ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯವು ಏಪ್ರಿಲ್ ತಿಂಗಳನ್ನು ದಲಿತ ಇತಿಹಾಸದ ತಿಂಗಳು ಎಂದು ಗುರುತಿಸಿದೆ.
ಬ್ರಿಟಿಷ್ ಕೊಲಂಬಿಯಾ ಸರ್ಕಾರದ ಅಧಿಕೃತ ವೆಬ್ಸೈಟ್ ಪ್ರಕಾರ, ನ್ಯೂ ಡೆಮಾಕ್ರಟಿಕ್ ಪಾರ್ಟಿ ನೇತೃತ್ವದ(NDP) ಸರ್ಕಾರವು ಏಪ್ರಿಲ್ 2022 ಅನ್ನು ದಲಿತ ಇತಿಹಾಸದ ತಿಂಗಳು ಎಂದು ಘೋಷಿದೆ. ದಲಿತರು ಅಥವಾ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳ ಇತಿಹಾಸದಲ್ಲಿ ಪ್ರಮುಖ ವ್ಯಕ್ತಿಗಳು ಮತ್ತು ಘಟನೆಗಳನ್ನು ನೆನಪಿಟ್ಟುಕೊಳ್ಳಲು ದಲಿತ ಇತಿಹಾಸ ತಿಂಗಳನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ.
ದಲಿತ ಐಕಾನ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ತಿಂಗಳು ಏಪ್ರಿಲ್ ಆಗಿರುವುದರಿಂದ, ಜಗತ್ತಿನಾದ್ಯಂತ ದಲಿತರಿಗೆ ಇದು ಮಹತ್ವದ್ದಾಗಿದೆ.
ಜ್ಯೋತಿರಾವ್ ಫುಲೆ, ಮಂಗು ರಾಮ್ ಮುಗೋವಾಲಿಯಾ ಮತ್ತು ಸಂತ ರಾಮ್ ಉದಾಸಿ ಅವರಂತಹ ಇತರ ಎತ್ತರದ ದಲಿತ ನಾಯಕರ ಜನ್ಮ ಮತ್ತು ಮರಣ ವಾರ್ಷಿಕೋತ್ಸವದ ಕಾರಣದಿಂದ ಈ ತಿಂಗಳು ಸಮುದಾಯಕ್ಕೆ ಮಹತ್ವದ್ದಾಗಿದೆ ಎಂದು ಪರಿಗಣಿಸಲಾಗಿದೆ.
ಏಪ್ರಿಲ್ ದಲಿತ ಸಮುದಾಯಗಳಿಗೆ ಮಹತ್ವದ ತಿಂಗಳು ಏಕೆಂದರೆ ಇದು ಬಿಆರ್ ಅಂಬೇಡ್ಕರ್, ಜ್ಯೋತಿರಾವ್ ಫುಲೆ, ಮಂಗು ರಾಮ್ ಮುಗೋವಾಲಿಯಾ ಮತ್ತು ಸಂತ ರಾಮ್ ಉದಾಸಿಯಂತಹ ವ್ಯವಸ್ಥಿತ ಜಾತಿ ತಾರತಮ್ಯದ ವಿರುದ್ಧದ ಚಳವಳಿಯಲ್ಲಿ ಪ್ರಮುಖ ದಲಿತ ನಾಯಕರು ಮತ್ತು ಸಮಾಜ ಸುಧಾರಕರ ಜನ್ಮ ಮತ್ತು ಮರಣದ ವಾರ್ಷಿಕೋತ್ಸವಗಳನ್ನು ಸ್ಮರಿಸುತ್ತದೆ ಎಂದು ಸರ್ಕಾರ ಹೇಳಿದೆ.
ಕಳೆದ ವರ್ಷ ಈ ಪ್ರಾಂತ್ಯದಲ್ಲಿ ಅಂಬೇಡ್ಕರ್ ಅವರ 130 ನೇ ಜನ್ಮದಿನವನ್ನು ಏಪ್ರಿಲ್ 14 ರಂದು ‘ಸಮಾನತೆ ದಿನ’ ಎಂದು ಆಚರಿಸಲಾಯಿತು.