
ಮಿಲಿಟರಿ ಖಾಕಿ ಸಮವಸ್ತ್ರ ಧರಿಸಿದ ಮಹಿಳೆಯರು ಮೆಕ್ಕಾದಲ್ಲಿ ಭದ್ರತಾ ಪರಿಸ್ಥಿತಿಯನ್ನ ಮೇಲ್ವಿಚಾರಣೆ ಮಾಡುತ್ತಿರುವ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿದೆ.
ಸೊಂಟದಷ್ಟು ಉದ್ದ ಬರುವ ಜಾಕೆಟ್, ಸಡಿಲವಾದ ಪ್ಯಾಂಟ್ ಹಾಗೂ ಕಪ್ಪು ಬಣ್ಣದ ಟೊಪ್ಪಿಯನ್ನ ಧರಿಸಿದ್ದಾರೆ. ಈ ಫೋಟೊಗಳು ಟ್ವಿಟರ್ನಲ್ಲಿ ವ್ಯಾಪಕವಾಗಿ ಶೇರ್ ಮಾಡಲಾಗಿದ್ದು ಈ ಫೋಟೋ ನೋಡಿದ ಟ್ವೀಟಿಗರು ಮಹಿಳಾ ಸಬಲೀಕರಣದತ್ತ ಮಹತ್ವದ ಹೆಜ್ಜೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೊರೊನಾ ಮಾರ್ಗಸೂಚಿಗಳನ್ನ ಗಮನದಲ್ಲಿರಿಸಿ ಲಸಿಕೆಯನ್ನ ಸ್ವೀಕರಿಸಿದ ಯಾತ್ರಿಕರು ಹಜ್ ಯಾತ್ರೆಗಾಗಿ ಮೆಕ್ಕಾಗೆ ಆಗಮಿಸಿದ್ದರು. ಕೊರೊನಾ ಲಸಿಕೆಯನ್ನ ಸ್ವೀಕರಿಸಿದ 10 ಸಾವಿರ ಮುಸ್ಲಿಂ ಯಾತ್ರಿಕರು ಭಾನುವಾರ ಮೆಕ್ಕಾ ತಾಣಕ್ಕೆ ಆಗಮಿಸಿದ್ರು. ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡುವ ಮೂಲಕ ಭಕ್ತರು ಇಸ್ಲಾಂ ಪವಿತ್ರ ತಾಣದಲ್ಲಿ ಸುತ್ತಾಡಿದ್ದಾರೆ.