alex Certify 75 ವರ್ಷದ ಇತಿಹಾಸದಲ್ಲಿ ಮಹಾರಾಷ್ಟ್ರದ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಮೊದಲ ಮಹಿಳಾ ಬಸ್ ಡ್ರೈವರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

75 ವರ್ಷದ ಇತಿಹಾಸದಲ್ಲಿ ಮಹಾರಾಷ್ಟ್ರದ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಮೊದಲ ಮಹಿಳಾ ಬಸ್ ಡ್ರೈವರ್

ಮಹಿಳೆಯರು ಇಂದು ಪುರುಷರಿಗೆ ಸರಿಸಮಾನರಾಗಿ ಎಲ್ಲ ಕ್ಷೇತ್ರಗಳಲ್ಲೂ ದುಡಿಯುತ್ತಿದ್ದಾರೆ. ಒಂದು ಕಾಲದಲ್ಲಿ ಪುರುಷರಷ್ಟೇ ಮಾಡುತ್ತಿದ್ದ ಬಸ್ ಚಾಲನೆ ಕೆಲಸದಲ್ಲಿ ಇದೀಗ ಮಹಿಳೆಯರು ಸಹ ಸೈ ಎನಿಸಿಕೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ಮಾಧವಿ ಸಾಳ್ವೆ ಎಂಬ ಮಹಿಳೆ ರಾಜ್ಯ ರಸ್ತೆ ಸಾರಿಗೆ ಇಲಾಖೆಯಲ್ಲಿ ಬಸ್ ಚಲಾಯಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವೈರಲ್ ವೀಡಿಯೊದಲ್ಲಿ ಅವರು ಸಿನ್ನಾರ್-ನಾಸಿಕ್ ಮಾರ್ಗದ ಬಸ್ ಚಾಲನೆ ಮಾಡುತ್ತಿದ್ದಾರೆ. ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ (MSRTC) ಬಸ್ ಓಡಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಪಡೆದಿರುವ ಅವರು ತಮ್ಮ ಕಾರ್ಯದ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾರೆ.

“ನಾನು ಯಾವಾಗಲೂ ಬಸ್‌ಗಳನ್ನು ಓಡಿಸುವ ಉತ್ಸಾಹವನ್ನು ಹೊಂದಿದ್ದೇನೆ. ನಾನು MSRTC ಅವಕಾಶದ ಬಗ್ಗೆ ಕೇಳಿದಾಗ ನನ್ನ ಕುಟುಂಬದಿಂದ ಬೆಂಬಲಕ್ಕಾಗಿ ವಿನಂತಿಸಿದೆ. ನನ್ನ ಪ್ರಯತ್ನದಲ್ಲಿ ನನಗೆ ಸಹಾಯ ಮಾಡಲು ಅವರು ಉತ್ಸುಕರಾಗಿದ್ದರೂ ನನ್ನ ಕೆಲವು ಸ್ನೇಹಿತರು ಮತ್ತು ಸಂಬಂಧಿಕರು ನನ್ನ ಯಶಸ್ಸಿನ ಬಗ್ಗೆ ಸಂಶಯ ಹೊಂದಿದ್ದರು.” ಎಂದಿದ್ದಾರೆ.

ತನ್ನ 75 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ರಾಜ್ಯ-ಚಾಲಿತ ಸಾರ್ವಜನಿಕ ಸಾರಿಗೆ ಸಂಸ್ಥೆ (MSRTC) 28 ಮಹಿಳಾ ಚಾಲಕರನ್ನು ನೇಮಿಸಿಕೊಂಡಿದೆ. ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡಲು ಮಹಿಳೆಯರು ಮುಂದೆ ಬರುತ್ತಿರುವುದು ಇದೇ ಮೊದಲಲ್ಲ. ವಸಂತಕುಮಾರಿ ಏಷ್ಯಾದ ಮೊದಲ ಮಹಿಳಾ ಬಸ್ ಚಾಲಕಿಯಾಗಿದ್ದು, ತನ್ನ ಕುಟುಂಬವನ್ನು ಬೆಂಬಲಿಸಲು ಬಸ್‌ಗಳನ್ನು ಚಾಲನೆ ಮಾಡಲು ನಿರ್ಧರಿಸಿದರು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...