, ಪಂಚಾಯತಿ  ಪರವಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುತ್ತೇವೆ. ಪಿಡಿಒಗಳಿಗೆ ಹೆಚ್ಚಿನ ಹೊಣೆಗಾರಿಕೆ ನೀಡಲಿದ್ದೇವೆ. ಪಿಡಿಒಗಳಿಗಾಗಿ ಬಯೋ ಮೆಟ್ರಿಕ್‌ ವ್ಯವಸ್ಥೆ ಜಾರಿಗೆ ತರಲು ಸಿದ್ದತೆ ಮಾಡಿಕೊಂಡಿದ್ದು ಹಾಜರಾತಿಗೆ ಅನುಗುಣವಾಗಿ ಸಂಬಳ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.

ಪಂಚಾಯತ್‌-2 ಎಂಬ ಹೊಸ ತಂತ್ರಜ್ಞಾನವನ್ನು ಶೀಘ್ರದಲ್ಲೇ ಆರಂಭಿಸುತ್ತಿದ್ದೇವೆ. ತೆರಿಗೆ ಹೆಚ್ಚಳ, ಜಿಲ್ಲಾ ಪಂಚಾಯತ್ ಸಭೆಗಳು, ಪಿಡಿಒಗಳೊಂದಿಗೆ ಸಭೆಗಳು ಸೇರಿದಂತೆ ಎಲ್ಲಾ ಪರೀಶೀಲನೆಗೆ ಈ ತಂತ್ರಜ್ಞಾನ ವ್ಯವಸ್ಥೆಯಿಂದ ಅನುಕೂಲವಾಗಲಿದೆ.  ಮಲೆನಾಡು, ಕರಾವಳಿ ಭಾಗದಲ್ಲಿ ಅಂತರ್ಜಲ ಮಟ್ಟ ಕುಸಿತವಾಗಿದೆ. ಈ ಸಮಸ್ಯೆಯ ನಿವಾರಣೆಗೆ ನಾವು ವಿಶೇಷ ವಾಟರ್ ಆಡಿಟ್ ಸಮಿತಿ ರಚಿಸಿ ಪರಿಹಾರಕ್ಕೆ ಮುಂದಾಗಿದ್ದು, ಈ ಮೂಲಕ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಸಂವಿಧಾನದ  ಪರವಾಗಿರುವ ಸರ್ಕಾರ ಬಂದಿದೆ. ಬಾಬಾ ಸಾಹೇಬ್‌ ಅಂಬೇಡ್ಕರ್, ಬುದ್ಧ, ಗುರು ಬಸವಣ್ಣ, ನಾರಾಯಣಗುರುಗಳ ತತ್ವಗಳನ್ನು ಉಳಿಸಿ ಬೆಳೆಸುವ, ನಿಮ್ಮ ಸರ್ಕಾರ ಬಂದಿದೆ. ಉತ್ತಮ ಜನಪರ ವ್ಯವಸ್ಥೆ ನಿರ್ಮಾಣಕ್ಕೆ ನಿಮ್ಮೆಲ್ಲರ ಸಹಕಾರ ಬೇಕೆಂದು ಅತ್ಯವಶ್ಯಕ ಎಂದು ತಿಳಿಸಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...